Spiritual: ಶುಕ್ರನ ಆರಾಧನೆ ಮಾಡಲು ಸರಿಯಾದ ಕ್ರಮ ಯಾವುದು ? ಶುಕ್ರನಿಗೆ ಈ ಬಣ್ಣದ ವಸ್ತ್ರ ಅತ್ಯಂತ ಪ್ರಿಯ
ಶುಕ್ರನು ಶುಭ್ರನಾದ್ದರಿಂತ ಅವನನ್ನು ಬಿಳಿಬಣ್ಣದ ಮಂಡಲದಲ್ಲಿ ಪಂಚಕೋಣಾಕಾರದಲ್ಲಿ ಪೂಜಿಸಬೇಕು. (ಐದು ಕೋಣೆಗಳಿರುವ ಬಿಂಬಕ್ಕೆ ಪಂಚಕೋಣ ಮಂಡಲ ಎಂದು ಹೆಸರು) . ಇವನಿಗೆ ಬಿಳಿಬಣ್ಣದ ವಸ್ತ್ರ ಅತ್ಯಂತ ಪ್ರಿಯ. ಶುಕ್ರನ ಕುರಿತಾಗಿ ದಾನ ನೀಡುವಾಗ ಬಿಳಿಬಣ್ಣದ ವಸ್ತ್ರವನ್ನು ಶುಭ್ರವಿರುವ ವ್ಯಕ್ತಿಗಳಿಗೇ ನೀಡಬೇಕು. ಇಲ್ಲವಾದಲ್ಲಿ ಅಶುಭದ ಸಾಧ್ಯತೆ ಹೆಚ್ಚು.
ಶುಕ್ರದಶೆ ಅಂದರೆ ಎಲ್ಲರ ಮುಖವೂ ಅರಳುತ್ತದೆ. ಶುಕ್ರ ಅಂದರೆ ಲಾಭ ನೀಡುವಾತ ಎಂಬ ಭಾವ ನಮ್ಮಲ್ಲಿ ಗಾಢವಾಗಿ ಬೇರೂರಿದೆ. ಆದರೆ ನಾವು ತಿಳಿಯಲೇ ಬೇಕಾದ ಶುಭ್ರಸತ್ಯವೊಂದಿದೆ ಕೇವಲ ಶುಕ್ರನೊಬ್ಬನೇ ಅಲ್ಲ ಉಳಿದ ಗ್ರಹರ ಫಲವೂ ಶುಕ್ರನಷ್ಟೇ ಉತ್ತಮವಿದೆ. ಆದರೆ ಕರ್ಮಾರ್ಜಿತ ಫಲದಿಂದ ಮತ್ತು ಅವುಗಳು ನಮ್ಮ ಕುಂಡಲಿಯಲ್ಲಿ ಅಶುಭ ಸ್ಥಾನದಲ್ಲಿರುವುದರ ಕಾರಣ ಶುಭಫಲದ ಪ್ರಮಾಣ ಏರುಪೇರಾಗಿ ಕಂಡುಬರುತ್ತದೆ. ಅದೇ ರೀತಿ ಶುಕ್ರನು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿರದಿದ್ದರೆ ಶುಕ್ರದಶೆಯಲ್ಲೂ ಕಷ್ಟವುಂಟಾಗುವ ಸಾಧ್ಯತೆಗಳಿವೆ. ಗ್ರಹರಿಗೆ ಒಂದೊಂದು ಕಾರಕತ್ವವನ್ನು ಹೇಳಲಾಗಿದೆ. ಅದರಲ್ಲಿ ಶುಕ್ರನು ರೇತಃಕಾರಕನು. ಹಾಗಯೇ ಇವನು ಉತ್ತಮ ವರ್ಣದವನು. ಅಂದರೆ ಸಾತ್ವಿಕ ಗುಣವುಳ್ಳ ಗ್ರಹವೆಂದರ್ಥ. ಇವನಿಗೆ ಬಿಳಿಯ ಬಣ್ಣ ಅತ್ಯಂತ ಪ್ರಿಯ. ಉತ್ತಮ ಸಂತಾನ ಪ್ರಾಪ್ತವಾಗಲು ಶುಕ್ರನ ಅನುಗ್ರಹ ಅತ್ಯವಶ್ಯಕ. ಏಕೆಂದರೆ ಇವನ ಅಧಿದೇವತೆ ಇಂದ್ರಾಣೀ ಅಂದರೆ ಇಂದ್ರನ ಪತ್ನಿ. ತಾವುಗಳು ಗ್ರಹಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಆದರೆ ವಿವಾಹದಲ್ಲಿ ಕನ್ಯೆಯು ಇಂದ್ರಪತ್ನಿಯನ್ನು ಪ್ರಾರ್ಥಿಸುವ ಮಂತ್ರವೊಂದಿದೆ
ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯಭಾಮಿನೀ |
ವೈವಾಹಂ ಭಾಗ್ಯಮಾರೋಗ್ಯಂ ಪುತ್ರಲಾಭಂ ಚ ದೇಹಿಮೇ ||
ಇಲ್ಲಿ ಕನ್ಯೆಯು ಹೇ ಇಂದ್ರಪತ್ನಿಯೇ ನಿನಗೆ ನನ್ನ ಪ್ರಣಾಮಗಳು , ನೀನು ದೇವೇಂದ್ರ ಅತ್ಯಂತ ಪ್ರೀತಿಪಾತ್ರಳು. ಅಂತಹ ನೀನು ನನಗೆ ವಿವಾಹ ಭಾಗ್ಯವನ್ನು, ಆರೋಗ್ಯವನ್ನು ಹಾಗೆಯೇ ಒಳ್ಳೆಯ ಸಂತಾನಭಾಗ್ಯವನ್ನು ಕರುಣಿಸು ಎಂದು ಕಲಶಕ್ಕೆ ಪೂಜಿಸಿ ಪ್ರಾರ್ಥಿಸುವ ಒಂದು ವಿಧಿಯಿದೆ. ಆದರೇ ಇಂದು ಇಂತಹ ಸೂಕ್ಷ್ಮ ವಿಚಾರಗಳನ್ನು ನಾವು ಸರಿಯಾಗಿ ಅರ್ಥೈಸದೇ ಮದುವೆಯೆಂಬ ಮಂಗಳ ಕಾರ್ಯವನ್ನು ಆಡಂಬರದಿಂದ ಮಾಡಿ ಶುಕ್ರನ ಅಧಿದೇವತೆಯಾದ ಇಂದ್ರಾಣಿಯ ಅನುಗ್ರಹದಿಂದ ವಂಚಿತರಾಗಿ ಸರಿಯಾದ ಸಂತಾನ ಪಡೆಯಲಾಗದೇ ದುಃಖವನ್ನು ಅನುಭವಿಸುತ್ತಿದ್ದೇವೆ ಅಲ್ಲವೇ? ನಮ್ಮ ಧಾರ್ಮಿಕ ಹಾದಿಯೇ ಅಂತಹದು ಅದರಲ್ಲಿ ನಂಬಿಕೆಯಿಟ್ಟು , ಸರಿಯಾದ ವ್ಯಕ್ತಿಗಳಿಂದ ಆಯಾ ಶಕ್ತಿಗೆ ಭಾವಪೂರ್ಣ ಸೇವೆ ಸಲ್ಲಿದೆವೂ ಅಂತಾದರೆ ಅಥವಾ ಸ್ವತಃ ನಾವೇ ಆರಾಧನೆ ಮಾಡಿದೆವೂ ಅಂತಾದರೆ “ಭಾವಗ್ರಾಹಿ”ಯಾದ ಭಗವಂತ ಆರಾಧಿಸಿದ ಶಕ್ತಿಯ ರೂಪದಲ್ಲಿ ಅನುಗ್ರಹಿಸುವುದು ನಿಶ್ಚಿತ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ
ಶುಕ್ರನು ಶುಭ್ರನಾದ್ದರಿಂತ ಅವನನ್ನು ಬಿಳಿಬಣ್ಣದ ಮಂಡಲದಲ್ಲಿ ಪಂಚಕೋಣಾಕಾರದಲ್ಲಿ ಪೂಜಿಸಬೇಕು. (ಐದು ಕೋಣೆಗಳಿರುವ ಬಿಂಬಕ್ಕೆ ಪಂಚಕೋಣ ಮಂಡಲ ಎಂದು ಹೆಸರು) . ಇವನಿಗೆ ಬಿಳಿಬಣ್ಣದ ವಸ್ತ್ರ ಅತ್ಯಂತ ಪ್ರಿಯ. ಶುಕ್ರನ ಕುರಿತಾಗಿ ದಾನ ನೀಡುವಾಗ ಬಿಳಿಬಣ್ಣದ ವಸ್ತ್ರವನ್ನು ಶುಭ್ರವಿರುವ ವ್ಯಕ್ತಿಗಳಿಗೇ ನೀಡಬೇಕು. ಇಲ್ಲವಾದಲ್ಲಿ ಅಶುಭದ ಸಾಧ್ಯತೆ ಹೆಚ್ಚು. ಶುಕ್ರವಾರದಂದು ಬಿಳಿಬಣ್ಣದ ರಂಗವಲ್ಲಿ ಬರೆದು ಅದರ ಮೇಲೆ ತುಪ್ಪದೀಪವನ್ನು ಬೆಳಗಿಸಿ ಶುಕ್ರಮಂತ್ರ ಅಥವಾ ಮೇಲೆ ಹೇಳಿದ ಇಂದ್ರಾಣೀ ಸ್ತುತಿ ಹಾಗೆಯೇ ನಿಮಗೆ ತಿಳಿದಿರುವ ಲಕ್ಷ್ಮೀದೇವಿಯ ಸ್ತುತಿಯನ್ನು ಮಾಡಿದರೆ ಶುಕ್ರಾನುಗ್ರಹ ನಿಶ್ಚಿತ. ಶುಕ್ರನ ಲಕ್ಷಣ ಹೇಳುವಂತೆ “ಶುಕ್ರಶ್ಚಷ್ಟಿಪ್ರದಃ” ಅಂದರೆ ಶುಕ್ರನು ಒಳ್ಳೆಯ ಮಾರ್ಗವನ್ನು ಕಾಣುವಂತೆ ಮಾಡುವವನು ಎಂದು ತಾತ್ಪರ್ಯ. ಶುಕ್ರನಿಗೆ ಔದುಂಬರ (ಅತ್ತಿ ಮರ) ಮರವನ್ನು ಹೇಳಿದ್ದಾರೆ. ಮತ್ತು ಅದೇ ಮರದ ಸಮಿಧೆಯನ್ನು ಹೋಮದಲ್ಲಿ ಹವಿಸ್ಸಾಗಿ ಸಮರ್ಪಿಸುವುದು ಯೋಗ್ಯವೆಂದು ಶಾಸ್ತ್ರ ಹೇಳುತ್ತದೆ. “ಸಂಪತ್ತಿಗಾಗಿ ಮತ್ತು ಸಂತಾನಕ್ಕಾಗಿ ಅರ್ಥಾತ್ ಎರಡು ಸಕಾರಗಳ ಸಾಕಾರಕ್ಕಾಗಿ” ಸರಿಯಾದ ಕ್ರಮದಲ್ಲಿ ಶುಕ್ರನಆರಾಧನೆ ಮಾಡಿದರೆ ಉತ್ತಮ ಎಂದು ಹೇಳುತ್ತಾ ಶುಕ್ರನ ಮಂತ್ರದೊಂದಿಗೆ ಈ ಚಿಂತನೆ ಮುಗಿಸೋಣ.
ಹಿಮಕುಂದತುಷಾರಾಭಂ ದೈತ್ಯಾನಾಂ ಪರಮಂ ಗುರುಂ |
ಸರ್ವಶಾಸ್ತ್ರಪ್ರದಾತಾರಂ ಭಾರ್ಗವಂ ಪ್ರಣಮಾಮ್ಯಹಂ ||
ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು, S.R.B.S.S College ಹೊನ್ನಾವರ
kkmanasvi@gamail.com
Published On - 9:57 am, Mon, 27 June 22