Sign In

By signing in or creating an account, you agree with Associated Broadcasting Company's Terms & Conditions and Privacy Policy.

Amavasya: ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ

ಸಾಮಾನ್ಯರಿಗಿಂತ ಅಮವಾಸ್ಯೆಯಂದು ಜನಿಸಿದವರು ಜೀವನದಲ್ಲಿ ಖಿನ್ನತೆ ಮತ್ತು ಮಾನಸಿಕ ಆತಂಕವನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅಂತವರು ಪ್ರತಿದಿನ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು.

Amavasya: ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ
ಅಮಾವಾಸ್ಯೆ
Follow us
TV9 Web
| Updated By: ಆಯೇಷಾ ಬಾನು

Updated on: Jun 27, 2022 | 6:30 AM

ಹಿಂದೂ ಧರ್ಮದಲ್ಲಿ, ಅಮವಾಸ್ಯೆ(Amavasya) ಮತ್ತು ಪೂರ್ಣಿಮಾ(Purnima) ದಿನಗಳು ಬಹಳ ವಿಶೇಷವಾದ ಮಹತ್ವ ಹೊಂದಿವೆ. ಆದ್ರೆ ಅಮಾವಾಸ್ಯೆಯ ದಿನದಂದು ಮಕ್ಕಳು ಹುಟ್ಟಿದರೆ ಅಶುಭವೆಂದು ಕೆಲವರು ನಂಬುತ್ತಾರೆ. ಆದ್ರೆ ಅಮಾವಾಸ್ಯೆಯಂದು ಜನನವು ಅಶುಭವಲ್ಲ(Omen). ಆದರೆ, ಆ ದಿನ ಜನಿಸಿದವರು ತಮ್ಮ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತೆ. ಹೆಚ್ಚು ಅದೃಷ್ಟವನ್ನು ಪಡೆಯಲು ಅವರು ಹೆಚ್ಚು ಆಧ್ಯಾತ್ಮಿಕ ಮತ್ತು ದಾನಶೀಲರಾಗಬೇಕು. ಅಮವಾಸ್ಯೆಯಂದು ಜನಿಸಿದ ಮಗು ಭವಿಷ್ಯದಲ್ಲಿ ಶಿಕ್ಷಣ, ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿ ಒಂದಿಷ್ಟು ಸಮಸ್ಯೆ ಹೋರಾಟವನ್ನು ಮಾಡಬೇಕಾಗುತ್ತೆ ಎಂದು ಹೇಳಲಾಗಿದೆ. ಹೀಗಾಗಿ ಆ ದಿನದಂದು ಹುಟ್ಟಿದವರು ಹನುಮಾನ್ ದೇವಸ್ಥಾನ, ಭಗವಾನ್ ಶಿವನ ದೇವಸ್ಥಾನಕ್ಕೆ ಪ್ರತಿದಿನ ಭೇಟಿ ನೀಡಬೇಕು. ಅಮವಾಸ್ಯೆಯಂದು ಪಿತೃಗಳಿಗೆ ಶ್ರಾದ್ಧವನ್ನು ಮಾಡಬೇಕು ಮತ್ತು ಬೆಳಿಗ್ಗೆ ತುಳಸಿ ಎಲೆಗಳನ್ನು ತಿನ್ನಬೇಕು ಎಂದು ಹೇಳಲಾಗಿದೆ.

ಅಮವಾಸ್ಯೆಯಂದು ಹುಟ್ಟಿ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಇಲ್ಲಿದೆ ಪರಿಹಾರ ಸಾಮಾನ್ಯರಿಗಿಂತ ಅಮವಾಸ್ಯೆಯಂದು ಜನಿಸಿದವರು ಜೀವನದಲ್ಲಿ ಖಿನ್ನತೆ ಮತ್ತು ಮಾನಸಿಕ ಆತಂಕವನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅಂತವರು ಪ್ರತಿದಿನ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು. ಇನ್ನು ಅಮವಾಸ್ಯೆಯಂದು ಹುಟ್ಟಿದವರು ಶೈಕ್ಷಣಿಕವಾಗಿ ಹೆಚ್ಚು ಬುದ್ಧಿವಂತರಾಗಿರುವುದಿಲ್ಲ. ಅವರು ಹೆಚ್ಚು ಕಲಾತ್ಮಕ ಮತ್ತು ಸೃಜನಶೀಲರಾಗಿರುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಅಮವಾಸ್ಯೆಯ ದುಷ್ಪರಿಣಾಮವನ್ನು ತೊಡೆದುಹಾಕಲು ಅವರು ಚಂದ್ರ ಮತ್ತು ಗುರು ಗ್ರಹದ ಪರಿಹಾರಗಳನ್ನು ಮಾಡಬೇಕಾಗುತ್ತದೆ. ಇದನ್ನೂ ಓದಿ: ಬಾವಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ರೋಚಕ ವಿಡಿಯೋ ವೈರಲ್​

ಅಮವಾಸ್ಯೆಯಲ್ಲಿ ಜನಿಸಿದ ಅನೇಕರು ಜೀವನದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಅಮವಾಸ್ಯೆ ದಿನದಂದು ನಾವು ಪಿತೃ ಪಕ್ಷವನ್ನು ಆಚರಿಸುವ ದಿನ, ನಾವು ನಮ್ಮ ಪೂರ್ವಜರನ್ನು ಸಮಾಧಾನಪಡಿಸುವ ಮತ್ತು ನಮಗೆ ಆಶೀರ್ವಾದ ನೀಡಲು ನಮ್ಮ ಪೂರ್ವಜರನ್ನು ಪೂಜಿಸುವ ದಿನ. ಶನಿ ಅಮಾವಾಸ್ಯೆ, ಥೈ ಅಮಾವಾಸ್ಯೆ, ಸೋಮ ಅಮಾವಾಸ್ಯೆ ಮುಂತಾದ ವಿವಿಧ ರೀತಿಯ ಅಮವಾಸ್ಯೆಗಳಿವೆ. ಅಮವಾಸ್ಯೆಯು ಹಿಂದೂ ಕ್ಯಾಲೆಂಡರ್‌ನ ಹದಿನೈದು ದಿನಕ್ಕೊಮ್ಮೆ ಬರುತ್ತದೆ. ಮಹಾಲಯ ಅಮವಾಸ್ಯೆಯು ದುರ್ಗಾ ದೇವಿಯ ಆವಾಹನೆಯ ದಿನವಾಗಿದೆ. ಅನೇಕ ಹುಡುಗಿಯರು, ಹುಡುಗರು ಅಮಾವಾಸ್ಯೆಯಂದು ಜನಿಸುತ್ತಾರೆ. ಇದು ಹಾನಿಕಾರಕವೂ ಅಲ್ಲ, ಅಶುಭವೂ ಅಲ್ಲ. ಇವರನ್ನು ನೀವು ದುರ್ಗಾ ದೇವಿಯ ಆಶೀರ್ವಾದದ ಫಲವೆಂದು ಪರಿಗಣಿಸಬಹುದು. ಹೀಗಾಗಿ ಅಮವಾಸ್ಯೆಯಂದು ಹುಟ್ಟಿದ್ದೇವೆ ಕಷ್ಟ ನಮ್ಮ ಪಾಲಿಗೆ ಇದ್ದೇ ಇದೆ ಎಂಬ ಭ್ರಮೆ ಬಿಟ್ಟು ಪಾಸಿಟಿವ್ ಆಗಿರಿ. ಅಮಾವಾಸ್ಯೆಯಂದು ಜನಿಸಿದವರು ಅಶುಭವಲ್ಲ. ಆದರೆ, ಈ ದಿನದಂದು ಜನಿಸಿದವರು ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು.

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್