AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ

ಹಿಂದೂ ಧರ್ಮದಲ್ಲಿ ಆಷಾಢ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಅಮಾವಾಸ್ಯೆಯ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನದಂದು ವಿಷ್ಣುವನ್ನು ವಿಧಿ ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ.

Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
Ashadha Amavasya
TV9 Web
| Updated By: ನಯನಾ ರಾಜೀವ್|

Updated on:Jun 27, 2022 | 11:29 AM

Share

ಹಿಂದೂ ಧರ್ಮದಲ್ಲಿ ಆಷಾಢ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಅಮಾವಾಸ್ಯೆಯ ತಿಥಿಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನದಂದು ವಿಷ್ಣುವನ್ನು ವಿಧಿ ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ದಿನದಂದು ತರ್ಪಣವನ್ನು ಕೂಡ ಬಿಡಲಾಗುತ್ತದೆ. ಅಮಾವಾಸ್ಯೆಯ ತಿಥಿಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ನದಿಯಲ್ಲಿ ಸ್ನಾನ ಮಾಡಿದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಪೂರ್ವಜರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ದಿನದಂದು, ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತವನ್ನು ಆಚರಿಸುತ್ತಾರೆ.

ಪೂರ್ವಜರ ಶಾಂತಿಗಾಗಿ ಬಡವರ ಸೇವೆ ಮಾಡಬೇಕು ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಉಣಬಡಿಸಬೇಕು ಜೊತೆಗೆ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ದಾನ ಮತ್ತು ದಕ್ಷಿಣೆಯನ್ನು ನೀಡಬೇಕು. ಈ ದಿನ ಯಾಗವನ್ನು ಮಾಡುವುದರಿಂದ ಹೆಚ್ಚಿನ ಫಲ ಸಿಗುತ್ತದೆ.

ವರ್ಷದಲ್ಲಿ ಬರುವ ಎಲ್ಲಾ ಅಮವಾಸ್ಯೆಗಳು ಒಂದೊಂದು ಪ್ರಾಮುಖ್ಯತೆ ಹೊಂದಿದೆ, ಹಾಗೆಯೇ ಇದರ ಆಚರಣೆಗಳು ಮಹತ್ವ ಪಡೆದಿವೆ.

ಆಷಾಢ, ಕೃಷ್ಣ ಅಮಾವಾಸ್ಯೆ ಆರಂಭ – 05:52 ಬೆಳಗ್ಗೆ, ಜೂನ್ 28

ಆಷಾಢ ಅಮಾವಾಸ್ಯೆ ದಿನಾಂಕ – ಜೂನ್ 29, 2022

ಆಷಾಢ, ಕೃಷ್ಣ ಅಮಾವಾಸ್ಯೆ ಕೊನೆಗೊಳ್ಳುತ್ತದೆ – 08:21 ಬೆಳಗ್ಗೆ, ಜೂನ್ 29

ಆಷಾಢ ಅಮಾವಾಸ್ಯೆ ಆಚರಣೆ ಹೇಗೆ? -ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ. ಈ ದಿನ ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ. ನೀವು ಮನೆಯಲ್ಲಿ ಸ್ನಾನ ಮಾಡುವುದಾದರೆ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಬಹುದು. -ಸ್ನಾನದ ನಂತರ ಮನೆಯ ದೇವರಕೋಣೆಯಲ್ಲಿ ದೀಪವನ್ನು ಬೆಳಗಿಸಿ. -ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. -ಸಾಧ್ಯವಾದರೆ ಇಡೀ ದಿನ ಉಪವಾಸವಿರಿ -ಪೂರ್ವಜರಿಗೆ ನೈವೇದ್ಯ ಅರ್ಪಿಸಿ ಮತ್ತು ಧ್ಯಾನ ಮಾಡಿ -ಈ ಪವಿತ್ರ ದಿನದಂದು, ದೇವರನ್ನು ಹೆಚ್ಚು ಹೆಚ್ಚು ಧ್ಯಾನಿಸಿ. -ಈ ಪವಿತ್ರ ದಿನದಂದು ವಿಷ್ಣುವಿನ ಆರಾಧನೆ ಮಾಡಿ.

Published On - 11:11 am, Mon, 27 June 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ