Spiritual: ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಚಂದ್ರನ ಆರಾಧನೆ ಹೇಗೆ ?

ಮನುಷ್ಯನ ಉನ್ನತಿಗೆ ಮತ್ತು ಅವನತಿಗೆ ಅವನ ಮನಸ್ಸೇ ಕಾರಣವೆಂದರ್ಥ ಮೇಲಿನ ವಾಕ್ಯಕ್ಕೆ. ಹಾಗಾದರೆ ಈ ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಅದಕ್ಕುತ್ತರವೇ ಚಂದ್ರನ ಆರಾಧನೆ. ಚಂದ್ರನು ಮನಃಕಾರಕನಾದ ಗ್ರಹ. ಅದೇ ರೀತಿ ಜಲಸಂಬಂಧವೂ ಇವನಿಗಿದೆ.

Spiritual: ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಚಂದ್ರನ ಆರಾಧನೆ ಹೇಗೆ ?
moon worship
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2022 | 7:05 AM

ಜಗತ್ತಿನಲ್ಲಿ ಮನುಷ್ಯನ ಔನ್ನತ್ಯಕ್ಕೆ ಮುಖ್ಯ ಕಾರಣ ದೇವತಾನುಗ್ರಹ ಹೇಗೆಯೋ.. ಅದಕ್ಕಿಂತಲೂ ಮುಖ್ಯ ಮನುಷ್ಯನ ಪ್ರಾಮಾಣಿಕ ಪ್ರಯತ್ನ. ಎಷ್ಟೋ ಸಲ ನಾವು ಏನೇನೋ ಮಾಡಬೇಕು ಅಂದುಕೊಳ್ಳುತ್ತೇವೆ. ಆದರೆ ಅದರೆಡೆಗೆ ಸಾಗುವ ಕುರಿತಾದ ಪ್ರಯತ್ನದಲ್ಲಿ ಆಲಸ್ಯ ಮಾಡುತ್ತೇವೆ. ಈ ಆಲಸ್ಯಕ್ಕೆ ಪ್ರಾರಬ್ಧ/ ಗ್ರಹಚಾರ ಎಂಬ ಹೆಸರಿಟ್ಟು ದೇವರನ್ನು ದೂರುತ್ತಿರುತ್ತೇವೆ. ಹಾಗಾದರೆ ಇದರ ಪರಿಹಾರಕ್ಕೆ ದಾರಿ ಏನು? ಏನು ಮಾಡಿದರೆ ಈ ಜಾಡ್ಯದಿಂದ ಮುಕ್ತರಾಗಬಹುದು? ಈ ಆಲಸ್ಯ,ಜಾಡ್ಯ,ಔದಾಸಿನ್ಯ ಇದಕ್ಕೆಲ್ಲ ಕಾರಣ ಮನಸ್ಸು ಕಣ್ರೀ … ಈ ಮನಸ್ಸೋ ಯಾವತ್ತೂ ಸರಿ ಇರಲ್ಲಾರೀ … ಏನೋ ಒಂಥರಾ ಬೇಜಾರು,ಅನಗತ್ಯ ಸಿಟ್ಟು ಬರತ್ತೆ. ಒಂದೊಂದು ಸಲ ಅಂತೂ ಒಬ್ಬನೇ ಕುಳಿತು ಜೋರಾಗಿ ಅತ್ತುಬಿಡೋಣ ಅನಿಸಿಬಿಡುತ್ತದೆ. ಇನ್ನೂ ಕೆಲವರಿಗೆ ತುಂಬಾ ಒಂಟಿತನ ಕಾಡುತ್ತದೆ. ಇದರ ಕಾರಣದಿಂದ ಇಂದು ಎಷ್ಟೋ ಜನರು ದುಷ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ. ಪ್ರಾಣತ್ಯಾಗ (suicide) ದಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಉದಯವಾಗುವ ಪ್ರಶ್ನೆಯೇ ಇದಕ್ಕೆ ಪರಿಹಾರವೇನೆಂದು .

ಭಗವದ್ಗೀತೆಯಲ್ಲಿ ಒಂದು ಮಾತಿದೆ – “ಮನ ಏವ ಮನುಷ್ಯಣಾಂ ಕಾರಣಂ ಬಂಧಮೋಕ್ಷಯೋಃ” ಎಂದು. ಮನುಷ್ಯನ ಉನ್ನತಿಗೆ ಮತ್ತು ಅವನತಿಗೆ ಅವನ ಮನಸ್ಸೇ ಕಾರಣವೆಂದರ್ಥ ಮೇಲಿನ ವಾಕ್ಯಕ್ಕೆ. ಹಾಗಾದರೆ ಈ ಮನಸ್ಸಿನ ಶುಭ್ರತೆಗೆ ಏನು ಮಾಡಬೇಕು ? ಅದಕ್ಕುತ್ತರವೇ ಚಂದ್ರನ ಆರಾಧನೆ. ಚಂದ್ರನು ಮನಃಕಾರಕನಾದ ಗ್ರಹ. ಅದೇ ರೀತಿ ಜಲಸಂಬಂಧವೂ ಇವನಿಗಿದೆ. ನೀರನ್ನು ಹೇಗೆ ಪೋಲಾಗದಂತೆ ರಕ್ಷಿಸಿದರೆ ಅದು ನಮ್ಮ ಬಳಕೆಗೆ ಬರುತ್ತದೋ ಮತ್ತು ಅತಿಯಾಗಿ ಹರಿ ಬಿಟ್ಟರೆ ವಿಪತ್ತು ಕೂಡ ತಪ್ಪಿದ್ದಲ್ಲ. ಅದರಂತೆ ಮನಸ್ಸನ್ನು ಸಾತ್ವಿಕವಾದ ವಿಚಾರದೆಡೆಗೆ ಬದ್ಧವಾಗಿದ್ದರೆ ಉನ್ನತಿ, ಇದಕ್ಕೆ ತಪ್ಪಿದಲ್ಲಿ ಅವನತಿ ನಿಶ್ಚಯ. ನವಗ್ರಹರಲ್ಲಿ ಸೂರ್ಯನಿಂದ ಆಗ್ನೇಯ ಭಾಗದಲ್ಲಿ ಬಿಳಿ ಬಣ್ಣದ ಚಚ್ಚೌಕ ಆಕಾರದ ಮಂಡಲದಲ್ಲಿ ಚಂದ್ರನ ಸಾನ್ನಿಧ್ಯ. ಚಂದ್ರನು ನಮ್ಮ ಜಾತಕದಲ್ಲಿ ಲಗ್ನದಿಂದ ಸಪ್ತಮ ಭಾವದಲ್ಲಿದ್ದರೆ ಸ್ಪುರದ್ರೂಪೀ ಉತ್ತಮ ಗುಣವುಳ್ಳ ವರ/ಕನ್ಯೆಯೊಂದಿಗೆ ವಿವಾಹ ಯೋಗವನ್ನು ಹೇಳಬಹುದು.

ಇದನ್ನು ಓದಿ: ಶುಕ್ರನ ಆರಾಧನೆ ಮಾಡಲು ಸರಿಯಾದ ಕ್ರಮ ಯಾವುದು ? ಶುಕ್ರನಿಗೆ ಈ ಬಣ್ಣದ ವಸ್ತ್ರ ಅತ್ಯಂತ ಪ್ರಿಯ

ಇದನ್ನೂ ಓದಿ
Image
Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
Image
Spiritual: ಶುಕ್ರನ ಆರಾಧನೆ ಮಾಡಲು ಸರಿಯಾದ ಕ್ರಮ ಯಾವುದು ? ಶುಕ್ರನಿಗೆ ಈ ಬಣ್ಣದ ವಸ್ತ್ರ ಅತ್ಯಂತ ಪ್ರಿಯ
Image
Amavasya: ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಶುಭವೋ? ಅಶುಭವೋ? ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ
Image
Spiritual: ಸೂರ್ಯನನ್ನು ಏಕೆ ಆರಾಧಿಸಬೇಕು? ಮಹತ್ವ, ಪೂಜಾ ವಿಧಿ, ಆರಾಧಿಸುವ ಕ್ರಮ ಹೀಗಿದೆ

ಅದೇನೇ ಇರಲಿ ಮನಸ್ಸು ಸರಿ ಇರಬೇಕಾದರೆ ಏನು ಮಾಡಬೇಕು ಎಂದು ನಿಮಗನಿಸುತ್ತಿರಬಹುದು. ಮನಸ್ಸು ಸರಿ ಇರುವುದು ಅಂದರೆ ಶಾಂತವಾಗಿರುವುದು. ನಾವು ಗಮನಿಸಬೇಕಾದ ಅಂಶ ಇಲ್ಲಿದೆ. ಹೇಗೆ ವಾತಾವರಣವು ಆ ಗ್ರಹರ ಸ್ವಭಾವಕ್ಕೆ ತಕ್ಕಂತೆ ಬದಲಾಗುತ್ತದೆಯೆಂದು. ರಾತ್ರಿ ಬೆಳದಿಂಗಳು ಮನಸ್ಸಿಗೆ ಮುದ ನೀಡುತ್ತದೆ ಅಲ್ಲವೇ ? ಕೇವಲ ಚಂದ್ರನ ಉದಯದಿಂದ ಈ ತರಹದ ಬದಲಾವಣೆಯ ಅನುಭವ ಆಗುವುದಾದರೆ ಇನ್ನು ಅವನನ್ನೇ ಕುರಿತು ಧ್ಯಾನಿಸಿದರೆ ಹೇಗಿರಬಹುದು ನಮ್ಮ ಮನೋಭೂಮಿಕೆ .. ಈ ಎಲ್ಲಾ ಅಲೌಕಿಕ ಕಾರಣದಿಂದ “ಶಶೀ ಶುಭಕರಃ” ಎಂದಿದ್ದಾರೆ ಋಷಿಗಳು. ನಾವು ಚಂದ್ರನನ್ನು ಶ್ರದ್ಧೆಯಿಂದ ಆರಾಧಿಸಿದರೆ ನಿಶ್ಚಯವಾಗಿ ಜೀವನದಲ್ಲಿ ಶುಭವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ. ಅದೇ ಕಾರಣದಿಂದ ಇವನಿಗೆ ದೇವತೆಯಾಗಿ “ಗೌರಿ”ಯನ್ನು ಹೇಳಿದ್ದಾರೆ. ಗೌರಿ ಅಂದರೆ ಗೌರವರ್ಣದವಳು ಎಂದು ಸಾಮಾನ್ಯ ಅರ್ಥ. ಅಂದರೆ ಶ್ವೇತ ರೂಪಳಾದ ತಾಯಿ (ಶಾಂತದುರ್ಗೆ ಅಥವಾ ಬಿಳಿ ವರ್ಣದಲ್ಲಿರುವ ದುರ್ಗೆ) ಎಂದರ್ಥ.

ತಾತ್ಪರ್ಯವೇನೆಂದರೆ ಮನಸ್ಸು ಉತ್ತಮವಾದರೆ ಜೀವನ ಔನ್ನತ್ಯಕ್ಕೇರುತ್ತದೆ. ಇದಕ್ಕೆ ಚಂದ್ರ ಅಥವಾ ಅವನ ಪ್ರತಿತ್ಯಧಿ ದೇವತೆಯಾದ ಗೌರಿಯನ್ನು ಧ್ಯಾನಿಸಿದರೆ,ಪೂಜಿಸಿದರೆ, ಅವರನ್ನು ಕುರಿತು ಸಾಧ್ಯವಿದ್ದಲ್ಲಿ ಚಂದ್ರನಿಗೆ ಪ್ರಿಯವಾದ ಪಲಾಶ ಸಮಿಧೆಯಿಂದ ಹವನವನ್ನು ಮಾಡಿದರೆ ಮನೋಸಂಬಂಧೀ ಕಾಯಿಲೆಯ ನಿವಾರಣೆ, ಜಲಸಂಬಂಧವಾದ ಲಾಭ, ಉತ್ತಮ ವಿವಾಹ ಯೋಗ ಹಾಗಯೇ ಜೀವನದಲ್ಲಿ ಶುಭಫಲಗಳು ನಮಗೆ ಅನುಕೂಲಕರವಾಗಿ ಬರುವುದರಲ್ಲಿ ಸಂದೇಹವೇ ಬೇಡ ಎಂದು ತಿಳಿಸುತ್ತಾ ಚಂದ್ರನ ಮಂತ್ರವನ್ನು ಜಪಿಸಿ

ದಧಿಶಂಖತುಷಾರಾಭಂ ಕ್ಷೀರೋದಾರ್ಣವಸಂಭವಂ |

ನಮಾಮಿ ಶಶಿನಂ ಭಕ್ತ್ಯಾ ಶಂಭೋರ್ಮುಕುಟಭೂಷಣಂ ||

ಡಾ.ಕೇಶವ ಕಿರಣ ಬಿ, Professor

S.R.B.S.S College Honnavar

kkmanasvi@gamail.com

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ