Spiritual: ಸೂರ್ಯನನ್ನು ಏಕೆ ಆರಾಧಿಸಬೇಕು? ಮಹತ್ವ, ಪೂಜಾ ವಿಧಿ, ಆರಾಧಿಸುವ ಕ್ರಮ ಹೀಗಿದೆ

ನಾವೆಲ್ಲ ಅಂಧಾನುಕರಣೆಯಿಂದ ಭಾನುವಾರವನ್ನು week-end ಎಂದು ಕರೆಯುತ್ತೇವೆ. ವಾಸ್ತವ ಏನೆಂದರೆ ಸೂರ್ಯನ ಸಂಬಂಧಿತ ವಾರ ಮೊದಲ ದಿನವಾಗಬೇಕು. ಶಾಸ್ತ್ರ ಹೇಳುತ್ತದೆ “ಭಾನುಃಭಾಗ್ಯಕರಃ” ಎಂದು. ಅಂದರೆ ಆದಿತ್ಯ ಭಾಗ್ಯವನ್ನು ನೀಡುವಾತ ಎಂಬುದಾಗಿ ಅರ್ಥ.

Spiritual: ಸೂರ್ಯನನ್ನು ಏಕೆ ಆರಾಧಿಸಬೇಕು? ಮಹತ್ವ, ಪೂಜಾ ವಿಧಿ, ಆರಾಧಿಸುವ ಕ್ರಮ ಹೀಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 26, 2022 | 7:06 AM

ನವಗ್ರಹರಲ್ಲೊಂದಾದ ಸೂರ್ಯನ , ಅವನ ಕುರಿತಾದ ಆರಾಧನೆ, ಹವನ, ಅಲ್ಲಿ ಬಳಸುವ ಸಮಿಧೆ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ. ಮನುಷ್ಯನಲ್ಲಿ ಹೇಗೆ ಹೃದಯವೋ ಅದೇ ರೀತಿ ಇಡೀ ಜಗತ್ತಿನ ಹೃದಯ ಸೂರ್ಯ. ಅದನ್ನೇ ಉಪನಿಷತ್ ಹೇಳುತ್ತದೆ – “ಸೂರ್ಯ ಆತ್ಮಾ ಜಗತಸ್ತಥ್ಸುಶಶ್ಚ” ಎಂದು. ಆದ ಕಾರಣವೇ ನವಗ್ರಹರಲ್ಲಿ ಪ್ರಧಾನ ಆದಿತ್ಯ. ನವಗ್ರಹ ಮಂಡಲ ರಚನೆ ಮಾಡುವಾಗಲೂ ಸೂರ್ಯ ಮಂಡಲ ಮಧ್ಯಭಾಗದಲ್ಲಿರುತ್ತದೆ.  ಸೂರ್ಯನ ಆರಾಧನೆ ಹಲವು ರೀತಿಯಲ್ಲಿ ಮಾಡಬಹುದು. ಆದಿತ್ಯಹೃದಯ ಎಂಬ ಮೂವತ್ತು ಶ್ಲೋಕಗಳಿರುವ ಒಂದು ಸ್ತೋತ್ರವಿದೆ. ಅದನ್ನು ಪಠಿಸಿದರೆ, ಅಥವಾ ಸೂರ್ಯೋದಯಕಾಲದಲ್ಲಿ ಹಿಂದೆ ಹೇಳಿದ ರೀತಿ ಅಹಂ ಭಾವ ತೊರೆದು ಶ್ರವಣ ಮಾಡಿದರೆ ಆರೋಗ್ಯ ವೃದ್ಧಿ, ಕೋರ್ಟು,ಸರಕಾರಿ ವ್ಯಾಜ್ಯ, ಶತ್ರುಬಾಧೆ ಇನ್ನೀತರ ಹಲವು ತೊಂದರೆಗಳಿಂದ ವಿಮುಕ್ತಿಯನ್ನು ಹೊಂದಬಹುದು. ಇದು ಸೂರ್ಯನ ಕುರಿತಾದ ಸಣ್ಣದಾದ ಅನುಷ್ಠಾನವಷ್ಟೇ. ಇನ್ನು ಸೂರ್ಯನ ಕುರಿತಾದ ನಮಸ್ಕಾರಗಳಿವೆ. ಸ್ವಾಭಾವಿಕವಾಗಿ ನಮಗೆ ಸೂರ್ಯನಮಸ್ಕಾರವೆಂದರೆ ಯೋಗಾಸನದಲ್ಲಿ ಹೇಳುವ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ ವೇದದಲ್ಲಿ ಆರಣ್ಯಕವೆಂಬ ಒಂದು ಭಾಗವಿದೆ. ಅಲ್ಲಿ “ಅರುಣಪ್ರಶ್ನ” ಎಂಬ ಒಂದು ಮಂತ್ರ ವಿಭಾಗವಿದೆ. ಅದರಲ್ಲಿ ಸರಿ ಸುಮಾರು ೧೦ ವಾಕ್ಯಗಳ ಒಂದು ಗುಂಪಿನಂತೆ ೧೩೦ ಗುಂಪು ಇದೆ. ಈ ಮಂತ್ರಗಳನ್ನು ಸೂರ್ಯೋದಯಕ್ಕೂ ಮೊದಲು ಪಠಿಸುತ್ತಾ ಸೂರ್ಯನ ಕುರಿತಾಗಿ ಭಾವಪೂರ್ಣವಾಗಿ ನಮಸ್ಕಾರ ಮಾಡಿದರೆ ಸಾಮಾನ್ಯವಾಗಿ ಆಗದೇ ಇರುವ ಕೆಲಸ ಮತ್ತು ನಿವಾರಣೆ ಆಗದಿರುವ ರೋಗ ಚರ್ಮಸಂಬಂಧೀ ಕಾಯಿಲೆಗಳೇ ಇಲ್ಲ ಎಂಬ ಮಾತಿದೆ.

“ಹೃದ್ರೋಗಂ ಮಮ ಸೂರ್ಯ ಹರಿಮಾಣಂ ಚ ನಾಶಯ”

ತಾತ್ಪರ್ಯವೇನೆಂದರೆ ನನ್ನ ಹೃದಯದ ಒಳಗಿರುವ ರೋಗ ಮತ್ತು ನನ್ನ ಶರೀರದ ಕಾಂತಿಯನ್ನು ನಾಶಮಾಡುವ ಹೊರಗಿನ ರೋಗಗಳನ್ನು ದೂರಮಾಡು ಅಥವಾ ನಾಶಪಡಿಸು ಎಂಬುದಾಗಿ. ಸಂಧ್ಯಾಕಾಲದಲ್ಲಿ ಭಾಸ್ಕರನನ್ನು ಧ್ಯಾನಿಸುತ್ತಾ ಶುದ್ಧ ಭಾವದಿಂದ (ಶುದ್ಧಭಾವವೆಂದರೆ ಅಹಂ ಇರದ ಸ್ಥಿತಿ, ಎಷ್ಟೆಂದರೆ ನಾನು ಮಾಡುತ್ತಿರುವೆ ಎಂಬ ಯೋಚನೆಯೂ ಇರಕೂಡದು) ಪೂರ್ವಾಭಿಮುಖವಾಗಿ ಅರ್ಘ್ಯವನ್ನು ನೀಡಿದರೆ ಪಾಪದ ಕ್ಷಯವಾಗುತ್ತದೆ.

ಇದನ್ನೂ ಓದಿ
Image
Spiritual: ಕುಜದೋಷ ಎಂದರೇನು? ಕುಜನ ಆರಾಧನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
Image
Spiritual: ಪ್ರಾಚೀನರು ಹೇಳದ್ದು, ಅರ್ವಾಚೀನರು ಹೇಳಿದ್ದು….
Image
Brahma Hatya Dosha: ಏನಿದು ಬ್ರಹ್ಮ ಹತ್ಯಾ ದೋಷ? ಇದರ ಹಿಂದಿರುವ ಪೌರಾಣಿಕ ಕಥೆ ಏನು?
Image
“ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ

ನಾವೆಲ್ಲ ಅಂಧಾನುಕರಣೆಯಿಂದ ಭಾನುವಾರವನ್ನು week-end ಎಂದು ಕರೆಯುತ್ತೇವೆ. ವಾಸ್ತವ ಏನೆಂದರೆ ಸೂರ್ಯನ ಸಂಬಂಧಿತ ವಾರ ಮೊದಲ ದಿನವಾಗಬೇಕು. ಶಾಸ್ತ್ರ ಹೇಳುತ್ತದೆ “ಭಾನುಃಭಾಗ್ಯಕರಃ” ಎಂದು. ಅಂದರೆ ಆದಿತ್ಯ ಭಾಗ್ಯವನ್ನು ನೀಡುವಾತ ಎಂಬುದಾಗಿ ಅರ್ಥ. ನಮ್ಮ ಭಾಗ್ಯ ಮೊದಲಿರಬೇಕಾ ಕೊನೆಗಿರಬೇಕಾ ಯೋಚಿಸಿ. ಭಾಗ್ಯವೆಂಬುದು ಜೊತೆಗಿರದಿದ್ದರೆ ಎಲ್ಲಾ ಇದ್ದು ಏನೂ ಇಲ್ಲದಿರುವ ಸ್ಥಿತಿ. ಪಾಂಡವರ ಕುರಿತಾಗಿ ಯೋಚಿಸಿ ಅವರಲ್ಲಿ ಸರ್ವವೂ ಇತ್ತು . ಆದರೆ ಭಾಗ್ಯವಿಲ್ಲದ ಕಾರಣ ಬಹುಪಾಲು ಜೀವನ ಕಾಡಿನಲ್ಲೇ ಕಳೆಯಿತು. ಅದಕ್ಕಾಗೇ ಕುಂತಿಯು ತಾಯಂದಿರಿಗೆ ಒಂದು ಆಶೀರ್ವಾದ ಪೂರ್ವಕವಾದ ಮಾತು ಹೇಳುತಾಳೆ “ಭಾಗ್ಯವಂತಂ ಪ್ರಸೂಯೇತ” ಭಾಗ್ಯವಂತರಿಗೆ ಜನ್ಮನೀಡಿರಿ ಎಂದು. ಆದರೆ ಅಂತಹ ಭಾಗ್ಯದ ದಿನ, ದಾರಿ ನಮ್ಮ ಮುಂದಿದ್ದರೂ ಅದನ್ನು ಹಿಂದೆ ಕಳುಹಿಸಿ ಅದರೆಡೆಗೆ ನೋಡುವುದೂ ಇಲ್ಲ. ಇನ್ನು ಹೇಗೆ ನೆಮ್ಮದಿ ?

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಕುಜದೋಷ ಎಂದರೇನು? ಕುಜನ ಆರಾಧನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಕೊನೆಯ ಸೋಪಾನ ಸೂರ್ಯನ ಕುರಿತಾದ ಹೋಮ. ಇದಕ್ಕೆ ಅರ್ಕ ಅಂದರೆ ಎಕ್ಕೆ ಎಂಬ ಸಮಿಧೆಯನ್ನು ,ತುಪ್ಪವನ್ನು ಹಾಗೇ ಚರು (ಅನ್ನವನ್ನು) ಬಳಸುತ್ತಾರೆ. ಕೆಲವು ಸಲ ಇಷ್ಟಾರ್ಥದಂತೆ ಬೇರೆ ದ್ರವ್ಯ ಸೇರಿಸುವುದೂ ಇದೆ. ನಾವೀಗ ಅರ್ಕ ಸಮಿಧೆಯ ಕುರಿತಾಗಿ ಸ್ವಲ್ಪ ತಿಳಿಯೋಣ. ಇದರಲ್ಲಿ ಹಲವು ಪ್ರಬೇಧಗಳಿದ್ದರೂ ಪ್ರಧಾನವಾಗಿ ಎರಡು ವಿಧ. ಶ್ವೇತಾರ್ಕ,ರಕ್ತಾರ್ಕ ಎಂದು. ಶ್ವೇತಾರ್ಕ ತುಂಬಾ ವಿಶೇಷವಾದ ಶಕ್ತಿಯನ್ನು ಹೊಂದಿದೆ. ಇದರ ಹೂವನ್ನು ಈಶ್ವರನಿಗೆ ಹಾರವಾಗಿ ಅರ್ಪಿಸಿದರೆ ಶನಿದೋಷ ನಿವಾರಣೆಗೆ ಸಹಕಾರಿ. ಮಾಘ ಮಾಸದ ಸಪ್ತಮಿಯಂದು ಬಿಳಿ ಎಕ್ಕೆಯ ಏಳು ಎಲೆಗಳನ್ನು ಸೂರ್ಯನಿಗೆ ಸಮರ್ಪಣೆ ಮಾಡಿದರೆ ಅದ್ಭುತ ಫಲವಿದೆ. ಹಾಗೆಯೇ ಹೋಮಕ್ಕೆ ಹವಿಸ್ಸಿನ ರೂಪದಲ್ಲಿ ಆದಿತ್ಯನ ಮಂತ್ರದೊಂದಿಗೆ ಎಕ್ಕೆಯನ್ನು ತುಪ್ಪದಲ್ಲಿ ಅದ್ದಿ ಆಹುತಿ ಮಾಡಿದರೆ ತುಂಬಾ ವಿಶೇಷ.

ಆಯುರ್ವೇದದ ಮಹಾನ್ ಋಷಿ ಸುಶ್ರುತನ ಸಂಹಿತೆಯಲ್ಲಿ 

ಅರ್ಕಾದಿಕೋ ಗಣೋಹ್ಯೇಷಾ ಕಫಮೇದೋವಿಷಾಪಹಃ |

ಕ್ರಿಮಿಕುಷ್ಠಪ್ರಶಮನೋ ವಿಶೇಷಾದ್ವ್ರಣಶೋಧನಃ ||

ಅರ್ಕಾದಿಗಣಗಳು (ಎಕ್ಕೆಯ ಪ್ರಬೇಧಗಳು) ಅಂತ ಇದೆ. ಅವುಗಳು ಕಫ, ಮೇದೋಜೀರಕಗ್ರಂಥಿಗೆ ಸಂಬಂಧಿಸಿದ ಕಾಯಿಲೆ, ವಿಷದ ನಾಶ, ಚರ್ಮರೋಗಕ್ಕೆ ಸಂಬಂಧಿಸಿದ ಕ್ರಿಮಿಗಳ ಮತ್ತು ಹುಣ್ಣುಗಳ ಶಮನಕ್ಕೆ ಸಹಕರಿಸುವ ಔಷಧೀಯ ಗುಣವನ್ನು ಹೊಂದಿದೆ ಹೇಳುತ್ತದೆ. ಅಂದರೆ ಸೂರ್ಯನ ಕುರಿತಾದ ಒಂದು ಸಸ್ಯಕ್ಕೇ ಇಷ್ಟು ವೈಜ್ಞಾನಿಕ ಹಿನ್ನಲೆಯಿದೆ ಎಂದಾದರೆ . ಅದರ ಪ್ರಧಾನನಾದ ಆ ಸೂರ್ಯನಿಗೆ ಎಷ್ಟು ಶಕ್ತಿ ಇರಬೇಡ. ಅದಕ್ಕೆ ಭಾಸ್ಕರನನ್ನು ತುಂಬಿದ ಭಾವದಿಂದ ಭಾನುವಾರ ಅಹಂ ತೊರೆದು ಪೂಜಿಸಿ.

( ಕುಜನ ಕುರಿತಾದ ಸಾರ್ಥಕ ಚಿಂತನೆಯನ್ನು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ)

ಡಾ.ಕೇಶವ ಕಿರಣ ಬಿ., ಪ್ರಾಧ್ಯಾಪಕರು, S.R.B.S.S College

kkmanasvi@gamail.com