Brahma Hatya Dosha: ಏನಿದು ಬ್ರಹ್ಮ ಹತ್ಯಾ ದೋಷ? ಇದರ ಹಿಂದಿರುವ ಪೌರಾಣಿಕ ಕಥೆ ಏನು?

ಬ್ರಹ್ಮಹತ್ಯಾ ದೋಷವು ಅತ್ಯಂತ ಮಹಾ ಪಾಪ ಎಂದು ಪರಿಗಣಿಸಲಾಗುವುದು. ಈ ದೋಷವನ್ನು ಹೊಂದಿರುವ ವ್ಯಕ್ತಿ ಪ್ರಸ್ತುತ ಜನ್ಮದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ದೋಷವನ್ನು ಅನುಭವಿಸುತ್ತಾನೆ ಎಂದು ಹೇಳಲಾಗುವುದು.

Brahma Hatya Dosha: ಏನಿದು ಬ್ರಹ್ಮ ಹತ್ಯಾ ದೋಷ? ಇದರ ಹಿಂದಿರುವ ಪೌರಾಣಿಕ ಕಥೆ ಏನು?
ಬ್ರಹ್ಮ ಹತ್ಯಾ ದೋಷ
Follow us
TV9 Web
| Updated By: ಆಯೇಷಾ ಬಾನು

Updated on: Jun 25, 2022 | 6:30 AM

ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಗೊತ್ತಿದ್ದು ಗೊತ್ತಿಲ್ಲದೆಯೂ ಒಂದಲ್ಲಾ ಒಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತಾನೆ. ಆದ್ರೆ ಒಂದು ಜೀವವನ್ನು ತೆಗೆದ ಪಾಪದಿಂದ ವ್ಯಕ್ತಿ ತನ್ನ ಭವಿಷ್ಯದಲ್ಲಿ ಹಾಗೂ ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹತ್ಯೆಗೈದ ವ್ಯಕ್ತಿಯ ಜೀವನವು ಅತ್ಯಂತ ಅಂಧಕಾರದಲ್ಲಿ ತುಂಬಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಕೊಂದ ಪಾಪಗಳಿಗೆ ಸಂಬಂಧಿಸಿದಂತೆ ಅನೇಕ ಪುರಾಣ ಕಥೆಗಳು ಇರುವುದನ್ನು ನಾವು ಕಾಣಬಹುದು. ದುಷ್ಟ ಕೃತ್ಯದಿಂದ ಬರುವ ದೋಷಗಳು ಜನ್ಮ ಜನ್ಮಾಂತರದವರೆಗೂ ಕಾಡುವುದು ಎನ್ನುವ ನಂಬಿಕೆ ಇದೆ. ಅಂತಹ ದೋಷಗಳಲ್ಲಿ ಬ್ರಹ್ಮಹತ್ಯಾ ದೋಷವೂ(Brahma Hatya Dosha) ಒಂದು.

ಬ್ರಹ್ಮಹತ್ಯಾ ದೋಷವು ಅತ್ಯಂತ ಮಹಾ ಪಾಪ ಎಂದು ಪರಿಗಣಿಸಲಾಗುವುದು. ಈ ದೋಷವನ್ನು ಹೊಂದಿರುವ ವ್ಯಕ್ತಿ ಪ್ರಸ್ತುತ ಜನ್ಮದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ದೋಷವನ್ನು ಅನುಭವಿಸುತ್ತಾನೆ ಎಂದು ಹೇಳಲಾಗುವುದು.

ಬ್ರಾಹ್ಮಣರನ್ನು ಕಾರಣ ವಿಲ್ಲದೆ ಸಂಹಾರ ಮಾಡಿದರೆ ಅಥವಾ ಗೊತ್ತಿದ್ದೂ ಗೊತ್ತಿದ್ದೂ ಹತ್ಯೆ ಮಾಡಿದರೆ, ತಾಯಿಯಿಂದ ಮಗುವನ್ನು ದೂರ ಮಾಡುವುದು, ಕರು ಹುಟ್ಟಿದ ಎರಡು ದಿನಕ್ಕೆ ಹಸುವಿನಿಂದ ಕರುವನ್ನು ದೂರ ಮಾಡುವುದು ಕೂಡ ಬ್ರಹ್ಮ ಹತ್ಯೆಗೆ ಸಮಾನವಾಗಿದೆ ಜೊತೆಗೆ ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ ಗಂಡ ಹೆಂಡತಿ ನಡುವೆ ಸಂಬಂಧಗಳನ್ನು ಕೆಡಿಸುವುದು ಮತ್ತು ಅವರ ಮಧ್ಯೆ ಸಮಸ್ಯೆಗಳನ್ನು ತಂದು ಹಾಕುವುದು ಇದರಿಂದ ಅವರನ್ನು ದೂರ ಮಾಡುವುದು ಇದು ಕೂಡ ಬ್ರಹ್ಮ ಹತ್ಯೆಗೆ ಸಮಾನವಾಗುತ್ತದೆ. ಈ ರೀತಿ ಬ್ರಹ್ಮ ಹತ್ಯೆಗೆ ಒಳಗಾದವರು ಮುಂದಿನ ಜನ್ಮದಲ್ಲೂ ದೋಷದಿಂದಾಗಿ ಅನೇಕ ಕಷ್ಟಗಳು ಎದುರಿಸಬೇಕಾಗುತ್ತದೆ ಎಂದು ಧಾರ್ಮಿಕ ಚಿಂತನೆ ಹೇಳುತ್ತದೆ. ಬ್ರಾಹ್ಮಣನನ್ನು ಕೊಲ್ಲುವುದರಿಂದ ಈ ದೋಷ ಉಂಟಾಗುವುದು ಎಂದು ಧರ್ಮ ಶಾಸ್ತ್ರ ಹೇಳುತ್ತದೆ. ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

ಕೆಲವು ಪವಿತ್ರ ಗ್ರಂಥಗಳ ಪ್ರಕಾರ ನರಹತ್ಯೆ ಹಾಗೂ ಇತರ ಹಲವು ಪಾಪ ಕರ್ಮಗಳಿಂದಾಗಿ ಬ್ರಹ್ಮಹತ್ಯಾ ದೋಷ ಉಂಟಾಗುವುದು ಎಂದು ಉಲ್ಲೇಖಿಸಲಾಗಿದೆ. ಈ ದೋಷದಿಂದಾಗಿ ವ್ಯಕ್ತಿ ತನ್ನ ಬದುಕಿನಲ್ಲಿ ಮಾನಸಿಕ ಅಸ್ವಸ್ಥತೆ, ಭಯ, ಆತ್ಮವಿಶ್ವಾಸದ ಕೊರತೆ, ವೈಫಲ್ಯಗಳು, ಚಡಪಡಿಕೆ, ಉದ್ವೇಗ, ಆರ್ಥಿಕ ಸಮಸ್ಯೆ, ವೈವಾಹಿಕ ಸಂಬಂಧದಲ್ಲಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ರಾವಣನನ್ನು ಕೊಂದ ರಾಮನೂ, ವೃತಾಸುರನನ್ನು ಕೊಂದ ಇಂದ್ರನೂ ಕೂಡಾ ಬ್ರಹ್ಮಹತ್ಯಾ ದೋಷಕ್ಕೆ ಒಳಗಾಗಬೇಕಾಯಿತು. ಹೀಗೆ ಬ್ರಹ್ಮ ಹತ್ಯೆ ದೋಷಕ್ಕೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಗಳು ಇವೆ.

ಬ್ರಹ್ಮನ ಐದನೇ ತಲೆ ಕತ್ತರಿಸಿದ ಭೈರವ ಭೈರವ ರೂಪವು ಶಿವನ ಆಕ್ರಮಣಕಾರಿ ರೂಪ ಎಂದು ಪರಿಗಣಿಸಲಾಗುತ್ತದೆ. ಭಗವಾನ್ ಬ್ರಹ್ಮನ ಅಹಂಕಾರವನ್ನು ಮುರಿಯುವ ಉದ್ದೇಶದಿಂದ ಶಿವನು ತನ್ನ ಮೂರನೇ ಕಣ್ಣಿನಿಂದ ಬೆಂಕಿಯನ್ನು ಹೊರಹೊಮ್ಮಿಸಿದನು. ಆಗ ಭೈರವನು ಹುಟ್ಟಿಕೊಂಡನು. ಶಿವನ ಈ ಉಗ್ರ ರೂಪದಿಂದ ಬಂದ ಭೈರವನು ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದನು. ಅಹಂಕಾರವನ್ನು ಮುರಿದು, ಒಳ್ಳೆಯ ಅರ್ಥವನ್ನು ಸಾರುವ ಉದ್ದೇಶದಿಂದ ಭೈರವನು ಬ್ರಹ್ಮನ ತಲೆಯನ್ನು ಕತ್ತರಿಸಿದನು. ಆದರೆ ಮಹಾನ್ ಬ್ರಾಹ್ಮಣನಾದ ಬ್ರಹ್ಮನ ಕತ್ತನ್ನು ಕತ್ತರಿಸಿದ್ದು ಮಹಾನ್ ಪಾಪ. ಆ ಪಾಪವು ಭೈರವನಿಗೆ ಸುತ್ತಿಕೊಂಡಿತು. ಬ್ರಹ್ಮನ ಐದನೇ ಕತ್ತನ್ನು ಕತ್ತರಿಸಿದಾಗ ಆ ತಲೆ ಬುರುಡೆಯು ಭೈರವನ ಕೈಗೆ ಅಂಟಿಕೊಂಡಿತು.

ಅದನ್ನು ಬೇರ್ಪಡಿಸಲು ಸಾಧ್ಯವಾಗದೆ ಹೋಯಿತು. ಅದಕ್ಕಾಗಿ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ, ಪಾಪವನ್ನು ತೊಳೆದುಕೊಳ್ಳಲು ಪ್ರಯತ್ನಿಸಿದನು. ನಂತರ ಕತ್ತರಿಸಿದ ತಲೆ ಬುರುಡೆಯಲ್ಲಿಯೇ ಭಿಕ್ಷೆ ಬೇಡಿಕೊಂಡು ಅದನ್ನು ಕೈಯಿಂದ ತೆಗೆಯಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಆ ತಲೆ ಬುರುಡೆಯಲ್ಲಿಯೇ ಭಿಕ್ಷೆ ಬೇಡಿದನು ಎನ್ನಲಾಗುವುದು. ಅದಕ್ಕಾಗಿಯೇ ಭೈರವನ ಭಿಕ್ಷ ದಾನದ ಕಥೆಯು ಹುಟ್ಟಿಕೊಂಡಿತು ಎಂದು ಪುರಾಣ ಕಥೆಗಳು ತಿಳಿಸುತ್ತವೆ. ಭೈರವನು ಬ್ರಹ್ಮಹತ್ಯಾ ದೋಷದಿಂದ ಪಾರಾಗಲು ಅನೇಕ ಪ್ರಯತ್ನಗಳನ್ನು ಮಾಡಿದನು. ಯಾವುದೂ ಫಲಕಾರಿಯಾಗದೆ ಹೋಯಿತು. ಆಗ ಶಿವನಲ್ಲಿ ಪರಿಹಾರ ಕೇಳಲು ಬಂದನು. ಆಗ ಶಿವನು ಬ್ರಹ್ಮಹತ್ಯೆ ಎನ್ನುವ ಸ್ತ್ರೀ ರಾಕ್ಷಸಿಯು ನಿನ್ನ ಬೆನ್ನತ್ತಿ ಬರುವಳು, ಅವಳು ಕಾಶಿಗೆ ಹೋಗುವ ಮೊದಲು ನೀನು ಹೋಗಬೇಕು. ಆಗ ನಿನ್ನ ಪಾಪವು ಮುಕ್ತವಾಗುತ್ತದೆ ಎಂದು ಸಲಹೆ ನೀಡಿದನು.

ಭೈರವನು ಕಾಶಿಗೆ ಹೋಗುವಾಗ ಬ್ರಹ್ಮಹತ್ಯೆಯೂ ಅವನ ಹಿಂದೆಯೇ ನಡೆದಳು. ಆಗ ಭೈರವನು ತನ್ನ ಹಿಂದೆ ಏಕೆ ಬರುತ್ತಿರುವುದು? ಎಂದು ಕೇಳಿದನು. ಅವಳು ಅದು ಶಿವನು ನೀಡಿದ ಸೂಚನೆ ಎಂದು ಹೇಳಿ ಮತ್ತೆ ಹಿಂಬಾಲಿಸಿದಳು. ನಂತರ ಭೈರವನು ಕಾಶಿಯ ಪವಿತ್ರ ಭೂಮಿಯನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದನು. ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

ಆದರೆ ಅವನ ಬೆನ್ನು ಹಿಡಿದು ಬಂದ ಬ್ರಹ್ಮಹತ್ಯೆಗೆ ಅದು ಸಾಧ್ಯವಾಗಲಿಲ್ಲ. ಅವಳನ್ನು ಶಿವನ ದೈವ ಶಕ್ತಿಯು ತಡೆದು ನಿಲ್ಲಿಸಿತು. ನಂತರ ರಾಕ್ಷಸರಿದ್ದ ಪಾತಾಳ ಲೋಕಕ್ಕೆ ಆಕೆಯನ್ನು ನೂಕಲಾಯಿತು ಎನ್ನಲಾಗುತ್ತದೆ.

ಕಪಾಲ ಮೋಚನ ತೀರ್ಥ ಪವಿತ್ರ ಸ್ಥಳವಾದ ಕಾಶಿಗೆ ಭೈರವನು ಬರುತ್ತಿದ್ದಂತೆ ಒಂದು ಅದ್ಭುತವು ಉಂಟಾಯಿತು. ಇಷ್ಟು ದಿನಗಳ ಕಾಲ ಭೈರವನ ಕೈಗೆ ಅಂಟಿದ್ದ ತಲೆ ಬುರುಡೆಯು ಕೈಯಿಂದ ಬೇರ್ಪಟ್ಟು, ನೆಲಕ್ಕೆ ಉರುಳಿತು. ಕಾಶಿಯ ಪವಿತ್ರ ಮಣ್ಣು ತಾಗುತ್ತಿದ್ದಂತೆ ಭೈರವನ ಪಾಪವೂ ಮುಕ್ತವಾಯಿತು.

ಬ್ರಹ್ಮನ ತಲೆ ಬುರುಡೆ ಬಿದ್ದ ಸ್ಥಳವನ್ನು ಕಪಾಲ ಮೋಚನ ಎಂದು ಕರೆಯಲಾಯಿತು. ನಂತರ ಅದೊಂದು ಪವಿತ್ರ ತೀರ್ಥ ಕ್ಷೇತ್ರವಾಯಿತು. ಅಲ್ಲಿಯೇ ಕಪಾಲ ತೀರ್ಥ ಎನ್ನುವುದು ಸಹ ಸೃಷ್ಟಿಯಾಯಿತು ಎನ್ನಲಾಗುತ್ತದೆ.

ಕಪಾಲ ಮೋಚನದಲ್ಲಿ ಪಿತೃ ತರ್ಪಣ ಕಪಾಲ ಮೋಚನ ತೀರ್ಥದಲ್ಲಿ ಪಿತೃ ತರ್ಪಣ ಕೊಡುವುದರಿಂದ ಬ್ರಹ್ಮಹತ್ಯಾ ದೋಷವು ನಿವಾರಣೆಯಾಗುವುದು. ಭೈರವನ ದರ್ಶನ ಪಡೆದರೆ ಜನ್ಮ ಜನ್ಮಾಂತರದ ಪಾಪಗಳು ತೊಳೆದು ಹೋಗುವುದು. ಅಲ್ಲದೆ ಭೈರವ ಅವತಾರದ ಕಥೆ ಕೇಳಿದರೆ ನಮ್ಮ ಜನ್ಮದಲ್ಲಿ ಪಡೆದ ಪಾಪಗಳೆಲ್ಲವೂ ನಾಶವಾಗುವುದು ಎಂದು ಹೇಳಲಾಗುತ್ತದೆ.

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ