AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual: ಕುಜದೋಷ ಎಂದರೇನು? ಕುಜನ ಆರಾಧನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಶಾಸ್ತ್ರದ ಪ್ರಕಾರ ಗಂಭೀರವಾದ ಚಿಂತನೆ ಈ ವಿಚಾರದ ಕುರಿತಾಗಿ ಮಾಡಿದಾಗ ಕೆಲವೊಂದು ಸಲ ಆ ಏಳನೇ ಮನೆಗೆ ಶುಭಗ್ರಹಗಳ ರಕ್ಷೆ ಇದ್ದರೆ ಆ ಕುಜದೋಷದ ಅಶುಭಫಲದ ಪ್ರಮಾಣ ಕಡಿಮೆ ಇರುತ್ತದೆ.

Spiritual: ಕುಜದೋಷ ಎಂದರೇನು? ಕುಜನ ಆರಾಧನೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 25, 2022 | 8:00 AM

Share

ಕುಜದೋಷ ಎಂಬ ಪದವನ್ನು ಯಾರು ಕೇಳಿಲ್ಲ ಹೇಳಿ . ವಿವಾಹಕ್ಕೆ ಅಣಿ ಆದರೆ ಹುಡುಗಿಗೆ / ಹುಡುಗನಿಗೆ ಕುಜದೋಷ ಇದೆಯೇ? ಎಂದು ವಿಚಾರಿಸುವವರೇ ಹೆಚ್ಚು. ಏನೀ ಕುಜದೋಷವೆಂದರೆ? ಇದಕ್ಕೆ ಮೇಲ್ನೋಟದ ಉತ್ತರ ನೀಡುವುದಾದರೆ ನಮ್ಮ ಜನ್ಮ ಕುಂಡಲಿಯಲ್ಲಿ ಲಗ್ನ ಎಂದು ಬರೆದ ಒಂದು ಕೋಣೆಯಿದೆ. ಅದರಿಂದ ಏಳನೇ ಮನೆಯಲ್ಲಿ ಕುಜ/ಅಂಗಾರಕನಿದ್ದರೆ ಅಥವಾ ಚಂದ್ರನಿರುವ ಕೋಣೆಯಿಂದ ಏಳನೇ ಮನೆಯಲ್ಲಿ ಕುಜನಿದ್ದರೆ .. ಅಂತಹ ಸಂದರ್ಭದಲ್ಲಿ ಕುಜದೋಷವನ್ನು ಹೇಳಬೇಕು ಎಂದು ಜೋತಿಷ್ಯ ಹೇಳುತ್ತದೆ. ಶಾಸ್ತ್ರದ ಪ್ರಕಾರ ಗಂಭೀರವಾದ ಚಿಂತನೆ ಈ ವಿಚಾರದ ಕುರಿತಾಗಿ ಮಾಡಿದಾಗ ಕೆಲವೊಂದು ಸಲ ಆ ಏಳನೇ ಮನೆಗೆ ಶುಭಗ್ರಹಗಳ ರಕ್ಷೆ ಇದ್ದರೆ ಆ ಕುಜದೋಷದ ಅಶುಭಫಲದ ಪ್ರಮಾಣ ಕಡಿಮೆ ಇರುತ್ತದೆ.

ಈ ದೋಷದಿಂದ ಆಗುವ ಅಶುಭವೇನು ಎಂದು ಹೇಳುವುದಾದರೆ ಮುಖ್ಯವಾಗಿ ಇದರ ಅಶುಭಫಲ ವಿಯೋಗ (ಕಳೆದುಕೊಳ್ಳುವಿಕೆ). ಇದು ಹೆಚ್ಚಾಗಿ ವಿವಾಹ ವಿಚಾರದಲ್ಲಿ ಉಂಟಾಗುವ ಸಮಸ್ಯೆ. ಈ ದೋಷ ಬರಲು ಕಾರಣವೇನು ಎಂಬುದಾಗಿ ಚಿಂತನೆ ಮಾಡಿದರೆ ಕಾರಣವೊಂದೇ ಜನ್ಮಾಂತರೀಯ ಕರ್ಮಫಲ. ಮನುಷ್ಯ ಬುದ್ಧಿಪೂರ್ವಕವಾಗಿ ಪರರಿಗೆ ಕೇಡನ್ನು ಬಯಸುವುದು, ಜಮೀನು (ಭೂಸಂಬಂಧಿತ) ವ್ಯಾಜ್ಯಗಳಲ್ಲಿ ಮೋಸಮಾಡುವುದು ಮತ್ತು ಸುಬ್ರಹ್ಮಣ್ಯನ,ನಾಗನ ಕುರಿತಾಗಿ ಅಪಚಾರವೆಸಗುವುದು, ಅಶುದ್ಧ ಚಿತ್ತರಾಗಿ ವ್ಯವಹರಿಸುವುದು. ಈ ಎಲ್ಲಾ ಸಾಮಾನ್ಯ ಕಾರಣಗಳಿಂದ ಮತ್ತು ಇನ್ನೂ ಹಲವು ಕಾರಣಗಳಿಂದ ಈ ದೋಷ ಬರುತ್ತದೆ. ಇದಲ್ಲದೆ ಭೂ ಸಂಬಂಧ ಬರುವ ಸಮಸ್ಯೆಗೂ ಪರೋಕ್ಷವಾಗಿ ಕಾರಣ.

ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ ಪರಿಹಾರವಿಲ್ಲದ ದೋಷ, ಸಮಸ್ಯೆಗಳು ಇಲ್ಲವೇ ಇಲ್ಲ. ಸರಿ ದಾರಿ ನಾವು ಹುಡಕಬೇಕು. ಹುಡುಕುವುದರಲ್ಲಿ ಎಡವಿದರೆ ತಪ್ಪು ದೇವರದ್ದಲ್ಲ. ವಿವಾಹ ವಿಚಾರದಲ್ಲಿ ನೋಡುವುದಾದರೆ ಸಪ್ತಮ ಸ್ಥಾನದಲ್ಲಿ ಕುಜನು ಬಲವಾಗಿದ್ದರೆ ಅರ್ಕವಿವಾಹ, ರಂಭಾವಿವಾಹ, ಕುಂಭವಿವಾಹ ಎಂಬ ಕರ್ಮಾಂಗವನ್ನು ಮಾಡಿಸಬೇಕು. ಇದರ ಅರ್ಥವೇನೆಂದರೆ ಉದಾಹರಣೆಗೆ ಕುಂಭವಿವಾಹದ ಕುರಿತಾಗಿ ಹೇಳುವುದಾದರೆ ಕುಂಭವನ್ನು ಪುರುಷನಾಗಿ ಕಲ್ಪಿಸಿ , ಅದರೊಂದಿಗಿ ಕನ್ಯೆಯ ವಿವಾಹ ಮಾಡಿಸಿ , ನಂತರದ ಕ್ಷಣದಲ್ಲಿ ಆ ಕುಂಭದೊಂದಿಗೆ ವಿಯೋಗ ಮಾಡಿಸುವುದು. ಇದರಿಂದ ಆ ಕನ್ಯೆ ಕುಜದೋಷದಿಂದಾಗುವ ವಿಯೋಗವನ್ನು ಅನುಭವಿಸಿದಂತಾಯಿತು. ಇದೇ ರೀತಿ ಸಪ್ತಮದ ಕುಜನ ಪ್ರಭಾವ ಕಡಿಮೆ ಇದ್ದಲ್ಲಿ ಕುಜಶಾಂತಿಯನ್ನು ಮಾಡಿ ಕಾರ್ಯವನ್ನು ಮಾಡುವ ಪದ್ಧತಿಯಿದೆ. ಇದರೊಂದಿಗೆ ವರ ಮತ್ತು ಕನ್ಯೆಯ ಕುಂಡಲಿಯ ಸಪ್ತಮದಲ್ಲಿ ಸಮವಾದ ಬಲವುಳ್ಳ ಕುಜನು ಇದ್ದರೆ ಅಂತಹ ವ್ಯಕ್ತಿಗಳ ವಿವಾಹ ಸಂಘಟನೆ ಉತ್ತಮವಾಗುತ್ತದೆ.

ಇದನ್ನೂ ಓದಿ
Image
Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?
Image
“ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ
Image
ಮನೆಯಲ್ಲಿ ನೆಮ್ಮದಿ ಕಾಣಬೇಕೆಂದರೆ ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋಗಳು ಇಡಬೇಡಿ!
Image
Vastu Tips: ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : “ಯಜ್ಞ” ಎಂದರೇನು? ಯಜ್ಞವನ್ನು ಹೇಗೆ ಮಾಡಬೇಕು ? ಇಲ್ಲಿದೆ ಮಾಹಿತಿ

ಮೇಲಿನ ವಿಚಾರವು ಅಶುಭಫಲ ಕುರಿತಾಗಿದೆ. ಅದೇ ರೀತಿ ಕುಜನು ನಮ್ಮ ಕುಂಡಲಿಯಲ್ಲಿ ಉತ್ತಮಸ್ಥಾನದಲ್ಲಿದ್ದರೆ ಅತ್ಯುತ್ತಮ ಫಲವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೇ ಅವನನ್ನು ಶಾಸ್ತ್ರಕಾರರು “ಕಾಂತಿಪ್ರದೋ ಮಂಗಲಃ” ಎಂದಿದ್ದಾರೆ. ನವಗ್ರಹ ಮಂಡಲದಲ್ಲಿ ಸೂರ್ಯನ ಬಲಭಾಗದಲ್ಲಿ ತ್ರಿಕೋಣಾಕಾರ ಮಂಡಲದಲ್ಲಿ ಕೆಂಪುಬಣ್ಣದಿಂದ ಆರಾಧಿಸಲ್ಪಡುವವನೇ ಕುಜ. ಇವನಿಗೆ ಖದಿರ (ಕಾಚಿ ಮರ) ಸಮಿಧೆ ಅತ್ಯಂತ ಪ್ರಿಯ. ಇದರಲ್ಲಿ ಔಷಧೀಯ ಗುಣಗಳೂ ಇವೆ. ಈ ಮರದ ತೊಗಟೆಯ ಕಷಾಯದ ಸ್ನಾನ ಮತ್ತು ಪಾನ ಅತ್ಯಂತ ಉತ್ತಮ (ನಿಯಮಿತವಾಗಿ ಸರಿಯಾದ ಸಲಹೆ ಮೇರೆಗೆ ಮಾಡಿ) . ಕುಜನ ವಿಶೇಷತೆಯೆಂದರೆ ಇವನು ಭೂಕಾರತ್ವವನ್ನು ಹೊಂದಿರುವಂತವನು. ಸ್ವಾಭಾವಿಕವಾಗಿ ಹೇಳುವುದಾದರೆ ಕುಜನ ಮತ್ತು ಈ ಗ್ರಹದ ಕುರಿತಾದ ದೇವತೆಯಾದ ಸುಬ್ರಹ್ಮಣ್ಯನ ಸೇವೆ, ಪೂಜೆ, ಆರಾಧನೆ, ಜಪಗಳಿಂದ ನಮ್ಮ ಜೀವನದಲ್ಲಿ ಕಾಂತಿಯನ್ನು ಹಾಗಯೇ ಭೂ ಲಾಭವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ. ಯಾರು ಧರ್ಮ ಮಾರ್ಗದಲ್ಲಿ ಶ್ರದ್ಧೆಯಿಂದ ಕುಜನ ಆರಾಧನೆ ಮಾಡುತ್ತಾರೋ ಅವರು ಭೂಲಾಭಾದಿ ಶುಭಫಲವನ್ನು ಹೊಂದುತ್ತಾರೆ ಮತ್ತು ಕುಜದೋಷದಂತಹ ಕ್ಲೇಶದಿಂದ ಪರಿಹಾರವನ್ನು ಪಡೆಯುತ್ತಾರೆ.

ಧರಣೀಗರ್ಭಸಂಭೂತಂ ವಿದ್ಯುತ್ಕಾಂಚನ ಸನ್ನಿಭಂ |

ಕುಮಾರಂ ಶಕ್ತಿಹಸ್ತಂ ಚ ಲೋಹಿತಾಂಗಂ ನಮಾಮ್ಯಹಮ್ ||

ಇದು ಕುಜನ ಕುರಿತಾದ ಮಂತ್ರ ಇದನ್ನು ಭಾವಪೂರ್ಣವಾಗಿ ಜಪಿಸಿ ಸಾರ್ಥಕ್ಯವನ್ನು ಹೊಂದೋಣ ಎಂದು ಹೇಳುತ್ತಾ ಈ ಸಲದ ಸಂಚಿಕೆ ಮುಗಿಸುತ್ತೇನೆ.

(ಶುಕ್ರನ ಕುರಿತಾಗಿ ಮುಂದಿನ ಸಲ ಚಿಂತನೆ ಮಾಡೋಣ)

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು, S.R.B.S.S College ಹೊನ್ನಾವರ, kkmanasvi@gamail.com

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್