AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ

ವಾಸ್ತು ಶಾಸ್ತ್ರದ ಪ್ರಕಾರ, ಸಾಯಂಕಾಲ ಅಂದ್ರೆ ಸೂರ್ಯಾಸ್ತದ ನಂತರ ಮಲಗಬಾರದು, ಪೊರಕೆಯಿಂದ ಗುಡಿಸಬಾರದು ಅಥವಾ ಉಗುರುಗಳು, ಕೂದಲನ್ನು ಕತ್ತರಿಸಬಾರದು ಎನ್ನಲಾಗಿದೆ. ಇಲ್ಲದಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಬಂದು ಸಾಲದ ಬಾಧೆ ಎದುರಿಸಬೇಕಾಗುತ್ತದೆ.

Vastu Tips: ಅಪ್ಪಿತಪ್ಪಿಯೂ ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ
ಲಕ್ಷ್ಮೀ ದೇವಿ
Follow us
TV9 Web
| Updated By: ಆಯೇಷಾ ಬಾನು

Updated on: Jun 22, 2022 | 6:30 AM

ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರಿದ್ದರೆ ಅವರು ಕೆಲವೊಂದು ಕೆಲಸಗಳನ್ನು ಸಂಜೆಯ ವೇಳೆ ಮಾಡಬಾರದು ಎಂದು ಹೇಳುತ್ತಾರೆ. ಅಂತಹ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಲು ಬಿಡುವುದಿಲ್ಲ. ಸೂರ್ಯಾಸ್ತದ ನಂತರ ಈ ಕೆಲವು ಕೆಲಸಗಳನ್ನು ಮಾಡಿದರೆ ಅದರಿಂದ ಲಕ್ಷ್ಮೀ ದೇವಿ(Goddess Lakshmi) ಕೋಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ನಂತರ ಕೆಲವು ಕೆಲಸಗಳನ್ನು ಮಾಡುವುದು ಅಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೀವೂ ಕೂಡ ಅಂತಹ ಕೆಲವು ತಪ್ಪುಗಳನ್ನು ಮಾಡುತ್ತಿದ್ದರೆ ಆದಷ್ಟು ಬೇಕ ಆ ತಪ್ಪುಗಳನ್ನು ತಿದ್ದುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ, ಸಾಯಂಕಾಲ ಅಂದ್ರೆ ಸೂರ್ಯಾಸ್ತದ ನಂತರ ಮಲಗಬಾರದು, ಪೊರಕೆಯಿಂದ ಗುಡಿಸಬಾರದು ಅಥವಾ ಉಗುರುಗಳು, ಕೂದಲನ್ನು ಕತ್ತರಿಸಬಾರದು ಎನ್ನಲಾಗಿದೆ. ಇಲ್ಲದಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಬಂದು ಸಾಲದ ಬಾಧೆ ಎದುರಿಸಬೇಕಾಗುತ್ತದೆ. ಹಾಗೂ ಲಕ್ಷ್ಮಿ ದೇವಿಗೆ ಕೋಪ ಬರುವುದೆ ಎನ್ನಲಾಗಿದೆ. ಹೀಗೆ ಮಾಡಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಾತಾ ಸರಸ್ವತಿ, ಲಕ್ಷ್ಮಿ ಮತ್ತು ದುರ್ಗಾ ದೇವಿಯು ಸಂಜೆಯ ವೇಳೆಗೆ ಮನೆಗೆ ಆಗಮಿಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿದ್ದು ಅಂತಹ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛ ಮಾಡಿ ಅಗರಬತ್ತಿ ಹಚ್ಚಿ ದೇವರು ಮನೆಯೊಳಗೆ ಬರಲು ಇಷ್ಟವಾಗುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಹಾಗೂ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತೆ. ಇದನ್ನೂ ಓದಿ: Banana plant: ಮನೆಯಲ್ಲಿ ಬಾಳೆ ಗಿಡ ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ

ಸಂಜೆ ಮಲಗಬೇಡಿ ಎಲ್ಲದಕ್ಕೂ ಸರಿಯಾದ ಸಮಯವಿದೆ. ಮನುಷ್ಯನಿಗೆ ಸರಿಯಾದ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಸಂಜೆ ಮಲಗುವವರು ಇದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ಆ ವ್ಯಕ್ತಿಯ ಆಯುಷ್ಯ ಕಡಿಮೆಯಾಗಿ ಅನೇಕ ರೋಗಗಳಿಗೆ ಬಲಿಯಾಗುತ್ತಾನೆ. ಸೂರ್ಯಾಸ್ತ ಮತ್ತು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ. ಹೀಗಾಗಿ ಸಂಜೆ ಮನೆಯ ಬಾಗಿಲುಗಳನ್ನು ತೆರೆದಿಡಿ.

ಮನೆ ಅಥವಾ ಅಂಗಳದಲ್ಲಿ ಪೊರಕೆ ಇಡಬೇಡಿ ಶಾಸ್ತ್ರಗಳ ಪ್ರಕಾರ ಸೂರ್ಯಾಸ್ತ ಮತ್ತು ಸಂಜೆಯ ಸಮಯದಲ್ಲಿ ಮನೆಯನ್ನು ಗುಡಿಸಬಾರದು. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಮನೆಗಳಿಗೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ವೇಳೆ ಗುಡಿಸಿದರೆ ಲಕ್ಷ್ಮಿ ಮನೆ ಪ್ರವೇಶಿಸುವುದಿಲ್ಲ. ಆ ಮನೆಯಲ್ಲಿ ಹಣದ ಕೊರತೆ ಎದುರಾಗುತ್ತೆ.

ಹೊಸ್ತಿಲಲ್ಲಿ ಕುಳಿತುಕೊಳ್ಳಬೇಡಿ ಶಾಸ್ತ್ರಗಳ ಪ್ರಕಾರ, ಸಂಜೆಯ ಸಮಯದಲ್ಲಿ ತನ್ನ ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವುದಿಲ್ಲ.

ಸಸ್ಯಗಳನ್ನು ಮುಟ್ಟಬೇಡಿ ಸೂರ್ಯಾಸ್ತದ ನಂತರ ಮರಗಳನ್ನು ಮುಟ್ಟಬಾರದು ಅಥವಾ ಮುರಿಯಬಾರದು ಎಂದು ಹೇಳಲಾಗುತ್ತದೆ. ಹಾಗೆಯೇ ಸೂರ್ಯಾಸ್ತದ ನಂತರ ಗಿಡಕ್ಕೆ ನೀರು ಹಾಕಬಾರದು. ಸೂರ್ಯಾಸ್ತದ ನಂತರ ಮರಗಳು ಮತ್ತು ಸಸ್ಯಗಳು ನಿದ್ರೆಗೆ ಹೋಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅವುಗಳಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ.

ಅಂತ್ಯಕ್ರಿಯೆ ಮಾಡಬಾರದು ಪುರಾಣದ ಪ್ರಕಾರ ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡಬಾರದು. ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡುವುದರಿಂದ ಮೃತ ವ್ಯಕ್ತಿಯು ಮರಣಾನಂತರದ ಜೀವನದಲ್ಲಿ ನರಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಮತ್ತೊಂದು ಕಡೆ ಸಂಜೆ ವೇಳೆ ಕತ್ತಲಾಗಿರುತ್ತೆ ಈ ವೇಳೆ ಕಸ ಗುಡಿಸುವುದರಿಂದ ಬೆಲೆ ಬಾಳುವ ವಸ್ತುಗಳು ನೆಲದ ಮೇಲೆ ಬಿದ್ದಿದ್ದರೆ ಅದು ಕಣ್ಣಿಗೆ ಬೀಳದೆ ಕಸದ ಬುಟ್ಟಿಗೆ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದ ನಷ್ಟವೇ ಹೆಚ್ಚು.

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್