ಚುನಾವಣಾಧಿಕಾರಿ ಅಬ್ಸೆಂಟ್, ಪೋನೇ ಎತ್ತುತ್ತಿಲ್ಲ ಎಂದ ಸಿಬ್ಬಂದಿ, ಲಕ್ಷ್ಮಿನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದ ರೇವಣ್ಣ ಫ್ಯಾಮಿಲಿ

ಹಾಸನ ವಿಧಾನ ಪರಿಷತ್ ಚುನಾವಣೆ ಮತಗಟ್ಟೆ ಕೇಂದ್ರಕ್ಕೆ ಹೊಳೆನರಸೀಪುರ ಚುನಾವಣಾ ಮುಖ್ಯಾಧಿಕಾರಿ ಗೈರಾಗಿದ್ದಾರೆ. ಹೀಗಾಗಿ ಪಕ್ಷದ ಏಜೆಂಟ್ಗಳು ಅಸಮಾಧಾನ ಹೊರ ಹಾಕಿದ್ದಾರೆ.

ಚುನಾವಣಾಧಿಕಾರಿ ಅಬ್ಸೆಂಟ್, ಪೋನೇ ಎತ್ತುತ್ತಿಲ್ಲ ಎಂದ ಸಿಬ್ಬಂದಿ, ಲಕ್ಷ್ಮಿನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದ ರೇವಣ್ಣ ಫ್ಯಾಮಿಲಿ
ಚುನಾವಣಾಧಿಕಾರಿ ಅಬ್ಸೆಂಟ್, ಪೋನೇ ಎತ್ತುತ್ತಿಲ್ಲ ಎಂದ ಸಿಬ್ಬಂದಿ, ಲಕ್ಷ್ಮಿನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದ ರೇವಣ್ಣ ಫ್ಯಾಮಿಲಿ
Follow us
TV9 Web
| Updated By: ಆಯೇಷಾ ಬಾನು

Updated on:Dec 10, 2021 | 10:22 AM

ಹಾಸನ: ಇಂದು ಬೆಳಗ್ಗೆ 8ರಿಂದ ವಿಧಾನ ಪರಿಷತ್ ಚುನಾವಣೆ ಮತದಾನ ಶುರುವಾಗಿದೆ. 20 ಕ್ಷೇತ್ರಗಳಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದ್ರೆ ಕೆಲ ಕಡೆ ಇನ್ನೂ ಕೂಡ ಮತದಾನ ಶುರುವಾಗಿಲ್ಲ. ಮತ್ತಷ್ಟು ಕಡೆ ಮತಗಟ್ಟೆ ಓಪನ್ ಮಾಡಿದ್ರು ಮತ ಚಲಾಯಿಸಲು ಯಾರು ಬಂದಿಲ್ಲ. ಇಂತಹ ಪರಿಸ್ಥಿತಿಗಳು ಕೆಲ ಕಡೆ ಎದುರಾಗಿದೆ.

ಹಾಸನ ವಿಧಾನ ಪರಿಷತ್ ಚುನಾವಣೆ ಮತಗಟ್ಟೆ ಕೇಂದ್ರಕ್ಕೆ ಹೊಳೆನರಸೀಪುರ ಚುನಾವಣಾ ಮುಖ್ಯಾಧಿಕಾರಿ ಗೈರಾಗಿದ್ದಾರೆ. ಹೀಗಾಗಿ ಪಕ್ಷದ ಏಜೆಂಟ್ಗಳು ಅಸಮಾಧಾನ ಹೊರ ಹಾಕಿದ್ದಾರೆ. ಚುನಾವಣಾ ಮುಖ್ಯಾಧಿಕಾರಿ ವಿರುದ್ಧ ಚುನಾವಣಾ ಸಿಬ್ಬಂದಿಗಳ ಬಳಿ ಬಿಜೆಪಿ ಪಕ್ಷದ ಏಜೆಂಟ್ಗಳು ಅಸಮಾಧಾನ ಹೊರಹಾಕಿದ್ದಾರೆ. ಅವರು ಫೋನ್ ಎತ್ತುತ್ತಿಲ್ಲ ಎಂದು ಚುನಾವಣಾ ಸಿಬ್ಬಂದಿ ಉತ್ತರಿಸಿ ಏಜೆಂಟ್ಗಳಿಗೆ ಸಮಾಧಾನ ಮಾಡಿದಂತ ಘಟನೆ ಹೊಳೆನರಸೀಪುರ ಪುರಸಭೆ ಕೇಂದ್ರದ ಮತಗಟ್ಟೆಯಲ್ಲಿ ನಡೆದಿದೆ.

ಇನ್ನು ಹಾಸನ ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ಹಿನ್ನೆಲೆಯಲ್ಲಿ ಮತದಾನಕ್ಕೂ ಮೊದಲು ಸಂಸದ ಪ್ರಜ್ವಲ್ ರೇವಣ್ಣ ಪೂಜೆ ಸಲ್ಲಿಸಿದ್ದಾರೆ. ಹೊಳೆನರಸೀಪುರ ಶ್ರಿಲಕ್ಷ್ಮಿ ನರಸಿಂಹ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅಭ್ಯರ್ಥಿ ಡಾ.ಸೂರಜ್ ರೇವಣ್ಣ ಕೂಡ ಇದೇ ದೇವಸ್ಥಾನದಲ್ಲಿ ತಂದೆ ಹೆಚ್.ಡಿ.ರೇವಣ್ಣ ಜೊತೆಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ಹೆಚ್.ಡಿ.ರೇವಣ್ಣ ಪುರಸಭೆ ಸದಸ್ಯರಿಂದ ವಾಸ್ತುಪ್ರಕಾರ ಮತದಾನ ಮಾಡಿಸಿದ್ದಾರೆ.

hd revanna

ವಾಸ್ತುಪ್ರಕಾರ ಮತದಾನ ಮಾಡಿಸಿದ ಹೆಚ್.ಡಿ.ರೇವಣ್ಣ

ಆಂಬುಲೆನ್ಸ್ನಲ್ಲಿ ಬಂದು ಮತದಾನ ಮತದಾನ ಪ್ರಾರಂಭವಾಗಿ 1 ಗಂಟೆಯಾದ್ರೂ ಮತ ಕೇಂದ್ರಕ್ಕೆ ಪಂಚಾಯ್ತಿ ಸದಸ್ಯರು ಯಾರು ಬಂದಿಲ್ಲ. ಆನೇಕಲ್ನ 31 ಮತಗಟ್ಟೆ ಖಾಲಿ ಖಾಲಿ ಹೊಡೆಯುತ್ತಿದೆ. ಸದ್ಯ ಬೊಮ್ಮಸಂದ್ರ ಪುರಸಭೆಯ ವಾರ್ಡ ನಂ1 ಸದಸ್ಯೆ ನಜ್ಮಾ ಆಂಬುಲೆನ್ಸ್ ವಾಹನದಲ್ಲಿ ಬಂದು ಮತದಾನ ಮಾಡಿದ್ದಾರೆ. ಹೊಟ್ಟೆ ನೋವು ಕಾರಣ ತಡರಾತ್ರಿ ಅಪಾಂಡಿಕ್ಸ್ ಆಪರೇಷನ್ ಆಗಿದ್ದು ನಡೆದಾಡೋಕೆ ಕಷ್ಟವಾಗುವ ಹಿನ್ನೆಲೆ ಆಂಬುಲೆನ್ಸ್ನಲ್ಲಿ ಬಂದು ಮತದಾನ ಮಾಡಿದ್ದಾರೆ.

ಮತದಾನ ಮಾಡುವ ವೇಳೆ ಪೋಟೊ ಕ್ಲಿಕ್ಕಿಸಿಕೊಂಡ ಸದಸ್ಯ ಕೋಲಾರ-ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಚುನಾವಣೆ ಮತದಾನ ಹಿನ್ನೆಲೆ ಕೋಲಾರ ನಗರಸಭೆಯಲ್ಲಿ ನಗರಸಭೆ ಸದಸ್ಯ ಮತದಾನ ಮಾಡಿದ್ದಾರೆ. ಮತದಾನ ಮಾಡುವ ವೇಳೆ ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಹೀಗಾಗಿ ಚುನಾವಣಾ ಸಿಬ್ಬಂದಿ ಪೋಟೊ ತೆಗೆದುಕೊಂಡ ಬಗ್ಗೆ ಪ್ರಶ್ನಿಸಿದ್ದಾರೆ. ಮತಗಟ್ಟೆಗೆ ಮೊಬೈಲ್ ತರುವುದು ನಿರ್ಬಂಧ ಹೇರಲಾಗಿತ್ತು.

ಇದನ್ನೂ ಓದಿ: MLC Election: ವಿಧಾನ ಪರಿಷತ್ ಚುನಾವಣೆಗೆ ಕೌಂಟ್‌ಡೌನ್, 20 ಕ್ಷೇತ್ರಗಳ 25 ಸ್ಥಾನಗಳಿಗೆ ಇಂದು ಮತದಾನ

Published On - 9:41 am, Fri, 10 December 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!