ಮಂಗಗಳ ಮಾರಣಹೋಮ‌ ಮಾಸುವ ಮುನ್ನವೇ ಹಾಸನದಲ್ಲಿ 20ಕ್ಕೂ ಹೆಚ್ಚು ಕರುಗಳು ಸಾವು

ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್‌ ವಾಹನದಲ್ಲಿ 100ಕ್ಕೂ ಹೆಚ್ಚು ಕರುಗಳನ್ನ ಸಾಗಿಸುತ್ತಿದ್ದರು. ಗೋಹತ್ಯೆ ನಿಷೇಧ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದರು.

ಮಂಗಗಳ ಮಾರಣಹೋಮ‌ ಮಾಸುವ ಮುನ್ನವೇ ಹಾಸನದಲ್ಲಿ 20ಕ್ಕೂ ಹೆಚ್ಚು ಕರುಗಳು ಸಾವು
ಮಂಗಗಳ ಮಾರಣಹೋಮ‌ ಮಾಸುವ ಮುನ್ನವೇ ಹಾಸನದಲ್ಲಿ 50ಕ್ಕೂ ಹೆಚ್ಚು ಕರುಗಳು ಸಾವು
Follow us
| Updated By: ಆಯೇಷಾ ಬಾನು

Updated on:Aug 19, 2021 | 1:12 PM

ಹಾಸನ: 38 ಮಂಗಗಳ ಮಾರಣಹೋಮ‌ ಮಾಸುವ ಮುನ್ನವೇ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿ ಗೂಡ್ಸ್ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಕರುಗಳು ಮೃತಟ್ಟಿವೆ.

ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್‌ ವಾಹನದಲ್ಲಿ 50ಕ್ಕೂ ಹೆಚ್ಚು ಕರುಗಳನ್ನ ಸಾಗಿಸುತ್ತಿದ್ದರು. ಗೋಹತ್ಯೆ ನಿಷೇಧ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದರು.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗೂಡ್ಸ್ ವಾಹನದಲ್ಲಿದ್ದ 50ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಈ ಪೈಕಿ ಕೆಲವು ಕರುಗಳು ವಾಹನದಲ್ಲಿಯೇ ಉಸಿರುಗಟ್ಟಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು ಇನ್ನೂ ಕೆಲವು ಕರುಗಳು ಅಪಘಾತದ ವೇಳೆ ಮೃತಪಟ್ಟಿವೆ ಎನ್ನಲಾಗಿದೆ. ಸದ್ಯ ಅಪಘಾತ ಸ್ಥಳಕ್ಕೆ ತೆರಳಿ 30 ಕರುಗಳನ್ನು ಬೇಲೂರು ಶಾಸಕ ಲಿಂಗೇಶ್ ರಕ್ಷಿಸಿದ್ದಾರೆ. ಘಟನೆ ಬಗ್ಗೆ ಲಿಂಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಆಹಾರವಿಲ್ಲದೆ 20ಕ್ಕೂ ಹೆಚ್ಚು ಕರುಗಳು ರೋದಿಸುತ್ತಿವೆ. ಸ್ಥಳಕ್ಕೆ ಇನ್ನೂ ಬಾರದ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು.

ಕರುಗಳ ಅಮಾನವೀಯ ಸಾಗಾಟಕ್ಕೆ ಲಿಂಗೇಶ್ ಆಕ್ರೋಶ ಇನ್ನು ಕರುಗಳ ಅಮಾನವೀಯ ಸಾಗಾಟಕ್ಕೆ ಶಾಸಕ ಲಿಂಗೇಶ್ ಆಕ್ರೋಶ ಹೊರ ಹಾಕಿದ್ದಾರೆ. ಕರುಗಳನ್ನು ಕಸದ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ಹೇಳಿಕೆ ನೀಡಿದ್ದಾರೆ. ಸರ್ಕಾರದ ಎಡವಟ್ಟಿನಿಂದ ಇಂತಹ ಅನಾಹುತ ಆಗುತ್ತಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ರೆ ಆಗಲ್ಲ. ಅದರಿಂದ ಆಗುವ ಪರಿಣಾಮದ ಬಗ್ಗೆಯೂ ಚಿಂತಿಸಬೇಕು. ಹೋಬಳಿಗೊಂದು ಗೋಶಾಲೆ ಆರಂಭಿಸುತ್ತೇವೆ ಅಂದಿದ್ರು. ಆದರೆ ತಾಲೂಕಿಗೆ ಒಂದು ಗೋಶಾಲೆಯನ್ನೂ ಆರಂಭಿಸಿಲ್ಲ. ಈ‌ ಬಗ್ಗೆ ಸರ್ಕಾರ ತಕ್ಷಣ ಕ್ರಮವಹಿಸಬೇಕು. ಕರು ಹುಟ್ಟಿದ ಬಳಿಕ 1 ತಿಂಗಳು ಸಾಕಬೇಕೆಂದು ನಿಯಮ ಮಾಡಬೇಕು. ಬಳಿಕ ಕರುಗಳನ್ನು ಸರ್ಕಾರವೇ ಸಾಕಲು ಕ್ರಮವಹಿಸಬೇಕು. ನಮ್ಮ ಭಾಗದಲ್ಲಿ ಹಸುಗಳನ್ನ ಸಾಕಲಾಗದಿದ್ದರೆ ಬಿಟ್ಟುಹೋಗಿ. ಒಂದು ತಿಂಗಳು ಕರು ಸಾಕಿ ನಂತರ ನನ್ನ ತೋಟಕ್ಕೆ ಬಿಟ್ಟುಹೋಗಿ ಎಂದ ಶಾಸಕ ಲಿಂಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಮಂಗಗಳ ಮಾರಣಹೋಮ ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಆಹಾರದ ಆಸೆ ತೋರಿಸಿ ಜುಲೈ 28 ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು, ಅವುಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿವೆ ಎಂದು ತಿಳಿಸಿದ್ದರು.

ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 38 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ, ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಮಂಗಗಳ ಮಾರಣಹೋಮ ಪ್ರಕರಣ; ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಹಾಸನ ಜಿಲ್ಲಾಧಿಕಾರಿ

Published On - 7:32 am, Thu, 19 August 21

‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ