ಹೆಚ್ಡಿಕೆ ಮನೆಗೆ ಅಕ್ರಮ ವಿದ್ಯುತ್ ಬಳಕೆ; ರಾಜ್ಯದ ಜನರಿಗೆ ಕ್ಷಮೆ ಕೇಳ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ
HD ಕುಮಾರಸ್ವಾಮಿ(HD Kumaraswamy) ಅವರ ನಿವಾಸದ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣ ‘ನಮ್ಮಿಂದ್ರ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ(Nikil Kumaraswamy)ಹೇಳಿದರು.

ಹಾಸನ, ನ.14: ಬೆಂಗಳೂರಿನ ಜೆಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ(HD Kumaraswamy) ಅವರ ನಿವಾಸದ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣ ‘ನಮ್ಮಿಂದ್ರ ಆ ರೀತಿಯ ತಪ್ಪೇನಾದರೂ ಆಗಿದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ(Nikil Kumaraswamy)ಹೇಳಿದರು. ಇಂದು(ನ.14) ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಮ್ಮ ಮನೆಯ ಕೆಲ ಹುಡುಗರು ತಪ್ಪು ಮಾಡಿರಬಹುದು ಎಂದು ಹೇಳಿದರು.
ಇನ್ನು ಇದೇ ವೇಳೆ ‘ಪ್ರತಿ ವರ್ಷ 9 ರಿಂದ 15 ದಿನ ಹಾಸನಾಂಬೆ ದರ್ಶನ ಸಿಗುತ್ತದೆ. ಈ ಬಾರಿ ಪ್ರತಿ ದಿನ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದಿದ್ದು, ಶಾಸಕರು, ಜಿಲ್ಲಾಡಳಿತ ಜವಾಬ್ದಾರಿಯಿಂದ ವ್ಯವಸ್ಥೆ ಮಾಡಿದ್ದಾರೆ. ರಾಜ್ಯದಲ್ಲೇ ಹಾಸನಾಂಬೆ ತಾಯಿಯ ಶಕ್ತಿ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಹಚ್ಚಿದ ದೀಪ ಒಂದು ವರ್ಷದವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಎಲ್ಲರಿಗೂ ಒಳ್ಳೆಯದಾಗಲಿ, ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ರೈತರ ಪರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ದೇವಿಯ ಬಳಿ ಬೇಡಿದ್ದೇನೆ. ನಾನು ಜನಸೇವೆಯನ್ನೇ ದೇವರ ಸೇವೆ ಎಂದುಕೊಂಡಿದ್ದೇನೆ. ಸಿನಿಮಾ ರಂಗದಲ್ಲೂ ಪ್ರತಿ ದಿನ ಶೂಟಿಂಗ್ ಮುಂಚೆ ಕ್ಯಾಮೆರಾಕ್ಕೆ ನಮಸ್ಕಾರ ಮಾಡುವ ಸಂಸ್ಕ್ರತಿ ಹೊಂದಿದ್ದೇನೆ ಎಂದರು.
ಇದನ್ನೂ ಓದಿ:ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಪಡೆದ ಪ್ರಕರಣ: ಹೆಚ್ಡಿ ಕುಮಾರಸ್ವಾಮಿ ವಿರುದ್ಧ FIR
ನಮ್ಮಲ್ಲಿ ಗೆದ್ದಿರುವವರು, ಪಕ್ಷ ಕಟ್ಟುವ ಕೆಲಸ ಮಾಡಿರುವ ನಾಯಕರು, ಬೇರೆ ಪಕ್ಷಕ್ಕೆ ಹೋಗುವ ನಾಯಕರು ಯಾರೂ ಇಲ್ಲ. ಶರಣಗೌಡರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಕೆಲ ಅಸಮಾಧಾನ ಹೊರಹಾಕಿದ್ದಾರೆ. ಎಲ್ಲಾ ವಿಚಾರವನ್ನೂ ನಾನು ಚರ್ಚೆ ಮಾಡಿದ್ದೇನೆ. ಅವರು ಜೆಡಿಎಸ್ನಿಂದ ಶಾಸಕರಾಗಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು. ಇನ್ನು ಮುಂದಿನ ಲೋಕಸಭಾ ಚುನಾವಣೆಗೆ ದೇವೇಗೌಡರ ನೇತೃತ್ವದಲ್ಲಿ ಎನ್‌ಡಿಎ ಜೊತೆ ಮೈತ್ರಿಯಾಗಿದ್ದೇವೆ. ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲೂ ಗೆಲ್ಲುವುದೇ ನಮ್ಮ ಗುರಿಯಾಗಿದೆ. ನಾನು ಸ್ಪರ್ಧಿಸುವ ವಿಚಾರ ಈಗ ಅಪ್ರಸ್ತುತ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಜಾತ್ಯಾತೀತ ನಿಲುವಿನ ಮತಗಳು ಕಾಂಗ್ರೆಸ್ಗೆ ಬರುತ್ತವೆ ಎಂಬ ಮಾಗಡಿ ಬಾಲಕೃಷ್ಣ ವಿಚಾರ ‘ಅವರ ಮಾತಿಗೆ ರಾಮನಗರದಲ್ಲಿ ಉತ್ತರ ಕೊಡ್ತೇನೆ ಎಂದು ಖಡಕ್ಕಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ