AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassan rain: ಹಾಸನದಲ್ಲಿ 2 ಮನೆ ಕುಸಿತ, ವೃದ್ಧೆ ಸಾವು: ಅಂಗಡಿಗೆ ಹೋಗಿದ್ದಕ್ಕೆ ಬದುಕುಳಿದ ತಾಯಿ-ಮಗು

 ನಿರಂತರ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ನಿನ್ನೆ(ಜುಲೈ 25) ಎರಡು ಮನೆಗಳು ಕುಸಿದು ಬಿದ್ದಿರುವ ವರದಿಯಾಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾಳೆ. ಇನ್ನೊಂದೆಡೆ ತಾಯಿ-ಮಗಳು ಅಂಗಡಿಗೆ ಹೋಗಿ ಬರುವಷ್ಟರಲ್ಲೇ ಮನೆ ಕುಸಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Hassan rain: ಹಾಸನದಲ್ಲಿ 2 ಮನೆ ಕುಸಿತ, ವೃದ್ಧೆ ಸಾವು: ಅಂಗಡಿಗೆ ಹೋಗಿದ್ದಕ್ಕೆ ಬದುಕುಳಿದ ತಾಯಿ-ಮಗು
ಮನೆ ಗೋಡೆ ಕುಸಿತ
ಮಂಜುನಾಥ ಸಿ.
| Edited By: |

Updated on: Jul 26, 2023 | 7:44 AM

Share

ಹಾಸನ, (ಜುಲೈ 25): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ (rain) ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಬಿದ್ದು ಓರ್ವ ವೃದ್ದೆ ಮೃತಪಟ್ಟಿರುವ ಘಟನೆ ಹಾಸನ(Hassan) ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ. ಕುಸಿದ ಗೋಡೆಯಡಿ ಸಿಲುಕಿ ಗೌರಮ್ಮ(62) ಎನ್ನುವವರು ಮೃತಪಟ್ಟಿದ್ದಾರೆ. ಇನ್ನು ವೃದ್ಧೆಯ ಪತಿ ನಟರಾಜ್ ಗೆ ಗಂಭೀರ ಗಾಯಗಳಾಗಿದ್ದು,,ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಿನ್ನೆ(ಜುಲೈ 25) ರಾತ್ರಿ ಮನೆಯೊಳಗೆ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಗೋಡೆ ಕುಸಿದುಬಿದ್ದಿದೆ. ಪರಿಣಾಮ ಗೌರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: Karnataka Rains: ಕರಾವಳಿ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಅಂಗಡಿಗೆ ಹೋಗಿ ಬರುವಷ್ಟರಲ್ಲೇ ಕುಸಿದುಬಿದ್ದ ಮನೆ

ಇನ್ನೊಂದೆಡೆ ಇದೇ ಹಾಸನದಲ್ಲಿ ಮತ್ತೊಂದು ಮನೆ ಕುಸಿದು ಬಿದ್ದಿದೆ. ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರದಲ್ಲಿ ಸಚಿನ್ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ವಾತಿ ಹಾಗೂ ಮಗು ಅಂಗಡಿಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಮನೆ ಕುಸಿದುಬಿದ್ದಿದೆ. ಇದರಿಂದ ತಾಯಿ, ಮಗು ಬದುಕುಳಿದಿದ್ದಾರೆ.

ಸಚಿನ್ ಕೆಲಸಕ್ಕೆ ಹೋಗಿದ್ದರೆ, ಪತ್ನಿ ಸ್ವಾತಿ ಮಗುವಿನೊಂದಿಗೆ ಅಂಗಡಿಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಇನ್ನು ಸ್ಥಳಕ್ಕೆ ಆರ್‌ಐ ಮತ್ತು ವಿಎ ಭೇಟಿ ನೀಡಿ ಪರಿಶೀಲಿಸಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ