ಸರ್ಕಾರದ ನಡೆಗೆ ಠಕ್ಕರ್: ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಕಾರ್ಯಕ್ಕೆ ಮುಂದಾದ ಹೆಚ್​​.ಡಿ. ರೇವಣ್ಣ

ಹೇಮಾವತಿ ಜಲಾಶಯದಿಂದ ನೀರು ಹರಿಯದ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನಕ್ಕೆ ಕಾಯದೆ ಶಾಸಕ ಹೆಚ್.ಡಿ. ರೇವಣ್ಣ ಅವರು ಸ್ವಂತ ಖರ್ಚಿನಲ್ಲಿ ಶ್ರೀರಾಮದೇವರ ಕಟ್ಟೆಯ ದಕ್ಷಿಣ ನಾಲೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾಲಮನ್ನಾಗೆ ಕುಮಾರಸ್ವಾಮಿ, ಅವರ ಅಣ್ಣನ ಆಸ್ತಿ ಶೇರ್​ ಕೊಡಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೂ ರೇವಣ್ಣ ಈ ವೇಳೆ ತಿರುಗೇಟು ನೀಡಿದ್ದಾರೆ.

ಸರ್ಕಾರದ ನಡೆಗೆ ಠಕ್ಕರ್: ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಕಾರ್ಯಕ್ಕೆ ಮುಂದಾದ ಹೆಚ್​​.ಡಿ. ರೇವಣ್ಣ
ಹೆಚ್​​.ಡಿ. ರೇವಣ್ಣ
Image Credit source: Tv9 Kannada
Edited By:

Updated on: Sep 21, 2026 | 4:33 PM

ಹಾಸನ, ಸೆಪ್ಟೆಂಬರ್​​ 21: ಹೇಮಾವತಿ ಜಲಾಶಯದಿಂದ ನೀರು ಬಿಟ್ಟರೂ ಕೆರೆಗಳಿಗೆ ನೀರು ತಲುಪದ ಹಿನ್ನೆಲೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿ ಕಾರ್ಯಕ್ಕೆ ಶಾಸಕ ಹೆಚ್​​.ಡಿ. ರೇವಣ್ಣ ಮುಂದಾಗಿದ್ದಾರೆ. ಡ್ಯಾಂನಿಂದ ನೀರು ಬಿಟ್ಟರೂ ಶ್ರೀರಾಮದೇವರ ಕಟ್ಟೆಯ ದಕ್ಷಿಣ ನಾಲೆಗೆ ನೀರು ಹರಿದಿಲ್ಲ. ನೀರು ಬಿಟ್ಟು ವಾರ ಕಳೆದರೂ ನಾಲೆ ಬ್ಲಾಕ್​ ಆಗಿರುವ ಕಾರಣ ಮಲ್ಲಪ್ಪನಹಳ್ಳಿ, ತಿರಮಪುರ, ಹೊನ್ನಿಕೊಪ್ಪಲು, ಗೊಂದಿಮಲ್ಲೇನಹಳ್ಳಿ, ತಟ್ಟೆಕರೆ ಭಾಗದಲ್ಲಿ ಕಾಲುವೆ ದುರಸ್ತಿ ಕಾರ್ಯವನ್ನು ರೇವಣ್ಣ ಮಾಡಿಸುತ್ತಿದ್ದಾರೆ. ಆ ಮೂಲಕ ಸರ್ಕಾರದ ಅನುದಾನಕ್ಕೆ ಕಾಯದೆ ತಮ್ಮದೇ ಹಣದಲ್ಲಿ ಕಾಲುವೆ ದುರಸ್ತಿ ಮಾಡಿಸುವ ಮೂಲಕ ಸರ್ಕಾರದ ನಡೆಗೆ ಅವರು ಠಕ್ಕರ್​​ ಕೊಟ್ಟಿದ್ದಾರೆ.

ಇನ್ನು ಜಲಾಶಯಗಳಿಂದ ನೀರು ಬಿಟ್ಟರೂ ಕರೆಗಳಿಗೆ ನೀರು ಹರಿಯದ ಬಗ್ಗೆ ಪ್ರತಿಕ್ರಿಯಿಸಿರುವ ರೇವಣ್ಣ, ಶ್ರೀರಾಮದೇವರ ಬಳಿಕ ಡ್ಯಾಂ ನಾಲೆಗೆ ನೀರು ಬಿಡದಂತೆ ಸೂಚನೆ ಕೊಟ್ಟಿದಾರಂತೆ. ಎರಡು ವರ್ಷದಿಂದ ಈ ಭಾಗದ ನಾಲೆಗೆ ನೀರು ಹರಿಸಿಲ್ಲ. ಎರಡೂ ನಾಲೆಗೆ ನೀರು ಹರಿಸಿದ್ರೆ ಅರ್ಧ ಟಿಎಂಸಿ ನೀರು ಆಗಬಹುದು. ದನಕರುಗಳ ಕುಡಿಯಲಾದರೂ ನೀರು ಹರಿಸಿ. ಹೇಮಾವತಿ ಜಲಾಶಯ ದಲ್ಲಿ ಗರಿಷ್ಠ 37 ಟಿಎಂಸಿ ನೀರು ಸಂಗ್ರಹ ಮಾಡಬಹುದು. ಕಳೆದ ಎರಡು ತಿಂಗಳಿಂದ ಹದಿನೇಳು ಟಿಎಂಸಿ ನೀರು ಖಾಲಿಯಾಗಿದೆ. ದಿನ ನಿತ್ಯ ನಾಲ್ಕೈದು ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಅಧಿಕಾರಿಗಳಿಗೆ ಗೌರವಯುತವಾಗಿ ನೀಡೋದು ಧರ್ಮ’ ಹೇಳಿಕೆ ವಿವಾದ: ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು

ಕಾಂಗ್ರೆಸ್ ನಾಯಕರ ಹೇಳಿಕೆಗೆ ಶಾಸಕ H.D.ರೇವಣ್ಣ ತಿರುಗೇಟು

ಸಾಲಮನ್ನಾಗೆ ಕುಮಾರಸ್ವಾಮಿ, ಅವರ ಅಣ್ಣನ ಆಸ್ತಿ ಶೇರ್​ ಕೊಡಲಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಶಾಸಕ ಹೆಚ್​​.ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ. ನೆಲಮಂಗಲ ಬಳಿ ನನ್ನದು, ಮಗನದ್ದು ಹತ್ತತ್ತು ಎಕರೆ ಆಸ್ತಿ ಇದೆ. ರಾಜ್ಯ ಸರ್ಕಾರ ಏನಾದ್ರೂ ದಿವಾಳಿ ಆಗಿದ್ದರೆ ರಾಜ್ಯದ ಹಿತ ದೃಷ್ಟಿಯಿಂದ ನನ್ನ ಆಸ್ತಿ ಬೇಕಾದ್ರೆ ಕೊಡುತ್ತೇನೆ. ಜನರು ಉಳಿಯಬೇಕು, 10 ಎಕರೆ ಇಟ್ಟುಕೊಂಡು ಏನ್ಮಾಡೋಣ. ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ, ಬರ್ಬಾದ್ ಆಗಿದೆ. ಹೆಚ್.ಡಿ.ರೇವಣ್ಣ ಅವರೇ 10 ಎಕರೆ ಕೊಡಿ ಅಂದರೆ ಕೊಡೋಣ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us