AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಧಿಕಾರಿಗಳಿಗೆ ಗೌರವಯುತವಾಗಿ ನೀಡೋದು ಧರ್ಮ’ ಹೇಳಿಕೆ ವಿವಾದ: ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು

ಸಕಲೇಶಪುರ ಪ್ರಜಾಸೇವೆ ಸಭೆಯಲ್ಲಿ "ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ಧರ್ಮ" ಎಂದು ಹೇಳಿಕೆ ನೀಡಿದ್ದ ಸಚಿವ ಶಿವಲಿಂಗೇಗೌಡರ ವಿರುದ್ಧ ಭ್ರಷ್ಟಾಚಾರ ಪ್ರಚೋದನೆ ಆರೋಪದಡಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ಸಂಬಂಧ ಪ್ರತಿಕ್ರಿಸಿರುವ ಸಚಿವ ಶಿವಲಿಂಗೇಗೌಡ, ನಾನೇನು ನೇರವಾಗಿ ಹಣ ಕೋಡೋಕೆ ಹೇಳಿದ್ನಾ? ಅಧಿಕಾರಿಗಳ ಜೊತೆ ಗೌರವ ಯುತವಾಗಿ ನಡೆದುಕೊಳ್ಳಿ ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

'ಅಧಿಕಾರಿಗಳಿಗೆ ಗೌರವಯುತವಾಗಿ ನೀಡೋದು ಧರ್ಮ' ಹೇಳಿಕೆ ವಿವಾದ: ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು
ಸಚಿವ ಶಿವಲಿಂಗೇಗೌಡImage Credit source: K M Shivalinge Gowda Facebook Page
ಪ್ರಸನ್ನ ಗಾಂವ್ಕರ್​
| Edited By: |

Updated on: Sep 21, 2026 | 1:55 PM

Share

ಬೆಂಗಳೂರು, ಸೆಪ್ಟೆಂಬರ್​​ 21: ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ “ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ” ಎಂಬ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ ವಿಚಾರವೀಗ ರಾಜ್ಯಪಾಲರ ಅಂಗಳ ತಲುಪಿದೆ. ಭ್ರಷ್ಟಾಚಾರಕ್ಕೆ ಉತ್ತೇಜನದ ಆರೋಪದ ಹಿನ್ನೆಲೆ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗವರ್ನರ್​​ಗೆ ಇಮೇಲ್​​ ಮೂಲಕ ದೂರು ಸಲ್ಲಿಸಿದ್ದಾರೆ. ಸಚಿವರ ಈ ಹೇಳಿಕೆಯು ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸಿದಂತಿದೆ. ಸಂವಿಧಾನದ ಪರಿಚ್ಛೇದ 14 (ಸಮಾನತೆಯ ಹಕ್ಕು) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ (Prevention of Corruption Act) ಸೆಕ್ಷನ್ 7, 8 ಮತ್ತು 12ರ (ಲಂಚ ಸ್ವೀಕಾರ, ನೀಡಿಕೆ ಹಾಗೂ ಪ್ರಚೋದನೆ) ಅಡಿಯಲ್ಲಿ ಇದು ಗಂಭೀರ ಪರಿಶೀಲನೆಗೆ ಒಳಪಡಬೇಕು ಎಂದವರು ಆಗ್ರಹಿಸಿದ್ದಾರೆ. ಸಚಿವ ಸ್ಥಾನದಿಂದ ಶಿವಲಿಂಗೇಗೌಡರನ್ನು ವಜಾಗೊಳಿಸುವಂತೆಯೂ ಮನವಿ ಮಾಡಿದ್ದಾರೆ.

ರಾಜ್ಯಪಾಲರಿಗರೆ ದೂರು: ಶಿವಲಿಂಗೇಗೌಡ ಹೇಳಿದ್ದೇನು?

ಇನ್ನು ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ಸಂಬಂಧ ಪ್ರತಿಕ್ರಿಸಿರುವ ಸಚಿವ ಶಿವಲಿಂಗೇಗೌಡ, ನಾನೇನು ನೇರವಾಗಿ ಹಣ ಕೋಡೋಕೆ ಹೇಳಿದ್ನಾ? ಅಧಿಕಾರಿಗಳ ಜೊತೆ ಗೌರವ ಯುತವಾಗಿ ನಡೆದುಕೊಳ್ಳಿ ಎಂದಿದ್ದೇನೆ ಅಷ್ಟೇ. ಯಾಕೆ ಇದನ್ನ ದೊಡ್ಡ ವಿಚಾರ ಮಾಡುತ್ತಿದ್ದಾರೆ? ರೈತರ ಸಮಸ್ಯೆ ಬಗ್ಗೆ ಯಾರು ಕೇಳ್ತಾರೆ? ಇದರ ಬಗ್ಗೆ ಯಾರು ಬರೆಯಲ್ಲ, ರಾಜ್ಯ ಪಾಲರಿಗೆ ಹೇಳ್ತಾರಾ? ಅಲ್ಲಿ‌ ಅಧಿಕಾರಿಗಳು ಮತ್ತು ರೈತರ ನಡುವೆ ಘರ್ಷಣೆ ನಡೀತಾ ಇತ್ತು. ನಮ್ಮ‌ಮೇಲೆ‌ ಗಲಾಟೆ ಮಾಡುತ್ತಾರೆ ಅಂತ ಅಧಿಕಾರಿ‌ ಹೇಳಿದ್ದ. ಹೀಗಾಗಿ ನಿಮ್ಮ ಕೆಲಸ ಆದ್ಮೇಲೆ ಸರಿಯಾಗಿ ಮಾತಾಡೋದು, ಸರಿಯಾಗಿ ಗೌರವ ನೀಡೋದು ಮಾಡಿ ಎಂದಿರೋದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

LIVE TV

ಇದನ್ನೂ ಓದಿ: ‘ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ’: ವಿವಾದ ಸೃಷ್ಟಿಸಿದ ಸಚಿವ ಶಿವಲಿಂಗೇಗೌಡರ ಹೇಳಿಕೆ

ವಿವಾದ ಏನು?

ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡರು, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಹೇಳಿದ್ದರು. ಸಚಿವರ ಮಾತಿಗೆ ಸ್ಥಳದಲ್ಲಿದ್ದ ಜನರು ಕೆರಳಿದ್ದು, ಗೌರವಯುತವಾಗಿ ಯಾಕೆ ಕೊಡಬೇಕು? ಅವರಿಗೆ ಸಂಬಳ ಕೊಡಲ್ವಾ? ಎಂದು ಪ್ರಶ್ನಿಸಿದ್ದರು. ಈ ವಿಡಿಯೋ ಭಾರಿ ವೈರಲ್​​ ಆಗಿದ್ದು, ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗ್ರಾಸವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us