ಹಾಸನ: ವೃದ್ಧೆ ನಾಪತ್ತೆ; ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಪುತ್ರನಿಂದ ದೂರು

ಮತಾಂತರ ಆಗದಿದ್ದರೆ ನಿನ್ನ ಮಗ, ಸೊಸೆ ಆರೋಗ್ಯ ಹಾಳಾಗುತ್ತದೆ ಎಂದು ಬೆದರಿಸಿದ್ದಾರೆ. ನನ್ನ ತಾಯಿ ನಾಪತ್ತೆ ಆಗಿದ್ದಾರೆ. ನಮ್ಮ ಅಮ್ಮನನ್ನು ಹಿಂದೂ ಧರ್ಮಕ್ಕೆ ಕರೆತನ್ನಿ ಎಂದು ಎಸ್​ಪಿ, ಜಿಲ್ಲಾಧಿಕಾರಿ, ವಿಶ್ವ ಹಿಂದೂಪರಿಷತ್​ಗೆ ಪುತ್ರ ಅರವಿಂದ ಮನವಿ ಮಾಡಿದ್ದಾರೆ.

ಹಾಸನ: ವೃದ್ಧೆ ನಾಪತ್ತೆ; ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಪುತ್ರನಿಂದ ದೂರು
ಪುಟ್ಟಮ್ಮ (65)
Updated By: preethi shettigar

Updated on: Oct 24, 2021 | 10:29 AM

ಹಾಸನ: ಏಕಾಂಗಿಯಾಗಿದ್ದ ತಾಯಿಗೆ ಸುಳ್ಳು ಹೇಳಿ ಹೆದರಿಸಿ ಮತಾಂತರ ಮಾಡಿರುವುದಾಗಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗೆ ಪುತ್ರ ದೂರು ನೀಡಿದ್ದಾರೆ. ನನ್ನ ಕುಟುಂಬ ಹಾಗೂ ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ. ನಾವು ಒಪ್ಪದಿದ್ದಾಗ ನಮ್ಮ ಮನೆ ಖಾಲಿ ಮಾಡಿಸಿ ನಮ್ಮ ತಾಯಿಯನ್ನು ಮತಾಂತರಿಗಳು ಕರೆದುಕೊಂಡು ಹೋಗಿದ್ದಾರೆ ಎಂದು ಪುತ್ರ ಅರವಿಂದ ಆರೋಪ ಮಾಡಿದ್ದಾರೆ.

ಮತಾಂತರ ಆಗದಿದ್ದರೆ ನಿನ್ನ ಮಗ, ಸೊಸೆ ಆರೋಗ್ಯ ಹಾಳಾಗುತ್ತದೆ ಎಂದು ಬೆದರಿಸಿದ್ದಾರೆ. ನನ್ನ ತಾಯಿ ನಾಪತ್ತೆ ಆಗಿದ್ದಾರೆ. ನಮ್ಮ ಅಮ್ಮನನ್ನು ಹಿಂದೂ ಧರ್ಮಕ್ಕೆ ಕರೆತನ್ನಿ ಎಂದು ಎಸ್​ಪಿ, ಜಿಲ್ಲಾಧಿಕಾರಿ, ವಿಶ್ವ ಹಿಂದೂಪರಿಷತ್​ಗೆ ಪುತ್ರ ಅರವಿಂದ ಮನವಿ ಮಾಡಿದ್ದಾರೆ.

ಕಳೆದ 8 ವರ್ಷದಿಂದ ಚನ್ನರಾಯಪಟ್ಟಣದ ಬಾಗೂರು ಮೈನ್ಸ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಪುಟ್ಟಮ್ಮ (65) ನಾಪತ್ತೆಯಾಗಿದ್ದಾರೆ. ಹೀಗಾಗಿ ಮೈನ್ಸ್​ನ ಮ್ಯಾನೇಜರ್ ಪತ್ನಿ ಶಾಂತಮ್ಮ ಎಂಬುವವರಿಂದ ಪುಟ್ಟಮ್ಮ ಮತಾಂತರವಾಗಿರುವುದಾಗಿ ಅರವಿಂದ ಆರೋಪ ಮಾಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಮರಗೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ವರ್ಷಗಳ ಹಿಂದೆಯೇ ತಾಯಿಯನ್ನು ಮಾತಾಂತರ ಮಾಡಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಗುಡಿಯನ್ನು ಒಡೆದು ಹಾಕಿದ್ದಾರೆ. ಈಗ ಮನೆಯನ್ನೇ ಬಿಡಿಸಿ ಖಾಲಿ ಮಾಡಿಸಿದ್ದಾರೆ ಎಂದು ಪುತ್ರ ಅರವಿಂದ ದೂರು ನೀಡಿದ್ದಾರೆ. ಅಲ್ಲದೇ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದವರ ವಿರುದ್ಧ ಕ್ರಮಕ್ಕೆ ಪುತ್ರ ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಮತಾಂತರ ಆರೋಪ: ಹುಬ್ಬಳ್ಳಿಯ ಚರ್ಚ್​ನಲ್ಲಿ ಕುಳಿತು ಭಜನೆ ಮಾಡಿ ಪ್ರತಿಭಟಿಸಿದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು

ನನ್ನ ತಾಯಿಯಿಂದಲೇ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅಭಿಯಾನ ಆರಂಭ; ಶಾಸಕ ಗೂಳಿಹಟ್ಟಿ ಶೇಖರ್