ನನ್ನ ತಾಯಿಯಿಂದಲೇ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅಭಿಯಾನ ಆರಂಭ; ಶಾಸಕ ಗೂಳಿಹಟ್ಟಿ ಶೇಖರ್

ಸದನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ನನ್ನ ವಿರುದ್ಧ ಮಿಷಿನರಿಗಳು, ಕೆಲ ಸಂಘಟನೆಗಳು ಕಿಡಿಕಾರಿವೆ. ಹುಟ್ಟಿನಿಂದ ಕ್ರೈಸ್ತರಾಗಿದ್ದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಆದರೆ ಮತಾಂತರದ ವಿರುದ್ಧ ನನ್ನ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ನನ್ನ ತಾಯಿಯಿಂದಲೇ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅಭಿಯಾನ ಆರಂಭ; ಶಾಸಕ ಗೂಳಿಹಟ್ಟಿ ಶೇಖರ್
ಮರಳಿ ಹಿಂದೂ ಧರ್ಮ ಸ್ವೀಕಾರ

ಚಿತ್ರದುರ್ಗ: ಇತ್ತೀಚಿಗಷ್ಟೇ ವಿಧಾನಸಭಾ ಅಧಿವೇಶನದಲ್ಲಿ ತಮ್ಮ ತಾಯಿಯೇ ಮತಾಂತರವಾಗಿರುವುದನ್ನು ನೆನೆದು ಕಣ್ಣೊದ್ದೆ ಮಾಡಿಕೊಂಡಿದ್ದರು ಶಾಸಕ ಗೂಳಿಹಟ್ಟಿ ಶೇಖರ್. ಇದೀಗ ಅವರ ನೇತೃತ್ವದಲ್ಲಿ ಹಿಂದೂ ಧರ್ಮದಿಂದ ಅನ್ಯಧರ್ಮಕ್ಕೆ ಮತಾಂತರವಾದ ಕುಟುಂಬವೊಂದು ಹಿಂದೂ ಧರ್ಮ ಮರಳಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬವೊಂದು ಹಿಂದೂ ಧರ್ಮ ಸ್ವೀಕರಿಸಿದೆ.

ಈಕುರಿತು ಟಿವಿ9 ಕನ್ನಡದ ಜತೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, ನಮ್ಮ ತಾಯಿಯಿಂದಲೇ ‘ಘರ್ ವಾಪಸಿ’ ಆರಂಭಿಸಿದ್ದೇವೆ. ಸದ್ಯ ನಮ್ಮ ತಾಯಿ ಮತ್ತು ನನ್ನ ಸಹೋದರನ ಮನೆಯಲ್ಲಿದ್ದಾರೆ. ಪೂಜೆ ಪುನಸ್ಕಾರ ಮಾಡಿಕೊಂಡು ಸಹಜ ಸ್ಥಿತಿಗೆ ಮರಳಿದ್ದಾರೆ ಇಂದು ಹಾಲುರಾಮೇಶ್ವರದಲ್ಲಿ ಕೆಲವರು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಬಲ್ಲಾಳ ಸಮುದ್ರ ಗ್ರಾಮದ ಕೆಲವರು ಸ್ವಧರ್ಮಕ್ಕೆ ಮರಳಿದ್ದಾರೆ. ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ. ಆರೋಗ್ಯ ಮತ್ತಿತರೆ ಸಂಕಷ್ಟಕ್ಕೆ ಸಿಲುಕಿದವರಿಗೆ ಬಲೆಬೀಸಿ ಮತಾಂತರ ನಡೆಯುತ್ತಿದೆ. ಹಿಂದೂ ಧರ್ಮಕ್ಕೆ ಹೋದರೆ ಕೇಡಾಗುತ್ತದೆಂದು ಭೀತಿ ಸೃಷ್ಠಿಸಲಾಗುತ್ತಿದೆ. ಸದನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ನನ್ನ ವಿರುದ್ಧ ಮಿಷಿನರಿಗಳು, ಕೆಲ ಸಂಘಟನೆಗಳು ಕಿಡಿಕಾರಿವೆ. ಹುಟ್ಟಿನಿಂದ ಕ್ರೈಸ್ತರಾಗಿದ್ದವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಆದರೆ ಮತಾಂತರದ ವಿರುದ್ಧ ನನ್ನ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಚಿತ್ರದುರ್ಗ: ಮತಾಂತರ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿ ದೂರಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್

Anti Conversion Law: ಮತಾಂತರ ವಿರೋಧಿ ಕಾನೂನು ತರುವ ರೀತಿ ಇದಲ್ಲ; ಕಾರಣ ಇಲ್ಲಿದೆ ನೋಡಿ

Read Full Article

Click on your DTH Provider to Add TV9 Kannada