15 ಲಕ್ಷ ಹಣ ಹಾಕ್ತೀನಿ ಅಂತಾ ಹೇಳೋಕ್ಕೆ ಮೋದಿ ಯಾರ ಹತ್ತಿರ ಅನುಮತಿ ತಗೊಂಡು ಘೋಷಣೆ ಮಾಡಿದರು?
ಹಾಸನದಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ(Anna Bhagya) ಒಟ್ಟು 10ಕೆಜಿ ಅಕ್ಕಿ ಘೋಷಣೆ ಮಾಡಿದ್ದು ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿದೆ. ಈ ಸಂಬಂಧ ಕಾಂಗ್ರೆಸ್(Congress) ಕಿಡಿಕಾರಿದ್ದು ಅನ್ಯ ರಾಜ್ಯಗಳಿಗೆ ಅಕ್ಕಿ ಪೂರೈಕೆಗೆ ಸಹರಿಸುವಂತೆ ಅಂಗಲಾಚಿದೆ. ಇದು ಬಂದು ಕಡೆಯಾತ್ರೆ ಮತ್ತೊಂದೆಡೆ ರಾಜ್ಯ ಸರ್ಕಾರ ಉಚಿತ ಅಕ್ಕಿ ಘೋಷಣೆ ವೇಳೆ ಕೇಂದ್ರ ಆಹಾರ ನಿಗಮ(FCI) ಜೊತೆ ಚರ್ಚೆ ಮಾಡಿಲ್ಲ ಎಂಬ ಆರೋಪಗಳು ಸಹ ಕೇಳಿಬಂದಿವೆ. ಈ ಸಂಬಂಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ(KN Rajanna) ಆಕ್ರೋಶ ಹೊರ ಹಾಕಿದ್ದು 15 ಲಕ್ಷ ಹಣ ಹಾಕ್ತೀನಿ ಅಂತಾ ಹೇಳೋಕ್ಕೆ ಮೋದಿ ಯಾರ ಹತ್ತಿರ ಅನುಮತಿ ತಗೊಂಡು ಘೋಷಣೆ ಮಾಡಿದರು? ಎಂದು ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ ಮಾಡಿ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಾಸನ ಜಿಲ್ಲೆ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಫ್ಸಿಐ ಜೊತೆ ಚರ್ಚೆ ಮಾಡಿ ನಾವು ಘೋಷಣೆ ಮಾಡಬೇಕಿಲ್ಲ. ಅವರೇನು ಪುಕ್ಕಟ್ಟೆ ಕೊಡ್ತಾರಾ ನಾವು ಖರೀದಿ ಮಾಡೋದು ಎಂದು ಎಫ್.ಸಿ.ಐ ಅಧಿಕಾರಿಗಳ ವಿರುದ್ಧ ಸಚಿವ ರಾಜಣ್ಣ ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಸಚಿವ ರಾಜಣ್ಣ, ಮೋದಿಯವರು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಣ ಹಾಕ್ತೀನಿ ಅಂತಾ ಹೇಳಿದ್ರಲ್ವಾ? ಅವರು ಅನುಮತಿ ತಗೊಂಡು ಘೋಷಣೆ ಮಾಡಿದ್ರಾ ಎಂದು ಕಿಡಿಕಾರಿದ್ರು.
ಇದನ್ನೂ ಓದಿ: ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗಿಳಿಸಿ: ಸಚಿವ ರಾಜಣ್ಣ ಎದುರು ಹಾಸನ ಕೈ ಕಾರ್ಯಕರ್ತರ ಗಲಾಟೆ
ನಾನು ತುಮಕೂರಿನವ, ಆದ್ರೆ ನನಗೆ ಹಾಸನ ಜಿಲ್ಲೆ ಉಸ್ತುವಾರಿ ಯಾಕೆ ಕೊಟ್ಟರೋ ಗೊತ್ತಿಲ್ಲ
ನನಗೆ ಹಾಸನ ಜಿಲ್ಲೆ ಉಸ್ತುವಾರಿ ಯಾಕೆ ಕೊಟ್ಟಿದಾರೊ ಗೊತ್ತಿಲ್ಲ. ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ, ಬಹುಶಃ ಬೇರೆ ಕಡೆ ಕೊಡಬಹುದು ಎಂದು ಕೊಂಡಿದ್ದೆ. ಶಿವಲಿಂಗೇಗೌಡ ಸಚಿವರಾಗಿದ್ರೆ ಅವರೇ ಉಸ್ತುವಾರಿ ಆಗೋರು. ಮುಂದೆ ಅವರೂ ಸಚಿವರು ಆಗಬಹುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಲ್ಲರಿಗು ಅನುಕೂಲ ಆಗಬೇಕು. ಜಿಲ್ಲೆ ಅಭಿವೃದ್ಧಿ ಆಗಿದೆ ಅದರ ಬಗ್ಗೆ ತಕರಾರು ಇಲ್ಲ. ಆದರೆ ಕಲವು ಕಡೆ ಸಾಕಷ್ಟು ಕೆಲಸ ಆಗಬೇಕು. ನನಗೆ ಹಾಸನ ಜಿಲ್ಲೆ ಉಸ್ತುವಾರಿ ಯಾಕೆ ಕೊಟ್ಟಿದಾರೊ ಗೊತ್ತಿಲ್ಲ. ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ, ಬಹುಶಃ ಬೇರೆ ಕಡೆ ಕೊಡಬಹುದು ಎಂದು ಕೊಂಡಿದ್ದೆ. ಶಿವಲಿಂಗೇಗೌಡ ಸಚಿವರಾಗಿದ್ರೆ ಅವರೇ ಉಸ್ತುವಾರಿ ಆಗೋರು. ಮುಂದೆ ಅವರೂ ಸಚಿವರು ಆಗಬಹುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಲ್ಲರಿಗು ಅನುಕೂಲ ಆಗಬೇಕು. ಜಿಲ್ಲೆ ಅಭಿವೃದ್ಧಿ ಆಗಿದೆ ಅದರ ಬಗ್ಗೆ ತಕರಾರು ಇಲ್ಲ. ಆದರೆ ಕಲವು ಕಡೆ ಸಾಕಷ್ಟು ಕೆಲಸ ಆಗಬೇಕು ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:56 pm, Sat, 17 June 23