ತಾಯಿಗೆ ಮೊಬೈಲ್‌ ಮೆಸೇಜ್ ಕಳುಹಿಸಿ ಕೆರೆಗೆ ಹಾರಿದ್ದ ಬಾಲಕಿ ಸೇಫ್​

ಹಾಸನ: ನಗರದ ಹೊರವಲಯದ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ.

ತಾಯಿಗೆ ಮೊಬೈಲ್‌ ಮೆಸೇಜ್ ಕಳುಹಿಸಿ ಕೆರೆಗೆ ಹಾರಿದ್ದ ಬಾಲಕಿ ಸೇಫ್​
ತಾಯಿಗೆ ಮೊಬೈಲ್‌ ಮೆಸೇಜ್ ಕಳುಹಿಸಿ ಕೆರೆಗೆ ಹಾರಿದ್ದ ಬಾಲಕಿ ಸೇಫ್​
Edited By:

Updated on: Nov 26, 2021 | 9:51 PM

ಹಾಸನ: ನಗರದ ಹೊರವಲಯದ ಕೆರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ. ಪೂರ್ವಿಕಾ ಪೊದೆಯೊಂದರಲ್ಲಿ ನಿತ್ರಾಣಗೊಂಡಿದ್ದಳು. ಬಾಲಕಿ ಪೂರ್ವಿಕಾಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಳಗಿನ ಸುದ್ದಿ:
ಹದಿಹರೆಯದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಲಾಗಿತ್ತು. ಹಾಸನದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪೂರ್ವಿಕಾ (15) ಆತ್ಮಹತ್ಯೆಗೆ ಯತ್ನಿಸಿದ್ದಳು. ಹಾಸನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿತ್ತು. ಸತ್ಯಮಂಗಲ ಬಡಾವಣೆಯ ಪ್ರಸಾದ್ ಮತ್ತು ಸುಬ್ಬಲಕ್ಷ್ಮಿ ಎಂಬುವವರ ಪುತ್ರಿ ಪೂರ್ವಿಕಾ, ತಾಯಿ ಮೊಬೈಲ್‌ಗೆ ‌ಮೆಸೇಜ್ ಕಳುಹಿಸಿ ಬೆಳಗಿನ ಜಾವ ಮನೆಯಿಂದ ಹೊರ ಹೋಗಿದ್ದಳು. ಬಳಿಕ, ವಿದ್ಯಾರ್ಥಿನಿ ಪೂರ್ವಿಕಾ ಆತ್ಮಹತ್ಯೆಗೆ ಯತ್ನಿಸಿದ್ದಳು. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ‘ ಎಂದು ತಾಯಿ ಮೊಬೈಲ್ ಗೆ ಪೂರ್ವಿಕಾ ಮೆಸೇಜ್ ಮಾಡಿದ್ದಳು.

ಅಗ್ನಿಶಾಮಕ ದಳದಿಂದ ಬಾಲಕಿಗಾಗಿ ಶೋಧಕಾರ್ಯ ನಡೆದಿತ್ತು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:
ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

Published On - 1:55 pm, Fri, 26 November 21