ಹಾಸನ: ಟ್ರಕ್ ಟರ್ಮಿನಲ್ (Truck Terminal) ದಂಗಲ್ ವಿಚಾರವಾಗಿ ಟ್ರಕ್ ಟರ್ಮಿನಲ್ ವ್ಯಾಪ್ತಿಯ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಙೆ ಜಾರಿ ಮಾಡಲಾಗಿದೆ. ಇಂದು ಪರ ವಿರೋಧ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷೆನ್ ಜಾರಿ ಮಾಡಲಾಗಿದ್ದು, ಇಂದು ಸಂಜೆಯಿಂದ ಮುಂದಿನ ಆದೇಶದ ವರೆಗೆ ನಿಷೇದಾಜ್ಙೆ ಜಾರಿಯಲ್ಲಿರಲಿದೆ. ವಿವಾದಿತ ಸ್ಥಳದಲ್ಲಿ ಯಾವುದೆ ಧರಣಿ ಹೊರಾಟ, ಪ್ರತಿಭಟನೆ ನಡೆಸದಂತೆ ನಿರ್ಬಂಧಿಸಲಾಗಿದೆ. ಬಿಜೆಪಿ ಜೆಡಿಎಸ್ ಪ್ರತಿಷ್ಟೆಯ ಕಾಳಗಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಉದ್ದೇಶಿತ ಟರ್ಮಿನಲ್ ಸ್ಥಳದಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರದಂತೆ ನಿರ್ಬಂಧ ಹೇರಲಾಗಿದೆ. ಇಂದು ಮದ್ಯಾಹ್ನದಿಂದ ಜೆಡಿಎಸ್ ಬಿಜೆಪಿ ನಡುವೆ ಪರ ವಿರೋದಿ ಹೋರಾಟಕ್ಕೆ ಕಾರಣವಾಗಿದ್ದ ಟ್ರಕ್ ಟರ್ಮಿನಲ್ ವಿಚಾರ, ಪರಿಸ್ಥಿತಿ ವಿಕೋಪಕ್ಕೆ ಹೋಗೋದನ್ನ ತಡೆಯಲು ಜಿಲ್ಲಾಧಿಕಾರಿ ನಿಷೇದಾಜ್ಙೆ ಜಾರಿಗೊಳಿಸಿ ಡಿಸಿ ಆರ್ ಗಿರೀಶ್ ಆದೇಶ ಹೊರಡಿಸಿದ್ದಾರೆ.
ನಡೆಯುತ್ತಿರೊ ಕೆಲಸ ನಿಲ್ಲಿಸಿ ಎಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದು, ಕೆಲಸ ನಿಲ್ಲಿಸಲು ಸಂಸದ ಪ್ರಜ್ಚಲ್ ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್ ನೇತೃತ್ವದ ತಂಡ ನುಗ್ಗಿ ಹೊರಟ ಮಾಡಿದ್ದಾರೆ. ಪೊಲೀಸ್ ಭದ್ರತೆ ನಡುವೆ ಟ್ರಕ್ ಟರ್ಮಿನಲ್ ಸ್ಥಳದಲ್ಲಿ ಕಾಂಪೌಂಡ್ ನಿರ್ಮಿಸುತ್ತಿರೊದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಂಸದರು ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್ ಮನವೊಲಿಕೆಗೆ ಎಸ್ಪಿ ಕಸರತ್ತು ಮಾಡಿದ್ದು, ಕೆಲಸ ನಿಲ್ಲಿಸಿ ಎಂದು ಜೆಡಿಎಸ್ ನಾಯಕರ ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಭೇಟಿ ನೀಡಿ, ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್, ಎಂಎಲ್ಸಿ ಸೂರಜ್ ಜತೆ ಚರ್ಚೆ ಮಾಡಿದರು. ಬಿಜೆಪಿ, JDS ಮಧ್ಯೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಲಾರಿ ನಿಲ್ದಾಣ, 2 ಗುಂಪುಗಳ ಜಮಾವಣೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡೂ ಗುಂಪುಗಳನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಕೆಲಸ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಆದರೆ, ಜಿಲ್ಲಾಡಳಿತದ ಕ್ರಮ ಖಂಡಿಸಿ ಜೆಡಿಎಸ್ ನಾಯಕರು ಹೋರಾಟ ಮುಂದುವರೆಸಿದ್ದಾರೆ.
ಟರ್ಮಿನಿಲ್ ನಿರ್ಮಾಣ ವಿರೋಧಿಸಿ ಸ್ಥಳೀಯರ ಜೊತೆ ಧರಣಿ ಮಾಡಿದ್ದು, ಟರ್ಮಿನಲ್ ನಿರ್ಮಾಣಕ್ಕೆ ಡಿಸಿ ಪರ್ಮಿಷನ್ ಇದೆ ಎಂದು ಎಸ್‌ಪಿ ಹೇಳಿದ್ದಾರೆ. ಹಾಸನ ಹೇಮಗಂಗೋತ್ರಿ ಕ್ಯಾಂಪಸ್ ಬಳಿ ಜಾಗದಲ್ಲಿ ಹೈಡ್ರಾಮಾ ನಡೆದಿದ್ದು, ಟರ್ಮಿನಲ್ ಆಗಬೇಕು ಎಂದು ಪ್ರೀತಂಗೌಡ ಬೆಂಬಲಿಗರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಿಡಲ್ಲ ಅಂತ H.D.ರೇವಣ್ಣ ಅಂತ್ತಿದ್ದಾರೆ. ಹೇಮಗಂಗೋತ್ರಿ ಯೂನಿವರ್ಸಿಟಿ ಕ್ಯಾಂಪಸ್ ಬಳಿ ಬಿಡುವುದಿಲ್ಲ ಬೇರೆ ಜಾಗದಲ್ಲಿ ಬೇಕಾದ್ರೆ ಟ್ರಕ್ ಟರ್ಮಿನಲ್ ನಿರ್ಮಿಸಿಕೊಳ್ಳಲಿ ಎಂದು ಹೆಚ್.ಡಿ.ರೇವಣ್ಣ ವಾದಕ್ಕೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ. ಇದು ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಎಂದು ಪ್ರೀತಂ ಹೇಳಿದ್ದಾರೆ. ವಿವಾದಿತ ಪ್ರದೇಶದಲ್ಲೇ ಎರಡೂ ಬಣಗಳ ಜನರೂ ಮೊಕ್ಕಾಂ ಹೊಡಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.