ಹಾಸನ, ಸೆಙ್ಟೆಂಬರ್ 14: ಒಂದು ತಹಸಿಲ್ದಾರ್ ಹುದ್ದೆಗಾಗಿ ಇಬ್ಬರು ಕೆಎಎಸ್ ಅಧಿಕಾರಿಗಳ (KAS officers) ನಡುವೆ ಜಟಾಪಟಿ ಜೋರಾಗಿ ನಡೆದಿದೆ. ಒಂದೇ ಕುರ್ಚಿಯಲ್ಲಿ ಕುಳಿತು ಇಬ್ಬರೂ ಆಡಳಿತ ನಡೆಸುತ್ತಿರುವುದರಿಂದ ಕೆಳಹಂತದ ಅಧಿಕಾರಿಗಳು ಇದೀಗ ಗೊಂದಲದಲ್ಲಿ ಸಿಲುಕಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಕಛೇರಿಯಲ್ಲಿ (Channarayapatna Tehsildar) ಈ ಕುರ್ಚಿ ಫೈಟ್ ನಡೆದಿದ್ದು ಗೋವಿಂದರಾಜ್ ಮತ್ತು ಗೀತಾ ನಡುವೆ ಜಟಾಪಟಿ ನಡೆದಿದೆ. ಎರಡು ತಿಂಗಳ ಹಿಂದೆ ಗೋವಿಂದ್ ರಾಜ್ ರನ್ನ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಗೀತಾರನ್ನ ಸರ್ಕಾರ ನಿಯೋಜನೆ ಮಾಡಿತ್ತು. ಆದರೆ ಎರಡು ವರ್ಷದ ಮೊದಲೇ ವರ್ಗಾವಣೆ ಮಾಡಲಾಗಿದೆ ಎಂದು ಕೆಎಟಿ ಮೊರೆ ಹೊಗಿದ್ದ ಗೋವಿಂದ ರಾಜ್ ಅವರು ಎರಡು ದಿನದ ಹಿಂದೆ ತಮ್ಮ ವರ್ಗಾವಣೆಯ ಆದೇಶಕ್ಕೆ ಕೆಎಟಿಯಿಂದ ತಡೆತಂದಿದ್ದರು.
ಕೆಎಟಿ ತೀರ್ಪಿನಂತೆ ಗೋವಿಂದರಾಜ್ ನಿನ್ನೆ ಬುಧವಾರ ಸಂಜೆ ಕಛೇರಿಗೆ ಹಾಜರಾದರು. ಆದರೆ ಸಂಜೆವರೆಗೂ ಗೀತಾ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದರು. ಸಂಜೆಯಾಗುತ್ತಲೇ ಗೋವಿಂದರಾಜ್ ಕಛೇರಿಗೆ ಬಂದು ಅಧಿಕಾರಿಗಳ ಸಭೆ ನಡೆಸಿದರು. ಆಗ ಜನ ಹಾಗೂ ತಾಲ್ಲೂಕು ಆಡಳಿತ ಅಸಲಿಗೆ ಚನ್ನರಾಯಪಟ್ಟಣ ತಹಶಿಲ್ದಾರ್ ಯಾರು ಎಂದು ಗೊಂದಲಕ್ಕೆ ಸಿಲುಕಿದರು.
ಇದನ್ನೂ ಓದಿ: ನಕಲಿ ನಾಯಕರುಗಳ ಮಧ್ಯೆ ಒಮ್ಮೆ ಅಸಲಿ ಸಚಿವರನ್ನೇ ಭೇಟಿ ಮಾಡಿಸಿದ್ದ ಮಿಸ್ ಚೈತ್ರಾ ಕುಂದಾಪುರ
ಈ ಮಧ್ಯೆ, ಗೋವಿಂದರಾಜ್ ಅವರು ಕೋರ್ಟ್ ತೀರ್ಪಿನ ಬಳಿಕ ತಹಶಿಲ್ದಾರ್ ಗೀತಾ ನಾಮಫಲಕವನ್ನು ತೆರವು ಮಾಡಿಸಿದ್ದರು. ಆದರೆ ಗೋವಿಂದರಾಜ್ ನಾಮಫಲಕ ತೆರವು ಮಾಡಿ ತಾವೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಗೀತಾ. ಒಟ್ಟಿನಲ್ಲಿ ಇಬ್ಬರು ಉನ್ನತಾಧಿಕಾರಿಗಳ ಕುರ್ಚಿ ಫೈಟ್ ಕುತೂಹಲ ಮೂಡಿಸಿದೆ.
ಕೋರ್ಟ್ ತೀರ್ಪು ಮತ್ತು ಸರ್ಕಾರದ ಆದೇಶ ಈ ಎರಡರ ನಡುವೆ ಯಾವುದರ ಪಾಲನೆ ಮಾಡಬೇಕು ಎಂಬುದರ ಬಗ್ಗೆ ಜಿಲ್ಲಾಡಳಿತ ಗೊಂದಲಕ್ಕೆ ಸಿಲುಕಿದೆ. ಈ ಹಿಂದೆ, ಗೋವಿಂದರಾಜ್ ಅವರು 16 ತಿಂಗಳು ಚನ್ನರಾಯಪಟ್ಟಣ ತಹಶಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಗೋವಿಂದರಾಜ್ ರನ್ನ ಕೋಲಾರದ ಅಕ್ರಮ ಭೂಮಿ ತನಿಖೆ ಇಂಡೀಕರಣ ತನಿಖಾಧಿಕಾರಿಯಾಗಿ ಸರ್ಕಾರ ನಿಯೋಜನೆ ಮಾಡಿದೆ. ಆದರೆ ತಹಶಿಲ್ದಾರ್ ಗೋವಿಂದರಾಜ್ ಅವರು ಸರ್ಕಾರದ ನಡೆ ಪ್ರಶ್ನಿಸಿ ಆಡಳಿತಾತ್ಮಕ ನ್ಯಾಯಾಧಿಕಾರಣದ ಮೊರೆ ಹೋಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ