ಹಾಸನ: ಸರ್ವೆ ಇಲಾಖೆಯಲ್ಲಿ ಕೆಲಸವಾಗಲಿಲ್ಲ ಎಂಬ ಕಾರಣಕ್ಕೆ ರೈತನೊಬ್ಬ ತೆಂಗಿನ ಮರ ಏರಿ ಪ್ರತಿಭಟನೆ ಮಾಡಿದ ಘಟನೆ ಚೆನ್ನರಾಯಪಟ್ಟದಲ್ಲಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿಯ ಸೂರಪ್ಪ ಎಂಬ ರೈತ ಪ್ರತಿಭಟನೆ ನಡೆಸಿದ್ದಾನೆ. ಚನ್ನರಾಯಪಟ್ಟಣ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ರೈತ ಸೂರಪ್ಪ ಮರವೇರಿ ಪ್ರತಿಭಟನೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಕೆಲಸ ಮಾಡಿಕೊಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾನೆ. ಬಳಿಕ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಮರದಿಂದ ಕೆಳಗಿಳಿದಿದ್ದಾನೆ.
ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟಿಸಲು ತೆಂಗಿನ ಮರ ಏರಿದ ರೈತ, ಸರ್ವೆ ಇಲಾಖೆಯಲ್ಲಿ ಕೆಲಸವಾಗದ್ದಕ್ಕೆ ಕೆಲಸ ಮಾಡಿಕೊಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನ ಕೆಲಸವಾಗುವವರೆಗೂ ಮರದಿಂದ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದು ಕೂತಿದ್ದ ರೈತನನ್ನು ನಂತರ ಅಧಿಕಾರಿಗಳು ಸಮಾಧಾನಿಸಿದ್ದಾರೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅಣ್ಣ ತಮ್ಮಂದಿರೊಂದಿಗೆ ಜಮೀನು ವ್ಯಾಜ್ಯ ಸಮಸ್ಯೆಯಿಂದ ಬೇಸತ್ತ ಸೂರಪ್ಪ ಎಂಬ ರೈತ ಹೀಗೆ ಮಾಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: Shocking Video: ಗ್ರಾಹಕರಿಗೆ ಕೊಡಬೇಕಾಗಿದ್ದ ಊಟ ಕದ್ದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಪ್ರವಾಸಕ್ಕೆ ಬರುವ ಯುವತಿಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ
(Video goes viral of a Farmer protesting by climbing Coconut Tree in Hassan)
Published On - 5:44 pm, Wed, 18 August 21