ಮೊಬೈಲ್, ಪುಸ್ತಕ, ಹೋಂ ವರ್ಕ್ ಅದು ಇದು ಅಂತಾ ಬ್ಯೂಜಿ ಆಗಿರುತ್ತಿದ್ದ ಮಕ್ಕಳು ದೇಶೀಯ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು. ಮಕ್ಕಳ ದೇಶೀಯ ಆಟಗಳ ಸಂಭ್ರಮ ಕಂಡುಬಂದಿದ್ದು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ. ಹಾವೇರಿಯ ಶಿಕ್ಷಕರ ಬಳಗದವರು ಮಕ್ಕಳ ದಿನಾಚರಣೆ ಪ್ರಯುಕ್ತ ಭಾನುವಾರದಂದು ಮಕ್ಕಳ ಹಬ್ಬ ಆಯೋಜಿಸಿತ್ತು. ವಿಶೇಷವಾಗಿ ಅದೆಷ್ಟೋ ಮಕ್ಕಳಿಗೆ ಪರಿಚಯವೆ ಇಲ್ಲದ ಚಿನ್ನಿದಾಂಡು, ಸರಗೋಲು, ಬುಗುರಿ ಆಟ, ಮಂಗನ ಆಟ, ಕುಂಟಬಿಲ್ಲೆ, ಹಗ್ಗಜಗ್ಗಾಟ, ಲಗೋರಿ ಹೀಗೆ ಹಲವಾರು ದೇಶೀಯ ಆಟಗಳನ್ನು ಮಕ್ಕಳಿಗಾಗಿ ಆಯೋಜನೆ ಮಾಡಲಾಗಿತ್ತು.
ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಮೊಬೈಲ್ ಗೀಳು ಹೊತ್ತಿಸಿಕೊಂಡು ಹೋಂ ವರ್ಕ್ ಅದು ಇದು ಅಂತಾ ಮೈಮರಿತಿದ್ದ ಮಕ್ಕಳು ಭಾನುವಾರದಂದು ದೇಶೀಯ ಆಟಗಳನ್ನು ಆಡಿದರು. ಜಿಲ್ಲಾ ಕ್ರೀಡಾಂಗಣದ ತುಂಬ ಮಕ್ಕಳು ಅಲ್ಲಲ್ಲಿ ಗುಂಪು ಗುಂಪಾಗಿ ದೇಶೀಯ ಆಟಗಳನ್ನು ಆಡಿದರು. ಮೈದಾನದ ತುಂಬ ಹಗ್ಗಾಜಗ್ಗಾಟ, ಲಗೋರಿ, ಕುಂಟಬಿಲ್ಲೆ, ಚಕ್ಕ, ಹುಲಿಮನಿ, ಬುಗುರಿ ಆಟಗಳ ಕಲರವ ಮನೆ ಮಾಡಿತ್ತು. ಮಕ್ಕಳು ಖುಷಿ ಖುಷಿಯಿಂದ ದೇಶೀಯ ಆಟಗಳನ್ನು ಆಡಿ ಸಂಭ್ರಮಿಸಿದರು.
Haveri Desi sports Parents and teachers dance with children haveri news in kannada