ಹಾವೇರಿ: ಮಾಜಿ ಸೈನಿಕ (Ex Serviceman) ಹಾಗೂ ಆತನ ಕುಟುಂಬಸ್ಥರು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ (Haveri SP) ಮುಂದೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಡಿಸೆಂಬರ್ 23, 2021ರಂದು ನಡೆದಿದ್ದ ಅಮೃತಾ ಎಂಬುವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ. ಅಮೃತಾಳದ್ದು ಆತ್ಮಹತ್ಯೆ ಅಲ್ಲ, ಕೊಲೆ ಅಂತಾ ಹಾವೇರಿ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯಲ್ಲಿ ಅಮೃತಾಳ ಅಣ್ಣ ದೂರು ದಾಖಲಿಸಿದ್ದರು.
ಅಮೃತಾಳದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಆರೋಪ:
ಪ್ರಕರಣ ದಾಖಲಿಸಿದ ನಂತರ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಅಂತಾ ಆರೋಪಿಸಿ ಮಾಜಿ ಸೈನಿಕ ಮತ್ತು ಅವರ ಸಂಬಂಧಿಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮುನ್ನ ಮಾರ್ಚ್ 16, 2022ರಂದು ಅಮೃತಾಳ ಗಂಡನ ಮನೆಯವರು ಮಾಜಿ ಸೈನಿಕ ಬಸಲಿಂಗಪ್ಪ ಸೇರಿದಂತೆ 19 ಜನರ ವಿರುದ್ಧ ಪ್ರತಿದೂರು ದಾಖಲಿಸಿದ್ದರು. ಅಮೃತಾ ಆತ್ಮಹತ್ಯೆ ವಿಚಾರವಾಗಿ ಮನೆಗೆ ನುಗ್ಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿತ್ತು.
Also Read:
Also Read:
ಮಗಳ ಸಾವಿನ ಬಗ್ಗೆ ಪೊಲೀಸರು ಸರಿಯಾದ ತನಿಖೆ ಮಾಡುತ್ತಿಲ್ಲ, ಜೊತೆಗೆ ಈಗ ತಮ್ಮ ಕುಟುಂಬದ 19 ಜನರ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ಅಂತಾ ಆಕ್ರೋಶ ಹೊರಹಾಕಿದ್ದಾರೆ. ಅಮೃತಾಳ ತಾಯಿ ಹಾಗೂ ಸಂಬಂಧಿಕರು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಕಣ್ಣೀರು ಹಾಕಿದ್ದು ಕಂಡುಬಂದಿತು. ಅಮೃತಾಳ ಸಾವಿನ ಪ್ರಕರಣದ ತನಿಖೆ ಬಗ್ಗೆ ಕೇಳಲು ಬಂದರೆ ಎಸ್ಪಿ ಹನುಮಂತರಾಯ ಅವರು ನಮ್ಮನ್ನೇ ಒಳಗೆ ಹಾಕಿ ಅಂತಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ಪಿ ವಿರುದ್ಧ ಆಕ್ರೋಶ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Thu, 2 June 22