ರೋಗಿಗಳ ನೆರವಿಗೆ ನಿಂತು, ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದ್ದಾರೆ ಹಾವೇರಿಯ ಅಬ್ದುಲ್ ಖಾದರ

ಅಬ್ದುಲ್ ಖಾದರ ಎಂಬುವವರು ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದಾರೆ. ಇವರಿಗೆ ನಲವತ್ತೈದು ವರ್ಷ. ಹಾವೇರಿ ನಗರದ ಸುಭಾಸ ವೃತ್ತದ ಬಳಿಯ ನಿವಾಸಿ. ಅಬ್ದುಲ್ ಖಾದರ ಸುಭಾಸ ವೃತ್ತದಲ್ಲಿ ಸಹೋದರರ ಜೊತೆ ವೆಲ್ಡಿಂಗ್ ಶಾಪ್​ನಲ್ಲಿ ಕೆಲಸ ಮಾಡುತ್ತಾರೆ.

ರೋಗಿಗಳ ನೆರವಿಗೆ ನಿಂತು, ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದ್ದಾರೆ ಹಾವೇರಿಯ ಅಬ್ದುಲ್ ಖಾದರ
ಅಬ್ದುಲ್ ಖಾದರ
Follow us
sandhya thejappa
|

Updated on: May 02, 2021 | 8:54 AM

ಹಾವೇರಿ: ಜನರು ಕೊರೊನಾ ಸೋಂಕಿಗೆ ಅಕ್ಷರಶಃ ಭಯ ಬಿದ್ದಿದ್ದಾರೆ. ಮನೇಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದರೆ ಅವರನ್ನು ಬೇರೆ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಅವರ ಮನೆಯವರೂ ಬಾರದಂಥಾ ದುಃಸ್ಥಿತಿ ಎದುರಾಗಿದೆ. ಈ ನಡುವೆ ಜಿಲ್ಲೆಯಲ್ಲೊಬ್ಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿರುವವರು, ಅನಾಥರನ್ನು ತಮ್ಮ ಮನೆಯವರೆಂದು ಭಾವಿಸಿ ಸಲಹುತ್ತಿದ್ದಾರೆ. ಜೊತೆಗೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಕೂಡ ಮಾಡುತ್ತಿದ್ದಾರೆ.

ಅಬ್ದುಲ್ ಖಾದರ ಎಂಬುವವರು ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನು ಮಾಡುತ್ತಿದ್ದಾರೆ. ಇವರಿಗೆ ನಲವತ್ತೈದು ವರ್ಷ. ಹಾವೇರಿ ನಗರದ ಸುಭಾಸ ವೃತ್ತದ ಬಳಿಯ ನಿವಾಸಿ. ಅಬ್ದುಲ್ ಖಾದರ ಸುಭಾಸ ವೃತ್ತದಲ್ಲಿ ಸಹೋದರರ ಜೊತೆ ವೆಲ್ಡಿಂಗ್ ಶಾಪ್​ನಲ್ಲಿ ಕೆಲಸ ಮಾಡುತ್ತಾರೆ. ವೃತ್ತಿಯ ಜೊತೆಗೆ ಆರೇಳು ವರ್ಷಗಳಿಂದ ಅನಾಥರು ಮತ್ತು ಬಡ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಯಾವುದೇ ರೋಗಿಗಳು ಏನಾದರೂ ಸಹಾಯ ಬೇಕೆಂದು ಕರೆ ಮಾಡಿದರೆ ಅಬ್ದುಲ್ ಖಾದರ ತಕ್ಷಣ ಅಲ್ಲಿಗೆ ಧಾವಿಸಿ ಬಡವರು, ಅನಾಥ ರೋಗಿಗಳ ನೆರವಿಗೆ ನಿಲ್ಲುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮ ಮನೆಯಿಂದಲೇ ರೋಗಿಗಳಿಗೆ ಊಟ, ಟಿಫಿನ್ ತಂದುಕೊಟ್ಟು ಬಡರೋಗಿಗಳ ಆರೈಕೆ ಮಾಡುತ್ತಿದ್ದಾರೆ.

ಕಳೆದೊಂದು ವರ್ಷದಿಂದ ಎಲ್ಲೆಲ್ಲೂ ಕೊರೊನಾ ಅಬ್ಬರ ಶುರುವಾಗಿದೆ. ಆದರೆ ಅಬ್ದುಲ್ ಖಾದರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಧರಿಸಿ, ಹ್ಯಾಂಡ್ ಗ್ಲೋಸ್ ಹಾಕಿಕೊಂಡು, ಆಗಾಗ ಸ್ಯಾನಿಟೈಸರ್ ಬಳಸುತ್ತಾ ಬಡವರು, ಅನಾಥ ರೋಗಿಗಳ ನೆರವಿಗೆ ನಿಲ್ಲುತ್ತಿದ್ದಾರೆ. ಈಗಂತೂ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಜನರು ಅಕ್ಷರಶಃ ಭಯದ ವಾತಾವರಣದಲ್ಲಿ ಮುಳುಗಿದ್ದಾರೆ. ಮನೆಯಲ್ಲಿನ ಯಾರಿಗಾದರೂ ಏನಾದರೂ ಆರೋಗ್ಯ ಸಮಸ್ಯೆ ಎದುರಾದರೆ ಭಯದಿಂದ ನೋಡುವ ವಾತಾವರಣವಿದೆ. ಹೀಗಿದ್ದೂ ಯಾರಾದರೂ ಸಹಾಯ ಬೇಕು ಎಂದಾದರೆ ಅಬ್ದುಲ್ ಖಾದರ ಹಿಂದೆ ಮುಂದೆ ನೋಡದೆ ರೋಗಿಗಳ ನೆರವಿಗೆ ನಿಲ್ಲುತ್ತಿದ್ದಾರೆ.

ಹತ್ತೊಂಬತ್ತು ಕೊರೊನಾ ಶವಗಳ ಅಂತ್ಯಕ್ರಿಯೆ ರಸ್ತೆ, ಮಾರ್ಕೆಟ್ ಹೀಗೆ ಎಲ್ಲಿಯಾದರೂ ಅನಾಥರು ಸಾವನ್ನಪ್ಪಿದ್ದರೆ ಅಬ್ದುಲ್ ಖಾದರ ಅಲ್ಲಿಗೆ ಬಂದು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ದಾಖಲಿಸುತ್ತಾರೆ. ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಯಾರೂ ಸಂಬಂಧಿಕರು ಬರದೇ ಇದ್ದಾಗ ಅಬ್ದುಲ್ ಖಾದರ ಅನಾಥ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಾರೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಹತ್ತೊಂಬತ್ತು ಜನರ ಅಂತ್ಯಕ್ರಿಯೆ ಮಾಡಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಪಿಪಿಇ ಕಿಟ್ ಧರಿಸಿ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದ್ದಾರೆ. ಕೊರೊನಾದಿಂದ ಮೃತಪಟ್ಟವರು ಮಾತ್ರವಲ್ಲದೆ ಅನೇಕ ಅನಾಥರ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೊನಾ ಎರಡನೇ ಅಲೆಯ ಅಬ್ಬರದ ಈ ಸಮಯದಲ್ಲೂ ಜಿಲ್ಲಾಸ್ಪತ್ರೆಯಲ್ಲೇ ಹೆಚ್ಚಾಗಿ ಇದ್ದು, ಸಮಸ್ಯೆ ಹೇಳಿಕೊಂಡು ಬರುವ ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಜೊತೆ ನಿಂತು ಅನಾಥರಿಗೆ ಸಹಾಯ ಮಾಡುವ ಮೂಲಕ ಇಲಾಖೆಗೂ ಸಹಕಾರಿ ಆಗುತ್ತಿದ್ದಾರೆ.

ಇದನ್ನೂ ಓದಿ

ಕೊರೊನಾದಿಂದ ಸ್ನೇಹಿತನನ್ನ ಕಳೆದುಕೊಂಡು ಸ್ಮಶಾನದಲ್ಲಿ ಮರುಗಿದ ಜಿಮ್​ ರವಿ

ಕೊರೊನಾಗೆ ಪತಿ ಬಲಿ, ಪತ್ನಿಗೂ ಪಾಸಿಟಿವ್; ಸಾವು ಬದುಕಿನ ನಡುವೆ ಮಗನ ಹೋರಾಟ

(Haveri man is making funerals of orphaned corpses)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್