AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ಪತಿ ಬಲಿ, ಪತ್ನಿಗೂ ಪಾಸಿಟಿವ್; ಸಾವು ಬದುಕಿನ ನಡುವೆ ಮಗನ ಹೋರಾಟ

ಕೊರೊನಾದಿಂದಾಗಿ ಪತಿ ಸಾವನ್ನಪ್ಪಿದ್ದು, ಪತ್ನಿಗೂ ಸೋಂಕು ತಗುಲಿದೆ. ಇನ್ನೊಂದು ಕಡೆ ಪುತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. 14 ವರ್ಷದ ಮಗನ ಸ್ಥಿತಿ ಕೂಡ ತೀರಾ ಗಂಭೀರವಾಗಿದ್ದು, ಅಪೆಂಡಿಕ್ಸ್ ಆಗಿ, ಹೊಟ್ಟೆಯಲ್ಲಿ ಗಡ್ಡೆ ಒಡೆದಿದೆ.

ಕೊರೊನಾಗೆ ಪತಿ ಬಲಿ, ಪತ್ನಿಗೂ ಪಾಸಿಟಿವ್; ಸಾವು ಬದುಕಿನ ನಡುವೆ ಮಗನ ಹೋರಾಟ
ಸಂಗ್ರಹ ಚಿತ್ರ
preethi shettigar
|

Updated on: May 02, 2021 | 7:48 AM

Share

ಬೆಂಗಳೂರು: ಕೊರೊನಾ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಕೂಡ ಏರಿಕೆ ಕಂಡುಬಂದಿದೆ. ಈ ರೀತಿ ಸಾವು ನೋವಿನಿಂದಾಗಿ ನರಳಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಅಂತೆಯೇ ಬೆಂಗಳೂರಿನಲ್ಲಿ ಕೊರೊನಾ ಸೋಂಕು  ವ್ಯಕ್ತಿಯೊರ್ವರನ್ನು ಬಲಿ ಪಡೆದಿದೆ. ಇತ್ತ ಗಂಡನನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಪತ್ನಿಗೂ ಕೂಡ ಕೊರೊನಾ ದೃಢಪಟ್ಟಿದೆ.

ಕೊರೊನಾದಿಂದಾಗಿ ಪತಿ ಸಾವನ್ನಪ್ಪಿದ್ದು, ಪತ್ನಿಗೂ ಸೋಂಕು ತಗುಲಿದೆ. ಇನ್ನೊಂದು ಕಡೆ ಪುತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. 14 ವರ್ಷದ ಮಗನ ಸ್ಥಿತಿ ಕೂಡ ತೀರಾ ಗಂಭೀರವಾಗಿದ್ದು, ಅಪೆಂಡಿಕ್ಸ್ ಆಗಿ, ಹೊಟ್ಟೆಯಲ್ಲಿ ಗಡ್ಡೆ ಒಡೆದಿದೆ. ಸದ್ಯ 10ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಮಗ, ಅಪ್ಪನ ಅಂತ್ಯಸಂಸ್ಕಾರ ಮಾಡಲಾಗದ ಸ್ಥಿತಿಯಲ್ಲಿದ್ದಾನೆ.

ಆಟೋ ಓಡಿಸುತ್ತಿದ್ದ 45 ವರ್ಷದ ಪತಿ ಕೊವಿಡ್​ಗೆ ಬಲಿಯಾಗಿದ್ದಾರೆ. ಒಂದೆಡೆ ಗಂಡನನ್ನ ಕಳೆದುಕೊಂಡ ನೋವು, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಮಗನ ನರಳಾಟ. ಇನ್ನು ಆಕೆಗೂ ಕೂಡ ಸೋಂಕು ತಗುಲಿದೆ. ಆದರೂ ಕೂಡ ನಿನ್ನೆ ಪಿಪಿಇ ಕಿಟ್ ಧರಿಸಿ ಪತ್ನಿ ಗಂಡನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದರು. ಇನ್ನೆರಡು ದಿನಗಳಲ್ಲಿ ಮನೆಗೆ ಬರ್ತೀನಿ ಎಂದು ಹೇಳಿದ್ದರು. ಬಂದೋರು, ಮಸಣಕ್ಕೆ ಬರುತ್ತಾರೆ ಅಂತ ಗೊತ್ತಿರಲಿಲ್ಲ ಎಂದು ಕೊರೊನಾ ಸೋಂಕಿಗೆ ಬಲಿಯಾದ ವ್ಯಕ್ತಿಯ ಪತ್ನಿ ಟಿವಿ9 ಡಿಜಿಟಲ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:

ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ; ಬೆಂಗಳೂರಿನಲ್ಲಿ 28 ವರ್ಷದ ಯುವಕನ ಸಾವು

ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಕೊರೊನಾ ವಾರಿಯರ್ ಸಾವು; ಬಾಗೇಪಲ್ಲಿ ಠಾಣೆಯ ಹೆಡ್ ಕಾನ್​ಸ್ಟೇಬಲ್ ಇನ್ನಿಲ್ಲ