86th Kannada Sahitya Sammelana: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿನ್ನಾಭಿಪ್ರಾಯ ಬಿಸಿ: ವಿರೋಧಿಸಿದ್ದವರನ್ನು ಚರ್ಚೆಗೆ ಆಹ್ವಾನಿಸಿದ ಸರ್ವಾಧ್ಯಕ್ಷ ದೊಡ್ಡ ರಂಗೇಗೌಡ

| Updated By: ವಿವೇಕ ಬಿರಾದಾರ

Updated on: Jan 08, 2023 | 8:37 PM

ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ.

86th Kannada Sahitya Sammelana: ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿನ್ನಾಭಿಪ್ರಾಯ ಬಿಸಿ: ವಿರೋಧಿಸಿದ್ದವರನ್ನು ಚರ್ಚೆಗೆ ಆಹ್ವಾನಿಸಿದ ಸರ್ವಾಧ್ಯಕ್ಷ ದೊಡ್ಡ ರಂಗೇಗೌಡ
Follow us on

ಹಾವೇರಿ: ಹಾವೇರಿಯ, ಹಾವೇರಿ-ಹುಬ್ಬಳ್ಳಿ ರಸ್ತೆಯ ಅಜ್ಜಯ್ಯ ದೇವಸ್ಥಾನದ ಎದುರು ಮೂರು ದಿನಗಳ ಕಾಲ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (86th Akhil Bharat Kannada Sahitya Sammelana) ಇಂದು (ಜ.8) ತೆರೆ ಎಳೆಯಲಾಗಿದೆ. ಈ ಸಮ್ಮೇಳನದಿಂದ ಮುಸ್ಲಿಂ ಸಾಹಿತಿಗಳು ಹಾಗೂ ಕವಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಇಂದು ಬೆಂಗಳೂರಲ್ಲಿ ಪ್ರತ್ಯೇಕ ಸಮ್ಮೇಳನವನ್ನು ಮಾಡಲಾಯಿತು. ಈ ಆರೋಪಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಈಗಾಗಲೆ ಸ್ಪಷ್ಟನೆ ನೀಡಿದ್ದಾರೆ. ಈಗ ಸಮ್ಮೇಳನದ ಸರ್ವಾಧ್ಯಕ್ಷರಾದ ದೊಡ್ಡರಂಗೇಗೌಡರು (Doddarange Gowda) 86ನೇ ಕನ್ನಡ ಸಮ್ಮೇಳನ ವಿರೋಧಿಸುವವರಿಗೆ ನನ್ನ ಪ್ರಾರ್ಥನೆ, ಬನ್ನಿ ಸಾಹಿತ್ಯ ಪರಿಷತ್‌ ಅಡಿಯಲ್ಲಿ ಚರ್ಚಿಸೋಣ ಎಂದು ಪಂಥಾಹ್ವಾನ ನೀಡಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ನುಡಿಗಳನ್ನಾಡಿದ ಅವರು 86ನೇ ಸಾಹಿತ್ಯ ಸಮ್ಮೇಳನ ವಿರೋಧಿಸಿದವರಿಗೆ ಪ್ರಾರ್ಥಿಸುತ್ತೇನೆ, ಕನ್ನಡ ಸಾಹಿತ್ಯ ಪರಿಷತ್‌ಗೆ ಬನ್ನಿ. ಅಭಿಪ್ರಾಯ ಬೇರೆ ಇರಬಹುದು, ಕುಳಿತು ಬಗೆಹರಿಸಿಕೊಳ್ಳೋಣ. ಕನ್ನಡದ ಐಕ್ಯತೆ ಪ್ರದರ್ಶನ ಮಾಡಬೇಕಿದೆ. ಇಡೀ ವಿಶ್ವ ಸಾಹಿತ್ಯದಲ್ಲಿ ನಮ್ಮ ಕನ್ನಡಕ್ಕೆ ಮಹತ್ವದ ಸ್ಥಾನವಿದೆ. ಅದನ್ನು ಇನ್ನೂ ಎತ್ತರೆತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಹೀಗಾಗಿ ವಿರೋಧಿ ಸಾಹಿತಿಗಳು, ಕವಿಗಳು ಎಲ್ಲರೂ ಬರಬೇಕು. ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದು ನೀವೆಲ್ಲಾ ಚರ್ಚೆ ಮಾಡಬೇಕು. ಬರೀ ಟೀಕಿಸುವುದರಿಂದ ಪ್ರಯೋಜನವಿಲ್ಲ. ಚರ್ಚೆ ಮಾಡಿ ನಿರ್ಣಯ ಮಾಡೋಣ ಬನ್ನಿ ಅಂತ ಆಹ್ವಾನ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.