ಹಾವೇರಿ: ಡಿಕೆಶಿ ಮೇಲೆ ಒಂದೂ ಕೇಸ್ ಇಲ್ಲವೆ? ಡಿ.ಕೆ.ಶಿವಕುಮಾರ್ ಈಗ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರು ಕೂಡ ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಅಭ್ಯರ್ಥಿ ಅರುಣ್ ಮೇಲೆ ಕೇಸ್ಗಳಿವೆ. ಆದ್ರೂ ಬಿಜೆಪಿ ಟಿಕೆಟ್ ನೀಡಿದೆ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ನಾವು ಎದೆ ತಟ್ಟಿ ಹಿಂದೂ ಅಂತಾ ಹೇಳಿಕೊಳ್ತೇವೆ. ಆದರೆ ಜಾತಿ ರಾಜಕಾರಣ ಮಾಡುತ್ತಿರೋದು ಯಾರು? ಟಿಪ್ಪು ಜಯಂತಿ ಮಾಡಿದವರು ಯಾರು? ನೀವು ಜಾತಿವಾದಿಗಳು, ನಾವಲ್ಲ ಎಂದು ಡಿಕೆಶಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಓರ್ವ ಮಹತ್ವಾಕಾಂಕ್ಷಿ ರಾಜಕಾರಣಿ, ವೈಯಕ್ತಿಕವಾಗಿ ಅವರ ಬಗ್ಗೆ ಗೌರವವಿದೆ. ಇದೀಗ ಡಿಕೆಶಿ ಜೆಡಿಎಸ್ ಸಹಾಯ ಪಡೆಯಲು ನಿರ್ಧರಿಸಿದ್ದಾರೆ. ಆ ಮೂಲಕ ಸಿಎಂ ಆಗಲು ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂದರು.