ಅವನು ಕಳೆದ ಎರಡು ವರ್ಷಗಳ ಹಿಂದೆ ಮನೆಗೆ ಬಂದಿದ್ದ, ಅವನನ್ನ ಮನೆಯ ಮಗನಂತೆ ನೊಡಿಕೊಂಡಿದ್ದರು, ಆದರೆ ಕಳೆದ ಎರಡು ದಿನಗಳ ಹಿಂದೆ ಹೋದವ ಇಂದಿಗೂ ಮರಳಿ ಮನೆಗೆ ಬಂದಿಲ್ಲ ಸಾವಿರಾರು ಜನರ ಮಧ್ಯೆ ಮಿಂಚಿನಂತೆ ಓಡುತ್ತಿದ್ದ ಶ್ವೇತ ಬಣ್ಣದ ಹೋರಿ, ಸಿಳ್ಳೆ , ಕೇಕೆ ಹಾಕುತ್ತಾ ಹುರಿದುಂಬಿಸುವ ಜನ, ಅಭಿಮಾನಿಗಳ ಪೇವರೇಟ್ ಆಗಿದ್ದ ರೋಲೆಕ್ಸ್ ಅದು. ಹೌದು ಹಾವೇರಿ ಜಿಲ್ಲೆಯ ಹಾನಗಲ್ ತಾಲುಕಿನ ಗೊಂಧಿ ಗ್ರಾಮದ ರಾಜೇಶ ನಿಂಗೊಜಿ ಎನ್ನುವ ರೈತ ತನ್ನ ಮನೆಯಲ್ಲಿಯೆ ಪುಟ್ಟ ಕರುವನ್ನು ಸಾಕಿದ್ದರು. ಮನೆ ಮಗನಂತೆ ಸಾಕಿದ್ದ ಕುಟುಂಬವು ಹೋರಿಯನ್ನು ಹಬ್ಬಕ್ಕಾಗಿ ತಯಾರಿ ಮಾಡಿದ್ದರು.
ಕಳೆದ ಎರಡು ವರ್ಷಗಳಿಂದ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ,ದಾವಣಗೇರೆ, ಜಿಲ್ಲೆಗಳಲ್ಲಿ ನಡೆಯುವ ದನ ಬೆದರಿಸುವ ಹಬ್ಬಗಳಲ್ಲಿ ಭಾಗವಹಿಸಿ 50 ಗ್ರಾಂ ಬಂಗಾರ, ಟ್ರಜರಿ, ಬೈಕ್ ಸೇರಿದಂತೆ ಅನೇಕ ಬಂಪರ್ ಬಹುಮಾನಗಳನ್ನು ಗೆದ್ದು ತಂದಿತ್ತು.
Also Read: ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಮಿಂಚಿನ ಓಟ, ಗಮನ ಸೆಳೆದ ತಮಿಳುನಾಡಿನ ಹೋರಿ
ಕಳೆದ ಗುರುವಾರ ಹಾನಗಲ್ ತಾಲುಕಿನ ಮಾವಕೊಪ್ಪ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪಾಲ್ಗೊಂಡು ಮಿಂಚಿನಂತೆ ಓಡಿತ್ತು. ನಂತರ ಹೋರಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದೆ. ಕಳೆದ ಎರಡು ದಿನಗಳಿಂದ ರಾಜೇಶ ಕುಟುಂಬದವರು, ಹೋರಿ ರೋಲೆಕ್ಸ್ ಅಭಿಮಾನಿಗಳು ಮಕರವಳ್ಳಿ , ಕೊಂಡೊಜ್ಜಿ, ಶಾಡಗುಪ್ಪಿ,ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಹಗಲು ರಾತ್ರಿ ಹುಡುಕುತ್ತಿದ್ದಾರೆ. ಆದರೂ ರೊಲೆಕ್ಸ್ ಪತ್ತೆ ಆಗಿಲ್ಲ. ಮನೆಯಲ್ಲಿ ಮಗುವಿನಂತೆ ಸಾಕಿದ್ದ ರಾಜೇಶ ಅವರ ತಾಯಿ ಲಕ್ಷಿ ಅವರು ಕಳೆದ ಎರಡು ದಿನಗಳಿಂದ ಊಟ ನಿದ್ದೆ ಬಿಟ್ಟು ರೊಲೆಕ್ಸ್ ಗಾಗಿ ಕಣ್ಣಿರ ಹಾಕುತ್ತಿದ್ದಾರೆ.
ಸ್ವಂತ ಮಗನಂತೆ ಸಾಕಿದ್ದ ಮೂಕ ಪ್ರಾಣಿಗಾಗಿ ಇಡಿ ಕುಟುಂಬ ಹಗಲಿರುಳು ಪರಿತಪಿಸುತ್ತಿದೆ. ಆದಷ್ಟು ಬೇಗ ರೋಲೆಕ್ಸ್ ಮನೆಗೆ ಮರಳಲಿ, ಆ ಕುಟುಂಬದಲ್ಲಿ ಮತ್ತೆ ಸಂತಸ ಮೂಡಲಿ ಅನ್ನುವದು ಎಲ್ಲರ ಆಶಯವಾಗಿದೆ.
ವರದಿ: ರವಿ ಹೂಗಾರ, ಟಿವಿ9, ಹಾವೇರಿ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ