ಏಲಕ್ಕಿ ಕಂಪಿನ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ತಯಾರಾಗುತ್ತಿವೆ ಸಾವಿರಾರು ಯಾಲಕ್ಕಿ ಹಾರಗಳು!

| Updated By: ಸಾಧು ಶ್ರೀನಾಥ್​

Updated on: Dec 12, 2022 | 10:37 AM

86 haveri kannada sahitya sammelana: ಈಗಾಗಲೇ ಒಂದು ಟನ್ ನಷ್ಟು ಯಾಲಕ್ಕಿ ಹಾರಗಳನ್ನ ತಯಾರಿಸಲಾಗಿದೆ. ಹಾರವನ್ನ ವಿಶೇಷವಾಗಿ ಸಿದ್ದಪಡಿಸಲಾಗುತ್ತಿದೆ. ಜೊತೆಗೆ ಮೈಸೂರು ಪೇಟಾ, ಶಾಲೂ ಸಹ ಸಿದ್ದಪಡಿಸಲಾಗಿದೆ. ಒಂದು ಎಳೆ, ಎರಡು ಎಳೆ, ಮೂರು ಎಳೆ, ನಾಲ್ಕು ಎಳೆ , ಐದು ಎಳೆ ಯಾಲಕ್ಕಿ ಹಾರಗಳನ್ನ ಸಿದ್ದಪಡಿಸಲಾಗುತ್ತಿದೆ.

ಏಲಕ್ಕಿ ಕಂಪಿನ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ತಯಾರಾಗುತ್ತಿವೆ ಸಾವಿರಾರು ಯಾಲಕ್ಕಿ ಹಾರಗಳು!
ಏಲಕ್ಕಿ ಕಂಪಿನ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ತಯಾರಾಗುತ್ತಿವೆ ಸಾವಿರಾರು ಯಾಲಕ್ಕಿ ಹಾರಗಳು!
Follow us on

ಹಾವೇರಿಯಲ್ಲಿ ನಡೆಯುತ್ತಿರೋ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (86 haveri kannada sahitya sammelana) ಸಿದ್ದತೆಗಳು ಭರದಿಂದ ನಡೆದಿದೆ. ಏಲಕ್ಕಿ ಕಂಪಿನ ನಾಡಿನಲ್ಲಿ ಸಾಹಿತ್ಯ ಸಮ್ಮೇಳನದ ಸಿದ್ದತೆ ಜೊತೆಗೆ ಸಾಹಿತ್ಯಾಭಿಮಾನಿಗಳಿಗೆ ಸಾವಿರಾರು ಏಲಕ್ಕಿ ಹಾರಗಳನ್ನ (Cardamom garland) ರೆಡಿ ಮಾಡಲಾಗುತ್ತಿದೆ. ಸಮ್ಮೇಳನಕ್ಕೆ ಆಗಮಿಸಲಿರೋ ಸಾಹಿತಿಗಳಿಗೆ, ಗಣ್ಯರಿಗೆ ಹಾಗೂ ಜನಪ್ರತಿನಿಧಿಗಳಿಗೆ ಸೇರಿದಂತೆ ಸಾಹಿತ್ಯಾಭಿಮಾನಿಗಳಿಗೆ ಸಾವಿರಾರು ಏಲಕ್ಕಿ ಹಾರಗಳು ಸಿದ್ದವಾಗುತ್ತಿವೆ. ಏಲಕ್ಕಿ ಕಂಪಿನ ನಗರಿಯಲ್ಲಿ ಹೇಗೆಲ್ಲ ಸಿದ್ದವಾಗುತ್ತಿವೆ ಏಲಕ್ಕಿ ಹಾರಗಳು ಅಂತೀರಾ? ಈ ಸ್ಟೋರಿ ಓದಿ.

ಹಾವೇರಿಯ ಜೈನಬಸ್ತಿ ಓಣಿಯ ಪೇಟವೇಗಾರ ಮನೆಯಲ್ಲಿ ಯಾಲಕ್ಕಿ ಹಾರವನ್ನ ಸಿದ್ದಪಡಿಸುತ್ತಿರುವ ದೃಶ್ಯಗಳು ಕಂಡುಬಂದವು. ಉಸಮನಸಾಬ್ ಪೇಟವೆಗಾರ ಮನೆಯಲ್ಲಿ ಅವರ ತಂದೆ ಕಾಲದಿಂದಲೂ ಯಾಲಕ್ಕಿ ಹಾರವನ್ನ ತಯಾರು ಮಾಡಲಾಗುತ್ತಿದೆ. ಈಗ ಮುಂದಿನ ತಿಂಗಳು ಜನವರಿ 6, 7 ಮತ್ತು 8 ರಂದು 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಯಾಲಕ್ಕಿ ಕಂಪಿನ ನಗರಿಯಲ್ಲಿ ಯಾಲಕ್ಕಿ ಹಾರಗಳು ಭರ್ಜರಿಯಾಗಿ ರೆಡಿಯಾಗುತ್ತಿವೆ.

ಹಗಲು ರಾತ್ರಿ ಎನ್ನದೆ ಯಾಲಕ್ಕಿ ಹಾರವನ್ನ ಸಿದ್ದಪಡಿಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನಕ್ಕರ ಪ್ರತಿದಿನ ಒಂದೆರಡು ಲಕ್ಷ ಜನರು ಆಗಮಿಸಲಿದ್ದಾರೆ. ಸಾಹಿತಿಗಳು, ಗಣ್ಯರು, ರಾಜಕಾರಣಿ ಸೇರಿದಂತೆ ಪ್ರಮುಖರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಅವರ ಕೊರಳನ್ನ ಯಾಲಕ್ಕಿ ಹಾರ ಅಲಂಕರಿಸಲಿವೆ. ನಮಗೂ ಸಹ ತುಂಬಾ ಸಂತೋಷವಾಗಿದ್ದು ಸಮ್ಮೇಳನ ಆಸಕ್ತರು ಹಾವೇರಿ ಜಲ್ಲೆಗೆ ಆಗಮಿಸಿ ಸಾಹಿತ್ಯ ಜೊತೆಗೆ ಯಾಲಕ್ಕಿ ಹಾರವನ್ನ ನೋಡುವ ಭಾಗ್ಯ ಸಿಗಲಿದೆ ಅಂತಾರೆ ಯಾಲಕ್ಕಿ ತಯಾರಕರಾದ ಉಸ್ಮಾನಸಾಬ್ ಪೇಟವೇರಿಗಾರ.

ಕೊರೋನಾ ಅವಧಿಯಲ್ಲಿ ಯಾಲಕ್ಕಿ ದರ ಹೆಚ್ಚಾಗಿದ್ದು ಯಾಲಕ್ಕಿ ಹಾರಗಳ ಖರೀದಿ ಕಡಿಮೆಯಾಗಿತ್ತು. ಯಾಲಕ್ಕಿ ಹಾರ ತಯಾರಕರಿಗೆ ತುಂಬಾ ನಷ್ಟವಾಗಿತ್ತು. ಈಗ ಪ್ರಥಮ ಬಾರಿಗೆ ಹಾವೇರಿ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತಿದೆ. ಪ್ರಮುಖ ಗಣ್ಯರಿಗೆ ಹಾಕಲು ಈಗಾಗಲೇ ಯಾಲಕ್ಕಿ ಹಾರಗಳನ್ನ ಮಾಡಲು ಆರ್ಡರ್ ನೀಡಿದ್ದಾರೆ. ಲಕ್ಷಾಂತರ ಜನರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಒಂದು ಟನ್ ನಷ್ಟು ಯಾಲಕ್ಕಿ ಹಾರಗಳನ್ನ ತಯಾರಿಸಲಾಗಿದೆ. ಹಾರವನ್ನ ವಿಶೇಷವಾಗಿ ಸಿದ್ದಪಡಿಸಲಾಗುತ್ತಿದೆ. ಜೊತೆಗೆ ಮೈಸೂರು ಪೇಟಾ, ಶಾಲೂ ಸಹ ಸಿದ್ದಪಡಿಸಲಾಗಿದೆ. ಒಂದು ಎಳೆ, ಎರಡು ಎಳೆ, ಮೂರು ಎಳೆ, ನಾಲ್ಕು ಎಳೆ , ಐದು ಎಳೆ ಯಾಲಕ್ಕಿ ಹಾರಗಳನ್ನ ಸಿದ್ದಪಡಿಸಲಾಗುತ್ತಿದೆ. ಯಾಲಕ್ಕಿ ಹಾರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ.

ದೇಶದ ಪ್ರಧಾ‌ನಿ ನರೇಂದ್ರ ಮೋದಿ, ರಾಷ್ಟ್ರಪತಿ , ಮುಖ್ಯಮಂತ್ರಿ, ಸಚಿವರು, ರಾಜ್ಯಪಾಲರು ಸೇರಿದಂತೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ಗಣ್ಯರಿಗೆ ಯಾಲಕ್ಕಿ ಹಾರವನ್ನ ಹಾಕಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರ ಜಾತ್ರೆಯ ಜೊತೆಗೆ ಯಾಲಕ್ಕಿ ಕಂಪು ಸಹ ಪಸರಿಸಲಿದೆ ಅಂತಾರೆ ಮತ್ತೊಬ್ಬ ಯಾಲಕ್ಕಿ ಹಾರ ತಯಾರಕರಾದ ಜೈಹೀರಬ್ಬಾಸ್.

ಒಟ್ನಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ದಿನಗಳು ಬಾಕಿ ಇವೆ. ಹೀಗಾಗಿ ಯಾಲಕ್ಕಿ ಕಂಪಿನ ನಗರಿಯಲ್ಲಿ ಸಾವಿರಾರು ಯಾಲಕ್ಕಿ ಹಾರಗಳು ರೆಡಿಯಾಗುತ್ತಿದ್ದು, ಸಾಹಿತ್ಯದ ಜೊತೆಗೆ ಯಾಲಕ್ಕಿ ಕಂಪಿನ ಹಾರವನ್ನ ನೋಡುವ ಹಾ ತೆಗೆದುಕೊಂಡು ಹೋಗುವ ಅವಕಾಶ ಬಂದಿದೆ. ಸಾಹಿತಿಗಳ, ಗಣ್ಯರ, ಹಾಗೂ ಸಾಹಿತ್ಯಾಭಿಮಾನಿಗಳ ಕೊರಳನ್ನ ಯಾಲಕ್ಕಿ ಹಾರ ಅಲಂಕರಿಸಲಿವೆ‌. (ವರದಿ: ರವಿ ಹೂಗಾರ, ಟಿವಿ9, ಹಾವೇರಿ)

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ