ಎಲ್ಲರೂ ಕೈ ಚೆಲ್ಲಿದಾಗ.. ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ಕಠಿಣ ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಜೀವ ಉಳಿಸಿದರು!
ಚಂದ್ರಮ್ಮಳ ಉಸಿರಾಟದ ಕುಸಿದಿತ್ತು. ಹೊಟ್ಟೆಯಲ್ಲಿನ ಕೆಲವು ಭಾಗ ಕೊಳೆತು ಹೋಗಿರುವುದನ್ನು ಗಮನಿಸಿದ್ದಾರೆ. ಆದರೂ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಿರಂಜನ ನೇತೃತ್ವದ ತಂಡ ಹೇಗಾದರೂ ಮಾಡಿ ಚಂದ್ರಮ್ಮಳ ಜೀವ ಉಳಿಸಲೇಬೇಕು ಎಂದು ಪಣತೊಟ್ಟಿತ್ತು. ಅದರಂತೆ...
ಆ ಮಹಿಳೆ ಬರೋಬ್ಬರಿ 185 ಕೆ.ಜಿ ತೂಕವಿದ್ದಾರೆ. ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಹುಬ್ಬಳ್ಳಿಯ ಕಿಮ್ಸ್, ಮಣಿಪಾಲ್ ಆಸ್ಪತ್ರೆಯ ವೈದ್ಯರಿಗೆ ತೋರಿಸಿದ್ದರು. ಆಕೆಗೆ (woman) ಅಪರೇಷನ್ ಮಾಡಲು ಹಿಂದೇಟು ಹಾಕಿದ್ದರಂತೆ. ಆದರೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 185 ಕೆ.ಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ (surgery) ನಡೆಸಿ, ಮಹಿಳೆಗೆ ಮರುಜೀವ ನೀಡಿದ್ದಾರೆ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು (Haveri district hospital doctors). ಈ ಕುರಿತು ಒಂದು ವರದಿ.
ಈ ಮಹಿಳೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ ನಿವಾಸಿ, 48 ವರ್ಷದ ಚಂದ್ರಮ್ಮ ಎಂಬ ಮಹಿಳೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಚಂದ್ರಮ್ಮ ಬರೋಬ್ಬರಿ 185 ಕೆ.ಜಿ ತೂಕವಿದ್ದು, ಹೊಟ್ಟೆಯಲ್ಲಿನ ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ದೇಹದ ತೂಕ ಅಧಿಕವಾಗಿರುವುದು ಒಂದೆಡೆಯಾದರೆ, ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿದ್ದವು. ಇದರಿಂದ ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಚಂದ್ರಮ್ಮಗೆ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಸಹ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ 90 ರಿಂದ 92 ಇರಬೇಕಿತ್ತು. ಆದರೆ ಚಂದ್ರಮ್ಮಳ ಉಸಿರಾಟದ ಪ್ರಮಾಣ ಕೇವಲ 40 ಇತ್ತು.
ಹೊಟ್ಟೆಯಲ್ಲಿನ ಕೆಲವು ಭಾಗ ಕೊಳೆತು ಹೋಗಿರುವುದನ್ನು ಗಮನಿಸಿದ್ದಾರೆ. ಮೇಲಾಗಿ ಚಂದ್ರಮ್ಮ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೂ ಜಿಲ್ಲಾಸ್ಪತ್ರೆಯ ವೈದ್ಯ ಡಾ. ನಿರಂಜನ ನೇತೃತ್ವದ ತಂಡ ಹೇಗಾದರೂ ಮಾಡಿ ಚಂದ್ರಮ್ಮಳ ಜೀವ ಉಳಿಸಲೇಬೇಕು ಎಂದು ಪಣತೊಟ್ಟಿತ್ತು. ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆವು ಎಂದು ಡಾ. ಪರಮೇಶಪ್ಪ ಹಾವನೂರು, ಜಿಲ್ಲಾವೈದ್ಯಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ. ನಿರಂಜನ ನೇತೃತ್ವದ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಬರೋಬ್ಬರಿ ನಾಲ್ಕು ಗಂಟೆಗೂ ಅಧಿಕ ಕಾಲ ಚಂದ್ರಮ್ಮಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಂದ್ರಮ್ಮಳನ್ನು ತಪಾಸಣೆ ಮಾಡಿದ್ದ ವೈದ್ಯರ ತಂಡ ಕರುಳುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಗಮನಿಸಿದ್ದಾರೆ. ಅಲ್ಲದೆ . ಕೊಳೆತ ಭಾಗವನ್ನು ಕತ್ತರಿಸಿ ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಚಂದ್ರಮ್ಮ ಜೀವ ಉಳಿಸಿದ್ದಾರೆ.
ತಾಯಿಗೆ ತೀವ್ರ ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆ ತಾಯಿಯನ್ನು ಉಳಿಸಿಕೊಳ್ಳಲು ಮಗಳು ಚೈತ್ರಾ ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಿದ್ದಾಳೆ. ಬಹುತೇಕ ಆಸ್ಪತ್ರೆಗಳಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿ ಮನೆಗೆ ಕಳಿಸಿದ್ದರು. ತೂಕದ ಪ್ರಮಾಣ ಸಾಕಷ್ಟು ಹೆಚ್ಚಿದ್ದರಿಂದ ವಿವಿಧ ಆಸ್ಪತ್ರೆಗಳಲ್ಲಿನ ವೈದ್ಯರು ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದ್ದರಂತೆ. ಸಾಕಷ್ಟು ಆಸ್ಪತ್ರೆಗಳನ್ನು ಸುತ್ತಾಡಿ ಕೊನೆಗೆ ಚೈತ್ರಾ ತನ್ನ ತಾಯಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಈಗ ಆಪರೇಷನ್ ಯಶಸ್ವಿಯಾಗಿದೆ. ನಮ್ಮ ತಾಯಿಯನ್ನ ಬದುಕಿಸಿಕೊಟ್ಟಿದ್ದಾರೆ.
ತಾಯಿ ಚಂದ್ರಮ್ಮ ಬದುಕುವುದೇ ಇಲ್ಲ ಎಂದು ಭಾವಿಸಿದ್ದ ಮಗಳು ಚೈತ್ರಾಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಚಂದ್ರಮ್ಮ ಆರೋಗ್ಯ ಸಹಜ ಸ್ಥಿತಿಗೆ ಮರಳಿದೆ. ತಾಯಿ ಸತ್ತೇ ಹೋದಳು ಎಂದು ಭಾವಿಸಿದ್ದ ಚಂದ್ರಮ್ಮ ಮನೆಯವರು ಚಂದ್ರಮ್ಮಗೆ ಮಾಡಿದ ಯಶಸ್ವಿ ಶಸ್ತ್ರಚಿಕಿತ್ಸೆ ಕಂಡು ಫುಲ್ ಖುಷ್ ಆಗಿದ್ದಾರೆ. (ವರದಿ: ರವಿ ಹೂಗಾರ, ಟಿವಿ 9, ಹಾವೇರಿ)