ದೇಶದೆಲ್ಲೆಡೆ ಗಣೇಶ ಪ್ರತಿಷ್ಠಾಪಣೆ ಅಲಂಕಾರ ಜೋರಾಗಿ ನಡೆಯುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಗಣೇಶ ಹಬ್ಬದಂದು ರಾಮಮಂದಿರ ನೋಡೋಕೆ ಸಾವಿರಾರು ಜನರ ದಂಡೆ ಹರಿದು ಬಂದಿದೆ. ಗಣೇಶ ಹಬ್ಬದ ಪ್ರಯುಕ್ತ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಾಮ ಮಂದಿರ, ಶತಮಾನಗಳ ಇತಿಹಾಸ ಸಾರುವುದರ ಜೊತೆಗೆ, ರಾಮನ ಹಿನ್ನೆಲೆಯನ್ನ ತಿಳಿಯಬಹುದು, ರಾಮ ಮಂದಿರ ನೋಡಲು ಎರಡು ಕಣ್ಣು ಸಾಲದು ಎಂಬಂತಿತ್ತು.
ಎಸ್ ಥೇಟ್ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮ ಮಂದಿರ ಶೈಲಿಯ ಮಂದಿರ… ರಾಮನ ಇತಿಹಾಸ ಸಾರುತ್ತಿರುವ ಚಿತ್ರಗಳು… ರಾಮ ಜನ್ಮ ಭೂಮಿಗಾಗಿ ನಡೆದ ಹೋರಾಟದ ಸಂಪೂರ್ಣ ಚಿತ್ರಣ… ಇದನ್ನೆಲ್ಲಾ ನೋಡಲು ಹರಿದು ಬರುತ್ತಿರುವ ಜನಸಾಗರ.. ಎಸ್ ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ತಾಲೂಕು ಕ್ರಿಡಾಂಗಣದಲ್ಲಿ… ವಂದೆ ಮಾತರಂ ಸೇವಾ ಸಂಸ್ಥೆಯಿಂದ ಗಣೇಶ ಪ್ರತಿಷ್ಠಾಪನೆಯ ಜೊತೆಗೆ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡಿದ್ದರು.
ಇದನ್ನೂ ಓದಿ: ಗಣೇಶನ ಹಬ್ಬದ ಸಂದರ್ಭದಲ್ಲಿ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ!
ಹಿಂದೂಗಳ ಕನಸಿನ ರಾಮ ಮಂದಿರ ಯಾವ ರೀತಿ ನಿರ್ಮಾಣ ಮಾಡಲಾಗುತ್ತಿದೆ. ರಾಮ ಯಾರೂ ರಾಮ ಜನ್ಮ ಭೂಮಿಗಾಗಿ ಯಾವ ರೀತಿ ಹೋರಾಟ ಮಾಡಲಾಯಿತು ಎಂಬುವುದರ ಡಿಟೆಲ್ ಚಿತ್ರಣ ಹಾಗೂ ಲೇಖನಗಳ ಜೊತೆಗೆ ಜನ ಮನ ಸೆಳೆಯುವ ಸುಂದರ ದಿಪಾಲಂಕಾರದ ದೇವಸ್ಥಾನ ಇಲ್ಲಿ ನಿರ್ಮಾಣ ಮಾಡಲಾಗಿದೆ.
ಸಾರ್ವಜನಿಕರ ಮನ ಸೆಳೆಯುವುದರ ಜೊತೆಗೆ ಇತಿಹಾಸದ ತಿಳಿ ಹೇಳುವ ಈ ಕಲಾಕೃತಿಯನ್ನು, ಫೈಬರ್ ಹಾಗೂ ಕಬ್ಬಿಣದ ಮೂಲಕ ನಿರ್ಮಾಣ ಮಾಡಲಾಗಿದ್ದೂ, ಬರೊಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ಬಂದ ಪ್ರತಿಯೊಬ್ಬರಿಗೂ ಆಯೋಧ್ಯೆ ರಾಮ ಮಂದಿರದ ಬಗ್ಗೆ ಇರುವ ಭಕ್ತಿ ಇಮ್ಮುಡಿ ಆಗಲು ನೋ ಡೌಟ್.
ಒಟ್ಟಾರೆಯಾಗಿ ಹಾಡು , ಡ್ಯಾನ್ಸ್ , ದಿಪಲಂಕಾರ ಸೇರಿದಂತೆ ಡಿಜೆಗಳ ಮೂಲಕ ಗಣೇಶ ಹಬ್ಬವನ್ನು ಎಲ್ಲ ಕಡೆ ಆಚರಿಸುತ್ತಿದ್ದರೆ, ರಾಣೇಬೆನ್ನೂರಿನಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆ ಹಾವೇರಿ ಅಷ್ಟೆ ಅಲ್ಲದೆ ಶಿವಮೊಗ್ಗ, ದಾವಣಗೆರೆ ಧಾರವಾಡ ಜಿಲ್ಲೆಗಳಿಂದ ಅನೇಕ ಜನರು ರಾಮ ಮಂದಿರ ನೋಡಲು ಬರುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:16 pm, Mon, 25 September 23