ನವೀನ್‌ ನಿವಾಸಕ್ಕೆ ರಾಜ್ಯಪಾಲ ಗೆಹ್ಲೋಟ್​ ಭೇಟಿ: ದೊಡ್ಡ ಮಗನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು -ತಂದೆ ಕಣ್ಣೀರು

| Updated By: preethi shettigar

Updated on: Mar 24, 2022 | 5:38 PM

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸಕ್ಕೆ ಇಂದು ಭೇಟಿ ನೀಡಿದ್ದಾರೆ. ಮಾರ್ಚ್ 1, 2022ರಂದು ಉಕ್ರೇನ್​ನಲ್ಲಿ ಶೆಲ್ ದಾಳಿಗೆ ಒಳಗಾಗಿ ನವೀನ್​ ಮೃತಪಟ್ಟಿದ್ದ. ಇಂದು ನವೀನ್​ ಭಾವಚಿತ್ರಕ್ಕೆ ಹೂವು ಹಾಕಿ ನಮಸ್ಕರಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

ನವೀನ್‌ ನಿವಾಸಕ್ಕೆ ರಾಜ್ಯಪಾಲ ಗೆಹ್ಲೋಟ್​ ಭೇಟಿ: ದೊಡ್ಡ ಮಗನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು -ತಂದೆ ಕಣ್ಣೀರು
ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ (ಸಂಗ್ರಹ ಚಿತ್ರ)
Follow us on

ಹಾವೇರಿ: ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್‌ ನಿವಾಸಕ್ಕೆ ಇಂದು (ಮಾರ್ಚ್​ 24) ಥಾವರಚಂದ್ ಗೆಹ್ಲೋಟ್ (Thawar Chand Gehlot)​ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ (Naveen) ನಿವಾಸಕ್ಕೆ ಇಂದು ಭೇಟಿ ನೀಡಿದ್ದಾರೆ. ಮಾರ್ಚ್ 1, 2022ರಂದು ಉಕ್ರೇನ್​ನಲ್ಲಿ(Ukraine) ಶೆಲ್ ದಾಳಿಗೆ ಒಳಗಾಗಿ ನವೀನ್​ ಮೃತಪಟ್ಟಿದ್ದ. ಇಂದು ನವೀನ್​ ಭಾವಚಿತ್ರಕ್ಕೆ ಹೂವು ಹಾಕಿ ನಮಸ್ಕರಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

ನವೀನ್​ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮಿ ಸೇರಿದಂತೆ ಕುಟುಂಬಸ್ಥರಿಗೆ ಈ ವೇಳೆ ಕೈ ಮುಗಿದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನಮಸ್ಕರಿಸಿದ್ದಾರೆ.

ನನ್ನ ಹಿರಿಯ ಮಗ ಹರ್ಷನಿಗೆ ಇದೆ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು: ನವೀನ ತಂದೆ ಶೇಖರಗೌಡ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ನಿವಾಸಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್​ ಭೇಟಿ ನೀಡಿದ ಬಳಿಕ ನವೀನ್​ ತಂದೆ ಶೇಖರಗೌಡ ಹೇಳಿಕೆ ನೀಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮಾರ್ಚ್ 1, 2022 ರಂದು ನವೀನ್​ ಮೃತಪಟ್ಟಾಗ ಆ ದಿನವೇ ರಾಜ್ಯಾಪಾಲರು ಕರೆ ಮಾಡಿ ಮಾತನಾಡಿದ್ದರು. ನನ್ನ ಹಿರಿಯ ಮಗ ಹರ್ಷನಿಗೆ ಇದೆ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಎಲ್ಲವನ್ನೂ ರಾಜ್ಯಪಾಲರು ನೆನಪಿಸಿಕೊಂಡರು. ಪ್ರತಿಭಾವಂತನಾಗಿದ್ದ ನವೀನನನ್ನ ಕಳೆದುಕೊಂಡಿದ್ದಕ್ಕೆ ದುಃಖ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.

ದಾವಣಗೆರೆ: ವೀರಶೈವ ಪಂಚಮಸಾಲಿ ಹರ ಗುರುಪೀಠಕ್ಕೆ ಭೇಟಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ವೀರಶೈವ ಪಂಚಮಸಾಲಿ ಹರ ಗುರುಪೀಠಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಬಳಿ ಇರುವ ವೀರಶೈವ ಪಂಚಮಸಾಲಿ ಹರಗುರು ಪೀಠದ ವಚನಾನಂದ ಸ್ವಾಮೀಜಿ ಜೊತೆ ಕೆಲ ಹೊತ್ತು ರಾಜ್ಯಪಾಲ ಗೆಹ್ಲೋಟ್ ಮಾತನಾಡಿದ್ದಾರೆ. ಪಂಚಮಸಾಲಿ ಸಮಾಜ ರಾಣಿ ಚನ್ನಮ್ಮ ಬೆಳವಡಿ ಮಲ್ಲಮ್ಮ ಸೇರಿದಂತೆ ವೀರವನಿತೆಯರ ಬಗ್ಗೆ ಸ್ವಾಮೀಜಿಗಳಿಂದ ರಾಜ್ಯಪಾಲರು ಮಾಹಿತಿ ಪಡೆದಿದ್ದಾರೆ. ಯೋಗ ಶಿಬಿರ ಸೇರಿದಂತೆ ಹತ್ತಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡ ವಚನಾನಂದ ಸ್ವಾಮೀಜಿ ಬಗ್ಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಉಕ್ರೇನ್​ನಿಂದ ತಾಯ್ನಾಡಿಗೆ ಬಂದ ನವೀನ್ ಮೃತದೇಹ: ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಸಿಎಂ

ನವೀನ್‌ ದೇಹ ಸೋಮವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ

Published On - 3:15 pm, Thu, 24 March 22