ಇಮಾಮ ಸಾಬ್ ದರ್ಗಾ ಉರುಸ್ ಪ್ರಯುಕ್ತ ಬೃಹತ್ ಕುಸ್ತಿ ಪಂದ್ಯಾವಳಿ: ನಾನಾ-ನೀನಾ ಎಂದ ಪೈಲ್ವಾನರು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 9:22 PM

ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಎಸ್ ದೇವಗಿರಿ ಗ್ರಾಮದ ಆರಾಧ್ಯ ಇಮಾಮ ಸಾಬ್ ದರ್ಗಾ ಉರುಸ್ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಳ್ಳಾರಿ, ಬೆಳಗಾವಿ, ವಿಜಯಪುರ, ಧಾರವಾಡ ಶಿವಮೋಗ್ಗ ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ರು. ಒಬ್ಬರಕ್ಕಿಂತ ಒಬ್ಬರು ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ನೆರೆದಿದ್ದ ಜನರನ್ನು ಖುಷ್ ಮಾಡಿದ್ರು.

ಇಮಾಮ ಸಾಬ್ ದರ್ಗಾ ಉರುಸ್ ಪ್ರಯುಕ್ತ ಬೃಹತ್ ಕುಸ್ತಿ ಪಂದ್ಯಾವಳಿ: ನಾನಾ-ನೀನಾ ಎಂದ ಪೈಲ್ವಾನರು
ಕುಸ್ತಿ ಹಿಡಿದ ಪೈಲ್ವಾನರು
Follow us on

ಹಾವೇರಿ, ಅಕ್ಟೋಬರ್​​ 29: ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಮಾಡಲು ಕೆಲಸವಿಲ್ಲದೆ ಅನೇಕ ಅನ್ನದಾತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂಧಿಗ್ನ ಪರಿಸ್ಥಿತಿಯಲ್ಲೂ ಖುಷಿ ಪಡಲು ಮುಂದಾಗಿರುವ ಆ ಗ್ರಾಮದ ಜನ. ಜಾತ್ರೆಯ ಪ್ರಯುಕ್ತ ಬೃಹತ್ ಕುಸ್ತಿ ಪಂದ್ಯಾವಳಿ (wrestling tournament) ಆಯೋಜಿಸಿದ್ದರು. ಹೊರ ಜಿಲ್ಲೆಗಳಿಂದ ಬಂದಿದ್ದ ನೂರಾರು ಕುಸ್ತಿಪಟುಗಳ ಪಂದ್ಯ ನೋಡಿ ಜನ ದಿಲ್ ಖುಪಿ ಪಟ್ಟಿದ್ದಾರೆ. ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಎಸ್ ದೇವಗಿರಿ ಗ್ರಾಮದ ಆರಾಧ್ಯ ಇಮಾಮ ಸಾಬ್ ದರ್ಗಾ ಉರುಸ್ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಬಳ್ಳಾರಿ, ಬೆಳಗಾವಿ, ವಿಜಯಪುರ, ಧಾರವಾಡ ಶಿವಮೋಗ್ಗ ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ರು. ಒಬ್ಬರಕ್ಕಿಂತ ಒಬ್ಬರು ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ನೆರೆದಿದ್ದ ಜನರನ್ನು ಖುಷ್ ಮಾಡಿದ್ರು. ಈ ಸಂದರ್ಭದಲ್ಲಿ ಆಯೋಜಕರ ನಿರ್ಣಯ ತಪ್ಪು ಎಂದು ಗೊತ್ತಾದಾಗ, ಕೇಲವು ಬಾರಿ ಜನರು ಕೂಗ್ಯಾಡಿ ನಿರ್ಣಯ ತಪ್ಪು ಎಂದು ಹೇಳುವುದರ ಮೂಲಕ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಿ ಕೊಡುವ ಸಂದರ್ಭವು ಜರುಗಿತು.

ಇದನ್ನೂ ಓದಿ: ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ: ದೇವರಗುಡ್ಡ ಕಾರ್ಣಿಕ ನುಡಿ

ಬರಗಾಲ, ಬೆಳೆಹಾನಿ, ಮಳೆ ಕೊರತೆ ಜಂಜಾಟದಲ್ಲಿ ಮುಳುಗಿ ಹೋಗಿದ್ದ ರೈತರು ಕುಸ್ತಿ ನೋಡಿ ಎಂಜಾಯ್ ಮಾಡಿದರು. ಪ್ರತಿ ವರ್ಷ ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ರಣ ರೋಚಕ ಕುಸ್ತಿ ಪಂದ್ಯಾವಳಿ ನಡೆಯುತ್ತವೆ. ಸ್ವತಃ ರೈತರೇ ಆಯೋಜನೆ ಮಾಡಿದ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಗದಗ ಜಿಲ್ಲೆಗಳಿಂದ ಪೈಲ್ವಾನರು ಬರುತ್ತಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಅಪರಾಧಿಗೆ ಗಲ್ಲುಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ

ಅಪ್ಪಟ ಗ್ರಾಮೀಣ ಪ್ರತಿಭೆಗಳಾದ ಈ ಪೈಲ್ವಾನರು ಗರಡಿ ಮನೆಯಲ್ಲಿ ದೇಹ ಹುರಿಗೊಳಿಸಿ ತಯಾರಾಗಿರ್ತಾರೆ. ಕೆಂಪು ಮಣ್ಣಿನ ಅಖಾಡದಲ್ಲಿ ಮೈ ಬೆವರಿ ಮಣ್ಣು ಹತ್ತಿ ರಾಡಿಯಾದರೂ ಪರಿವೇ ಇಲ್ಲದೇ ಪೈಲ್ವಾನರು ಕುಸ್ತಿಯಲ್ಲಿ ತಲ್ಲೀನರಾಗಿರ್ತಾರೆ. ಗೆದ್ದರೆ ಕುಸ್ತಿ ನೋಡೋಕೆ ಬಂದ ಜನಾನೇ ನಗದು ಬಹುಮಾನ ನೀಡ್ತಾರೆ. ಪೈಲ್ವಾನರ ಪಟ್ಟುಗಳಂತೂ ರೋಚಕವಾಗಿದ್ದವು. ನೆಲಕ್ಕೆ ಬೆನ್ನು ತಾಗಿ ಬಿದ್ದರೆ ಪೈಲ್ವಾನ ಸೋತ ಹಾಗೆ.ಗೆದ್ದ ಪೈಲ್ವಾನನಿಗೆ ನಗದು ಬಹುಮಾನ ಘೋಷಣೆ ಮಾಡಲಾಗುತ್ತೆ.

ಫೈನಲ್ ಆಗಿ ಕುಸ್ತಿ ಪಂದ್ಯ ಗೆದ್ದ ಪೈಲ್ವಾನರಿಗೆ ದೇವಗಿರಿ ಗ್ರಾಮದ ಹಿರಿಯರೆಲ್ಲಾ ಸೇರಿ ಬೆಳ್ಳಿ ಕಡೆ ನೀಡಿ ಗೌರವಿಸ್ತಾರೆ. ಕೆಲವು ಪೈಲ್ವಾನರಂತೂ ಸೋಲು ಒಪ್ಪಿಕೊಳ್ಳೋಕೆ ರೆಡಿ ಇರಲಿಲ್ಲ. ತಾಸು ಗಟ್ಟಲೇ ಸೆಣಸಾಡಿ ತಮ್ಮ ಪಟ್ಟು ತೋರಿಸಿ ನೆರೆದವರಲ್ಲಿ ಅಚ್ಚರಿ ಮೂಡಿಸಿದರು. ಒಟ್ಟಾರೆ. ದೆವಗಿರಿ ಕುಸ್ತಿ ರಣ ರೋಚಕವಾಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:21 pm, Sun, 29 October 23