KPSC ಪರೀಕ್ಷೆ ವೇಳೆ ಅಕ್ರಮ: ಫುಲ್ ತೋಳಿನ ಶರ್ಟ್ ಧರಿಸಿದವರಿಗೆ ನೋ ಎಂಟ್ರಿ, ತೋಳಿಗೆ ಕತ್ತರಿ ಹಾಕಿದ ಅಭ್ಯರ್ಥಿಗಳು

ಇಂದು ನಡೆಯುತ್ತಿರುವ ಕೆಪಿಎಸ್​ಸಿ ಪರೀಕ್ಷೆಗೆ ಉದ್ದ ತೋಳಿನ ಶರ್ಟ್ ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಹಾಪ್ ಶರ್ಟ್ ಹಾಕೊಂಡು ಬರುವಂತೆ ಸೂಚನೆ ನೀಡಲಾಗಿದೆ. ಬಿಗಿಯಾದ ಜೀನ್ಸ್ ಧರಿಸಿದವರನ್ನೂ ಪರೀಕ್ಷೆಗೆ ಕೂರಿಸುತ್ತಿಲ್ಲ. ಹೀಗಾಗಿ ಫುಲ್ ಶರ್ಟ್ ಧರಿಸಿ ಪರೀಕ್ಷೆಗೆ ಬಂದ ಕೆಲ ಅಭ್ಯರ್ಥಿಗಳು ಬಟ್ಟೆ ಅಂಗಡಿಗೆ ಹೋಗಿ ಹಾಫ್ ಶರ್ಟ್ ಹಾಕೊಂಡು ಬಂದ್ರೆ ಮತ್ತೆ ಕೆಲ ಅಭ್ಯರ್ಥಿಗಳು ತಮ್ಮ ಶರ್ಟ್​ನ ಉದ್ದದ ತೋಳನ್ನು ಕತ್ತರಿಸಿಕೊಂಡು ಹಾಫ್ ಶರ್ಟ್ ಮಾಡಿಕೊಂಡು ಪರೀಕ್ಷೆಗೆ ಕೂತಿದ್ದಾರೆ.

KPSC ಪರೀಕ್ಷೆ ವೇಳೆ ಅಕ್ರಮ: ಫುಲ್ ತೋಳಿನ ಶರ್ಟ್ ಧರಿಸಿದವರಿಗೆ ನೋ ಎಂಟ್ರಿ, ತೋಳಿಗೆ ಕತ್ತರಿ ಹಾಕಿದ ಅಭ್ಯರ್ಥಿಗಳು
ಫುಲ್ ತೋಳಿನ ಶರ್ಟ್ ಧರಿಸಿದವರಿಗೆ ನೋ ಎಂಟ್ರಿ
Follow us
TV9 Web
| Updated By: ಆಯೇಷಾ ಬಾನು

Updated on: Oct 29, 2023 | 12:45 PM

ಹಾವೇರಿ, ಅ.29: ರಾಜ್ಯದಲ್ಲಿ ನಡೆದ ಪಿಎಸ್​ಐ ಅಕ್ರಮ ನೇಮಕಾತಿ (PSI Scam) ಪ್ರಕರಣ ಮಾಸೋ ಮುನ್ನವೇ, ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಅ.28ರಂದು ಕೆಇಎ (KEA) ನಡೆಸುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ಕೆಲ ಅಭ್ಯರ್ಥಿಗಳನ್ನು ಕಲಬುರಗಿ ಮತ್ತು ಯಾದಗಿರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಇದರಿಂದ ಎಚ್ಚೆತ್ತ ಅಧಿಕಾರಿಗಳು ಇಂದು ಪರೀಕ್ಷಾ ಕೇಂದ್ರದಲ್ಲಿ ಫೂಲ್ ಅಲರ್ಟ್ ಆಗಿದ್ದಾರೆ. ಅದರಲ್ಲೂ ಉದ್ದ ತೋಳಿನ ಶರ್ಟ್ ಹಾಕಿಕೊಂಡು ಬಂದ ಪರಿಕ್ಷಾರ್ಥಿಗಳಿಗೆ ಶಾಕ್ ಉಂಟಾಗಿದ್ದು ಕೆಲ ಅಭ್ಯರ್ಥಿಗಳು ಉದ್ದ ತೋಳನ್ನು ಕತ್ತರಿಸಿಕೊಂಡು ಹಾಫ್ ತೋಳು ಮಾಡಿ ಪರೀಕ್ಷೆಗೆ ಹಾಜರ್ ಆಗಿದ್ದಾರೆ.

ಹಾವೇರಿ ನಗರ ಪರೀಕ್ಷಾ ಕೇಂದ್ರದಲ್ಲಿ ಫುಲ್ ಎಚ್ಚರಿಕೆವಹಿಸಲಾಗುತ್ತಿದೆ. ಹೀಗಾಗಿ ಇಂದು ನಡೆಯುತ್ತಿರುವ ಕೆಪಿಎಸ್​ಸಿ ಪರೀಕ್ಷೆಗೆ ಉದ್ದ ತೋಳಿನ ಶರ್ಟ್ ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ಹಾಪ್ ಶರ್ಟ್ ಹಾಕೊಂಡು ಬರುವಂತೆ ಸೂಚನೆ ನೀಡಲಾಗಿದೆ. ಬಿಗಿಯಾದ ಜೀನ್ಸ್ ಧರಿಸಿದವರನ್ನೂ ಪರೀಕ್ಷೆಗೆ ಕೂರಿಸುತ್ತಿಲ್ಲ. ಹೀಗಾಗಿ ಫುಲ್ ಶರ್ಟ್ ಧರಿಸಿ ಪರೀಕ್ಷೆಗೆ ಬಂದ ಕೆಲ ಅಭ್ಯರ್ಥಿಗಳು ಬಟ್ಟೆ ಅಂಗಡಿಗೆ ಹೋಗಿ ಹಾಫ್ ಶರ್ಟ್ ಹಾಕೊಂಡು ಬಂದ್ರೆ ಮತ್ತೆ ಕೆಲ ಅಭ್ಯರ್ಥಿಗಳು ತಮ್ಮ ಶರ್ಟ್​ನ ಉದ್ದದ ತೋಳನ್ನು ಕತ್ತರಿಸಿಕೊಂಡು ಹಾಫ್ ಶರ್ಟ್ ಮಾಡಿಕೊಂಡು ಪರೀಕ್ಷೆಗೆ ಕೂತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಹಾಲ್ ಟಿಕೆಟ್​ನಲ್ಲಿ ಸೂಚಿಸಿದರೂ ಫುಲ್ ಶರ್ಟ್ ಹಾಕಿಕೊಂಡು ಬಂದಿದ್ದಾರೆ. ಹಾಫ್ ಶರ್ಟ್ ಹಾಕೊಂಡು ಬಂದ್ರೆ ಮಾತ್ರ ಪ್ರವೇಶ ಎಂದು ಸೂಚನೆ ಇದೆ. ಹೀಗಾಗಿ ಕೆಪಿಎಸ್​ಸಿ ಆದೇಶ ಪಾಲಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್ ಕೈವಾಡ: ರುದ್ರಗೌಡ ಪಾಟೀಲ್ ವಿರುದ್ಧ FIR

ಫುಲ್ ಶರ್ಟ್ ಧರಿಸಿದ ಅಭ್ಯರ್ಥಿಗಳ ಪರದಾಟ

ಇನ್ನು ಮತ್ತೊಂದೆಡೆ ಕಲಬುರಗಿಯ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲೂ ಇದೇ ಘಟನೆ ನಡೆದಿದೆ. ಪರೀಕ್ಷೆ ಕೇಂದ್ರಕ್ಕೆ ಫುಲ್ ತೋಳಿನ ಶರ್ಟ್ ಧರಿಸಿ ಬಂದ ರಾಯಚೂರಿನ ವಿದ್ಯಾರ್ಥಿಗಳು ಪರದಾಡಿದ್ದಾತೆ. ಪರೀಕ್ಷಾ ಕೇಂದ್ರದ ಮುಂದೆಯೇ ಶರ್ಟ್ ನ ತೋಳು ಕಟ್ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾರೆ. ಚಪ್ಪಲಿ, ಶೂ ಧರಿಸುವಂತಿಲ್ಲ. ಕಾಲುಂಗುರ, ಕಾಲು ಚೈನ್ ಗೂ ಸಹ ನಿರ್ಬಂಧ ಹೇರಲಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವುದು ಬಯಲಾಗುತ್ತಿದ್ದಂತೆ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಇದರಿಂದ ಪರೀಕ್ಷೆ ಬರೆಯಲು ಬರುತ್ತಿರುವ ಅಭ್ಯರ್ಥಿಗಳು ಪರದಾಡುವಂತಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ