ಕೆಇಎ ಪರೀಕ್ಷೆಯಲ್ಲಿ ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್ ಕೈವಾಡ: ರುದ್ರಗೌಡ ಪಾಟೀಲ್ ವಿರುದ್ಧ FIR

ಕೆಇಎ ನಡೆಸುವ ಪರೀಕ್ಷೆಯಲ್ಲಿ ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್ ರುದ್ರಗೌಡ ಪಾಟೀಲ್​ ಕರಾಮತ್ತು ಇದೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿರುವ ತ್ರಿಮೂರ್ತಿ ಹೇಳಿಕೆ ಆಧರಿಸಿ ರುದ್ರಗೌಡ ಪಾಟೀಲ್ ವಿರುದ್ಧ FIR ದಾಖಲು ಮಾಡಲಾಗಿದೆ.

ಕೆಇಎ ಪರೀಕ್ಷೆಯಲ್ಲಿ ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್ ಕೈವಾಡ: ರುದ್ರಗೌಡ ಪಾಟೀಲ್ ವಿರುದ್ಧ FIR
ರುದ್ರಗೌಡ ಪಾಟೀಲ್
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2023 | 7:01 PM

ಕಲಬುರಗಿ, ಅಕ್ಟೋಬರ್​​​​ 28: ಕಳೆದ ವರ್ಷ ನಡೆದ ಪಿಎಸ್​ಐ ಅಕ್ರಮ ನೇಮಕಾತಿ ಹಗರಣ ಮಾಸುವ ಮುನ್ನವೇ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮತ್ತೆ ಪರೀಕ್ಷಾ ಅಕ್ರಮ ನಡೆದಿದೆ. ಇದೀಗ ಕೆಇಎ ನಡೆಸುವ ಪರೀಕ್ಷೆಯಲ್ಲಿ ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್ ರುದ್ರಗೌಡ ಪಾಟೀಲ್ (Rudragowda Patil)​ ಕರಾಮತ್ತು ಇದೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿರುವ ತ್ರಿಮೂರ್ತಿ ಹೇಳಿಕೆ ಆಧರಿಸಿ ರುದ್ರಗೌಡ ಪಾಟೀಲ್ ವಿರುದ್ಧ FIR ದಾಖಲು ಮಾಡಲಾಗಿದೆ.

ತ್ರಿಮೂರ್ತಿ, ಸಹೋದರ ಅಂಬರೀಶ್, ರುದ್ರಗೌಡ ಪಾಟೀಲ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಕಾರಿನಲ್ಲಿ ಕುಳಿತು ಬ್ಲೂಟೂತ್ ಮೂಲಕ ಆರೋಪಿಗಳು ಉತ್ತರ ಹೇಳುತ್ತಿದ್ದರು. ನಕಲು ಮಾಡಲು ಸಹಾಯ ಮಾಡಿದ ಆರೋಪದಡಿ ಐಪಿಸಿ ಸೆಕ್ಷನ್ 420, 120ಬಿ, ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಇಂದು ಮತ್ತು ನಾಳೆ ಕೆಇಎ ವಿವಿಧ ಇಲಾಖೆಗಳ ಪ್ರಥಮ ಮತ್ತು ದ್ವಿತಿಯ ದರ್ಜೆ ಸಹಾಯಕತ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇಂದು ರಾಜ್ಯಾದ್ಯಂತ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆದಿತ್ತು. ಎಲ್ಲವೂ ಸುಗಮವಾಗಿ ಸಾಗ್ತಿದೆ ಎನ್ನೋವಷ್ಟರಲ್ಲಿ ಪಿಎಸ್​ಐ ಅಕ್ರಮದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮತ್ತೆ ನಕಲು ನಡೆದಿದೆ. ಬ್ಲ್ಯೂಟೂತ್ ಡಿವೈಸ್ ಬಳಿಸಿ ಪರೀಕ್ಷೆ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ವಿವಿಧ ಕಡೆ ದಾಳಿ ನಡೆಸಿತ್ತು. ಪರಿಣಾಮ ಕಲಬುರಗಿ ನಗರದ ಎರಡೂ ಹಾಗೂ ಅಫಜಲಪುರದಲ್ಲಿ ಒಟ್ಟು ಆರು ಜನರನ್ನ ರೆಡ್ ಹ್ಯಾಂಡ್ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: PSI ಪರೀಕ್ಷೆ ಹಗರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ

ಕಲಬುರಗಿಯ ವಿವಿಯ ಕಾಮಸ್೯ ವಿಭಾಗದಲ್ಲಿ ಪರೀಕ್ಷೆ ಬರೆಯುತ್ತಿದ್ದ ಲಕ್ಷ್ಮೀಪುತ್ರ ಹಾಗೂ ಶರಣಬಸವೇಶ್ವರ ವಿವಿಯಲ್ಲಿ ಬ್ಲ್ಯೂಟೂತ್ ಬಳಸಿ ನಕಲು ಮಾಡುತ್ತಿದ್ದ ತ್ರೀಮೂರ್ತಿಯನ್ನ ಖಾಕಿಪಡೆ ಹೆಡೆಮುರಿ ಕಟ್ಟಿದೆ. ಅತ್ತ ಅಫಜಲಪುರದಲ್ಲಿಯೂ ಒಟ್ಟು ಆರು ಜನರನ್ನ ಖೆಡ್ಡಾಗೆ ಕೆಡವಿ ಜೈಲಿಗಟ್ಟಿದ್ದಾರೆ.

ಸದ್ಯ ಖಾಕಿ ಖೆಡ್ಡಾಗೆ ಬಿದ್ದವರಲ್ಲಿ ಬಹುತೇಕರು ಅಫಜಲಪುರ ತಾಲೂಕಿನ ಸೊನ್ನ ಗ್ರಾಮವರು ಎನ್ನೋದು ವಿಶೇಷ. ಯಾಕೆಂದ್ರೆ ಈ ಹಿಂದೆ ಪಿಎಸ್ಐ ಹಗರಣದ ಮಾಸ್ಟರ್ ಮೈಂಡ್ ಕಿಂಗ್ ಫಿನ್ ಕೂಡ ಇದೇ ಗ್ರಾಮದವನಾಗಿದ್ದ. ಹೀಗಾಗೇ ಸದ್ಯ ಈ ಭಾಗದ ಜನರು ಹಾಗೂ ಖಾಕಿಗೆ ಮತ್ತೆ ಆ ಗ್ಯಾಂಗ್ ಆ್ಯಕ್ಟಿವ್ ಆಯ್ತಾ ಎನ್ನುವ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಯಾದಗಿರಿ: ಬ್ಲೂಟೂತ್ ಬಳಸಿ ಕೆಪಿಎಸ್​ಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ

ಕಳೆದ ಪಿಎಸ್​ಐ ಹಗರಣದಲ್ಲಿ ನಿಷ್ಠಾವಂತ ವಿದ್ಯಾರ್ಥಿಗಳು ಕಣ್ಣೀರು ಹಾಕ್ತಿರೋವಾಗಲೇ ಮತ್ತೆ ಅದೇ ರೀತಿ ಘಟನೆ ನಡೆದಿದ್ದು ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಯಾದಗಿರಿಲ್ಲೂ ಇಂದು ಒಟ್ಟು ಆರು ಜನರನ್ನ ಖಾಕಿ ಬಲೆಗೆ ಕೆಡವಿದ್ದು, ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು? ಇವರಿಗೆ ಬ್ಲ್ಯುಟೂತ್ ನಲ್ಲಿ ಅನ್ಸರ್ ಹೇಳ್ತಿರೋದು ಯಾರು? ಮತ್ತು ಪರೀಕ್ಷಾ ಕೇಂದ್ರಗಳ‌ ಕುಮ್ಮಕ್ಕೂ ಈ ಅಕ್ರಮಕ್ಕೆ ಇತ್ತಾ ಎನ್ನೋ ಅಯಾಮದಡಿ ತನಿಖೆ ನಡೆಸುತ್ತಿದ್ದಾರೆ.

ಯಾಕೆಂದ್ರೆ ಈಗಾಗಲೇ ಕಲಬುರಗಿ ಅಕ್ರಮ ಪರೀಕ್ಷೆ ನಡೆಯುವ ಕೇಂದ್ರ ಸ್ಥಾನವಾಗ್ತಿದಿಯಾ ಎನ್ನೋ ಅನುಮಾನ ಶುರುವಾಗಿದೆ. ಯಾವುದೇ ಇಲಾಖೆಯ ಪರೀಕ್ಷೆಯಿರಲಿ ಎಷ್ಟೇ ಕಟ್ಟುನಿಟ್ಟಿನ ಬಿಗಿ ಭದ್ರತೆಯಿದ್ದರು ಈ ಬ್ಲ್ಯುಟೂತ್ ಗ್ಯಾಂಗ್ ಅಕ್ರಮ ಮಾಡ್ತಿದೆ. ಅಕ್ರಮ ಪಿಎಸ್ಐ ನೇಮಕಾತಿಯಲ್ಲಿ ಗುಡಗಿದ್ದ ಪ್ರಿಯಾಂಕ್ ಖರ್ಗೆ ತವರಲ್ಲೆ ಮತ್ತೆ ಸ್ಕ್ಯಾಮ್ ಬಯಲಿಗೆ ಬಂದಿದೆ. ಇವಾಗಲಾದ್ರು ಈ ಅಕ್ರಮ ಕಡಿವಾಣ ಬಿಳುತ್ತಾ ಇಲ್ವೋ ಎನ್ನೋ ಪ್ರಶ್ನೆ ಎದ್ದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ