ಹಾವೇರಿ: ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಕೊಲೆಗೈದ ತಾಯಿ, ಇಬ್ಬರ ಬಂಧನ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಪ್ರಿಯಕರನೊಂದಿಗೆ ಸೇರಿ ನಾಲ್ಕು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 5 ರಂದು ಮಗಳನ್ನು ಕೊಲೆ ಮಾಡಿ, ಶವವನ್ನು ತುಂಗಾಮೇಲ್ದಂಡೆ ಕಾಲುವೆಯಲ್ಲಿ ಸುಡಲು ಯತ್ನಿಸಿದ್ದರು. ಅರ್ಧ ಸುಟ್ಟ ಸ್ಥಿತಿಯಲ್ಲಿ ಮಗಳ ಶವ ಪತ್ತೆಯಾಗಿದೆ.

ಹಾವೇರಿ: ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಕೊಲೆಗೈದ ತಾಯಿ, ಇಬ್ಬರ ಬಂಧನ
ಬಂಧಿತ ತಾಯಿ ಗಂಗಮ್ಮ

Updated on: Sep 10, 2025 | 1:03 PM

ಹಾವೇರಿ, ಸೆಪ್ಟೆಂಬರ್​ 10: ಪ್ರಿಯಕರನೊಂದಿಗೆ ಸೇರಿ ಮಗುವನ್ನೇ ತಾಯಿ (mother) ಕೊಲೆಗೈದ (kill) ದಾರುಣ ಘಟನೆಯೊಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ನಡೆದಿದೆ.  ಉಸಿರುಗಟ್ಟಿಸಿ ಪ್ರಿಯಾಂಕಾ(4) ಹತ್ಯೆಗೈದ ಗಂಗಮ್ಮ ಮತ್ತು ಅಣ್ಣಪ್ಪ. ಸದ್ಯ ರಾಣೇಬೆನ್ನೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದು, ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಡೆದದ್ದೇನು?

ಗಂಗಮ್ಮಗೆ ಈಗಾಗಲೇ ಮದುವೆ ಆಗಿ ಒಂದು ಮಗು ಕೂಡ ಇದೆ. ಆದರೂ ಪತಿ ಬಿಟ್ಟು ಪ್ರಿಯಕರ ಅಣ್ಣಪ್ಪ ಮಡಿವಾಳ ಜತೆಗೆ ಗಂಗಮ್ಮ ವಾಸವಾಗಿದ್ದಳು. ಇತ್ತ ಪತಿ ಮಗಳನ್ನಾದರೂ ಕಳಿಸಿಕೊಡು‌ ಎಂದು ಕೇಳಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ತಮಾಷೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕತ್ತರಿಯಿಂದ ಇರಿದು ಕೊಂದ ಗೆಳೆಯ

ಇದನ್ನೂ ಓದಿ
ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್: 30 ಲಕ್ಷ ರೂ ಪಂಗನಾಮ!
ಪ್ರಿಯಕರನ ಜೊತೆ ಸದಾನಂದವಾಗಿರಲು ಗಂಡನ ಮರ್ಮಾಂಗ ಹಿಚುಕಿದ ಸುನಂದಾ!
ಕುಡುಕ ಮಗನ ಕಾಟ ತಾಳಲಾರದೆ ಬೆಂಕಿ ಹಚ್ಚಿ ಕೊಲೆ; ತಂದೆ, ತಾಯಿ ಸೇರಿ 3 ಬಂಧನ
ಪಿಜಿಗೆ ನುಗ್ಗಿ ಯುವತಿಯ ಕಾಲು ಸವರಿ ಎಸ್ಕೇಪ್ ಆಗಿದ್ದವ ಕೊನೆಗೂ ಅರೆಸ್ಟ್

ಇನ್ನು ಈ ಮುಂಚೆ ಅಂದರೆ ಆ.5ರಂದು ತುಂಗಾಮೇಲ್ದಂಡೆ ಕಾಲುವೆ ಬಳಿ ಪ್ರಿಯಾಂಕಾ ಕೊಲೆಗೈದು ಶವ ಸುಟ್ಟುಹಾಕಲು ಯತ್ನಿಸಲಾಗಿತ್ತು. ಬಾಲಕಿಯ ದೇಹ ಅರ್ಧ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಇದೀಗ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.

ಪ್ರೀತಿಸಿ ಮದುವೆ ಆಗಿದ್ದ ಗರ್ಭಿಣಿ ಪತ್ನಿಗೆ ಚಟ್ಟ ಕಟ್ಟಿದ ಪತಿ

ಇನ್ನೊಬ್ಬಳ ಮೇಲಿನ ಮೋಹಕ್ಕೆ ಪ್ರೀತಿಸಿ ಮದುವೆ ಆಗಿದ್ದ ಗರ್ಭಿಣಿ ಪತ್ನಿಗೆ ಪತಿ ಚಟ್ಟ ಕಟ್ಟಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬಿಕೆ ಉಗಾರ್ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಅಪಘಾತದ ನಾಟಕವಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಕೆ ಉಗಾರ ಗ್ರಾಮದ ಚೈತ್ರಾಲಿ ಕಿರಣಗಿ ಕೊಲೆಯಾದ ಗರ್ಭಿಣಿ. ಪತಿ ಪ್ರದೀಪ್ ಕಿರಣಗಿ ಬಂಧಿತ ಆರೋಪಿ. ಇತನಿಗೆ ಸಾಥ್ ನೀಡಿದ್ದ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸದ್ಧಾಂ ಇನಾಂದಾರ್, ಅಥಣಿ ತಾಲೂಕಿನ ಮಂಗಸೂಳಿತ ರಾಜೇಂದ್ರ ಕಾಂಬಳೆ ಕೂಡ ಬಂಧಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ

ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಚೈತ್ರಾಲಿ ಜೊತೆಗೆ ಪ್ರದೀಪ್ ಮದುವೆಯಾಗಿದ್ದ. ಬಳಿಕ ಕಾಲೇಜಿನ ಸೀನಿಯರ್ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದ. ಇದೇ ಕಾರಣಕ್ಕೆ 15 ಲಕ್ಷ ರೂ. ಸುಪಾರಿ ಕೊಟ್ಟು ಪತ್ನಿಗೆ ಚಟ್ಟ ಕಟ್ಟಿದ್ದ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.