AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ತಮಾಷೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕತ್ತರಿಯಿಂದ ಇರಿದು ಕೊಂದ ಗೆಳೆಯ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ಬರು ಗೆಳೆಯರ ನಡುವೆ ತಮಾಷೆಯಾಗಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ನಡೆದಿದೆ. ಕತ್ತರಿಯಿಂದ ಇರಿಯಲಾಗಿದೆ. ಸದ್ಯ ಚಿಂತಾಮಣಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಚಿಕ್ಕಬಳ್ಳಾಪುರ: ತಮಾಷೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕತ್ತರಿಯಿಂದ ಇರಿದು ಕೊಂದ ಗೆಳೆಯ
ಬಂಧಿತ ಆರೋಪಿ, ಕೊಲೆಯಾದ ಯುವಕ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Sep 10, 2025 | 7:56 AM

Share

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​ 10: ಅವರಿಬ್ಬರು ಹಣ್ಣಿನ ವ್ಯಾಪಾರಿಗಳು. ಜೊತೆಗೆ ಗೆಳೆಯರು (friend) ಹೌದು. ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದರು. ಆದರೆ ಮಂಗಳವಾರ ಒಂದು ದುರಂತ ನಡೆದು ಹೋಗಿದೆ. ತಮಾಷೆಯಲ್ಲೇ ಶುರುವಾದ ಜಗಳ, ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಅರ್ಬಾಜ್​ನನ್ನು ಫರ್ಹಾದ್​​ ಕೊಲೆ (kill) ಮಾಡಿದ್ದಾನೆ. ​

ಅರ್ಬಾಜ್ ಮತ್ತು ಫರ್ಹಾದ್‌, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಕೂಡ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಅರ್ಬಾಜ್‌ನ ಕೊಲೆ ಆಗಿದೆ.

ನಡೆದದ್ದೇನು?

ಚಿಂತಾಮಣಿ ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಇಬ್ಬರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿತ್ಯವೂ ಇಬ್ಬರು ಪರಸ್ಪರ ತಮ್ಮ ಮಾತಿನ ಮೂಲಕವೇ ಕಾಲೆಳೆಯುತ್ತಿದ್ದರು. ಅದರಂತೆಯೇ ನಿನ್ನೆ ಮಾತುನಾಡುತ್ತಾ ಗಲಾಟೆಗೆ ನಿಂತಿದ್ದಾರೆ. ನೋಡ ನೋಡುತ್ತಿದ್ದಂತೆ ಫರ್ಹಾದ್, ಅರ್ಬಾಜ್ ಮೇಲೆ ಕತ್ತರಿಯಿಂದ ಇರಿದಿದ್ದಾನೆ.

ಇದನ್ನೂ ಓದಿ
Image
ಪ್ರಿಯಕರನ ಜೊತೆ ಸದಾನಂದವಾಗಿರಲು ಗಂಡನ ಮರ್ಮಾಂಗ ಹಿಚುಕಿದ ಸುನಂದಾ!
Image
ಕುಡುಕ ಮಗನ ಕಾಟ ತಾಳಲಾರದೆ ಬೆಂಕಿ ಹಚ್ಚಿ ಕೊಲೆ; ತಂದೆ, ತಾಯಿ ಸೇರಿ 3 ಬಂಧನ
Image
ಪಿಜಿಗೆ ನುಗ್ಗಿ ಯುವತಿಯ ಕಾಲು ಸವರಿ ಎಸ್ಕೇಪ್ ಆಗಿದ್ದವ ಕೊನೆಗೂ ಅರೆಸ್ಟ್
Image
ವಿಜಯಪುರ: ರೌಡಿಶೀಟರ್‌ ಭೀಮನಗೌಡ ಗುಂಡಿನ ದಾಳಿಗೆ ಬಲಿ

ಇದನ್ನೂ ಓದಿ: ಪ್ರೇಯಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಪ್ರಿಯಕರ ಆತ್ಮಹತ್ಯೆ, ಡೆತ್​ ನೋಟ್​​ ನಲ್ಲೇನಿದೆ?

ಇಬ್ಬರ ನಡುವೆ ತಮಾಷೆಯಿಂದಲೇ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಫರ್ಹಾದ್ ಸೀದಾ ಕತ್ತರಿಯಿಂದ ಅರ್ಬಾಜ್ ಕುತ್ತಿಗೆಗೆ ಇರಿದಿದ್ದಾನೆ. ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದ ಅರ್ಬಾಜ್‌ನನ್ನ ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ ಬಿಟ್ಟಿದ್ದಾನೆ. ಸದ್ಯ ಚಿಂತಾಮಣಿ ನಗರ ಪೊಲೀಸರು ಆರೋಪಿ ಫರ್ಹಾದ್‌ನನ್ನ ಬಂಧಿಸಿದ್ದಾರೆ.

ನಿತ್ಯ ಜೊತೆಗೆ ಕೂತು ವ್ಯಾಪಾರ ಮಾಡುತ್ತಿದ್ದರು. ಆದರೆ ಅವರ ನಡುವೆ ತಮಾಷೆಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ದುರಂತವೇ ಸರಿ.

ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು 

ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದ ಘಟನೆ ದಾವಣಗೆರೆ ನಗರದ ಆರ್​ಟಿಒ ಕಚೇರಿ ಬಳಿಯ ಬೂದಾಳ್ ರಸ್ತೆಯಲ್ಲಿ ನಡೆದಿತ್ತು.

ಇದನ್ನೂ ಓದಿ: ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ

ಅಪಘಾತದಲ್ಲಿ ಮೃತಪಟ್ಟ ಯುವಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದ್ದು, ಯುಪಿಯಿಂದ ಬಂದು ಶಿವನಗರದಲ್ಲಿ ಸಲೂನ್ ಶಾಂಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಇನ್ನಿಬ್ಬರ ಮಾಹಿತಿ ತಿಳಿದು ಬಂದಿರಲಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:53 am, Wed, 10 September 25

ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ