AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎಷ್ಟು ಚಂದ ಈ ಬಾಂಧವ್ಯ; ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕ

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ತಂದೆಯಾದವನು ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡುಪಾಗಿಡುತ್ತಾನೆ. ಸೋಶಿಯಲ್‌ ಮೀಡಿಯಾದಲ್ಲಿ ಅಪ್ಪ ಮಗಳ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ತಂದೆಗೆ ಮಗಳೊಬ್ಬಳ ಕಿವಿ ಮಾತು ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎಷ್ಟು ಚಂದ ಈ ಬಾಂಧವ್ಯ; ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 26, 2026 | 5:05 PM

Share

ತಂದೆ ಮಗಳ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಪ್ಪನಿಗೆ (father) ಮಗಳು ಪ್ರಪಂಚವಾದರೆ, ಮಗಳಿಗೆ ಅಪ್ಪನೇ ಫಸ್ಟ್ ಹೀರೋ ಆಗಿರುತ್ತಾನೆ. ಇದೀಗ ಮಗಳ ಕಾಳಜಿಯುತ ಮಾತು ವೈರಲ್ ಆಗಿದೆ. ಆಟೋ ಡ್ರೈವರ್ ಆಗಿರುವ ಅಪ್ಪನಿಗೆ ಹುಷಾರಾಗಿ ವಾಹನ ಓಡಿಸು, ಮನೆಯಲ್ಲಿ ನಾನು ನನ್ನ ಅಮ್ಮ ಕಾಯುತ್ತಿರುತ್ತೇವೆ ಎನ್ನುತ್ತಿದ್ದಂತೆ ತಂದೆಯ ಕಣ್ಣು ಒದ್ದೆಯಾಗಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ರಜಿತಾ (rajitha494) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಗಳ ಕಾಳಜಿಯುತ ಮಾತು ಕೇಳಿ ತಂದೆಯ ಕಣ್ಣಲ್ಲಿ ನೀರು ತುಂಬಿದೆ. ಆಟೋ ಡ್ರೈವರ್ ಆಗಿರುವ ತಂದೆಯ ಮಡಿಲಿನಲ್ಲಿ ಕುಳಿತುಕೊಂಡಿರುವ ಮಗಳು, ಅಪ್ಪ ಗಾಡಿ ನಿಧಾನವಾಗಿ ಓಡಿಸು, ವೇಗವಾಗಿ ಓಡಿಸಿದ್ರೆ ರೋಡಲ್ಲಿ ಇರ್ತಾನೆ ಯಮ. ನೀನು ನಿಧಾನವಾಗಿ ಹೋದ್ರೆ ಮನೆಯಲ್ಲಿ ಕಾಯ್ತಾ ಇರ್ತೇವೆ ನಾನು ಅಮ್ಮ ಎಂದು ಹೇಳಿದ್ದಾಳೆ. ಮಗಳ ಮಾತು ಕೇಳಿದ ತಂದೆಯ ಕಣ್ಣು ಒದ್ದೆಯಾಗಿದೆ. ಕೊನೆಗೆ ತಂದೆ ತನ್ನ ಮಗಳನ್ನು ತಬ್ಬಿಕೊಂಡು ಮುದ್ದಿಸುತ್ತಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ವಿಡಿಯೋ 19 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಷ್ಟು ಸಣ್ಣ ವಯಸ್ಸಿನಲ್ಲಿ ಎಷ್ಟು ಚಂದ ಮಾತು ಆಡಿದ್ರಿ ತಂಗ್ಯಮ್ಮ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೃದಯ ಮುಟ್ಟುವ ಅರ್ಥ ಪೂರ್ಣ ಮಾತು ಎಂದಿದ್ದಾರೆ. ಇನ್ನೊಬ್ಬರು, ಸೈಡಲ್ಲು ಹೋದ್ರು ಬಿಡಲ್ಲ ಯಮ ಕಣಮ್ಮ. ಗ್ರಹಚಾರ ಕೆಟ್ರೆ ಮನೆಯಲ್ಲಿ ಮಲಗಿದ್ರು ಬಿಡಲ್ಲ ಯಮ. ಇದ್ದಾಗ ಜಾಲಿ. ಹೊದಮೇಲೆ ಖಾಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ