ಪ್ರೇಯಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಪ್ರಿಯಕರ ಆತ್ಮಹತ್ಯೆ, ಡೆತ್ ನೋಟ್ ನಲ್ಲೇನಿದೆ?
ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ ಅದನ್ನು ನಿಭಾಯಿಸುವುದು ಬಹಳ ಕಷ್ಟ. ಕೆಲವರಿಗೆ ಯಾವ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬೀಳಬೇಕು ಎಂಬ ಮಾಹಿತಿ ಇರುವುದಿಲ್ಲ. ಅದರಂತೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಅಂತ ಹೋಗಿ ವಿದ್ಯಾರ್ಥಿಯೋರ್ವ ದುರಂತ ಸಾವು ಕಂಡಿದ್ದಾನೆ. ಹೀಗಾಗಿ ಓದುವ ವಯಸ್ಸಿನಲ್ಲಿ ಓದುವುದು ಬಹಳ ಮುಖ್ಯ. ಆದ್ರೆ, ಓದುವ ವಯಸ್ಸಿನಲ್ಲಿ ಅಡ್ಡದಾರಿಗಳು ಹಿಡಿದರೆ ಇಂತಹ ದುರಂತಗಳು ಆಗುತ್ತವೆ.

ಚಿಕ್ಕಬಳ್ಳಾಪುರ, (ಸೆಪ್ಟೆಂಬರ್ 07) : ಪ್ರೇಯಿಸಿ (Lover) ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪೇರೇಸಂದ್ರ (Peresandra) ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಕೇರಳದ (Kerala) ವಯನಾಡು (Wayanadu) ಮೂಲದ ಮೊಹಮ್ಮದ್ ಶಬ್ಬೀರ್ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಆರ್‌ಸಿಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್‌ನ (Allied Science Course) ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೋರ್ಸ್ ಮುಗಿಸಿ ಮನೆಗೆ ಮರಳಬೇಕಿದ್ದ ವಿದ್ಯಾರ್ಥಿ ಇಂದು (ಸೆಪ್ಟೆಂಬರ್ 7) ಬೆಳಗ್ಗೆ ಹಾಸ್ಟೆಲ್‌ನ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ರೂಮ್‌ನ ಕಿಟಕಿಗೆ ಟವೆಲ್ ಕಟ್ಟಿ, ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್ ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಸಿಕ್ಕಿದ್ದು, I didn’t stop anything until. I always love you forever, Athiti You are my fist and you are My last* ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಹಸಿರು ಧ್ವಜ ತಂದು ಮುಸ್ಲಿಂ ಯುವಕ ಗಲಾಟೆ: ಹಿಂದೂ ಯುವಕನಿಗೆ ಚಾಕು ಇರಿತ
ಡೆತ್‌ನೋಟ್‌ನಲ್ಲಿ ಬರೆದಿರುವಂತೆ ಮೃತ ವಿದ್ಯಾರ್ಥಿ ಶಬ್ಬೀರ್ ತನ್ನ ಸಹಪಾಠಿಯೊಬ್ಬಳನ್ನು ಲವ್ ಮಾಡುತ್ತಿದ್ದ. ಕಳೆದ ಕೆಲವು ದಿನಗಳಿಂದ ಮೃತ ಶಬ್ಬೀರ್‌ನ ಪೋನ್ ನಂಬರ್‌ನ್ನು ಆ ಹುಡುಗಿ ಬ್ಲಾಕ್ ಮಾಡಿದ್ದಳಂತೆ. ಜೊತೆಗೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲವಂತೆ. ಹೀಗಾಗಿ ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಸದ್ಯ ಪೇರೇಸಂದ್ರ ಠಾಣೆ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




