AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ವಿಡಿಯೋ ವೈರಲ್ ಆಗ್ತಿದ್ದಂತೆಯೇ ವ್ಯಕ್ತಿ ಪತ್ತೆಗೆ ಬಲೆ ಬೀಸಿದ ಪೊಲೀಸ್ರು

BMTC Bus Incident: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಯುವತಿಯೊಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದ ಘಟನೆಗೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಜುಲೈ 24ರಂದು ಮಾನ್ಯತಾ ಟೆಕ್​ಪಾರ್ಕ್ ಬಳಿ ಘಟನೆ ನಡೆದಿತ್ತು. ವಿಡಿಯೋ ಆಧರಿಸಿ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ವಿಡಿಯೋ ವೈರಲ್ ಆಗ್ತಿದ್ದಂತೆಯೇ ವ್ಯಕ್ತಿ ಪತ್ತೆಗೆ ಬಲೆ ಬೀಸಿದ ಪೊಲೀಸ್ರು
ಅನುಚಿತ ವರ್ತನೆImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on:Jul 26, 2026 | 3:54 PM

Share

ಮುಖ್ಯಾಂಶಗಳು

  • ಬಿಎಂಟಿಸಿ ಬಸ್​ನಲ್ಲಿ ಯುವತಿ ಜತೆ ಅನುಚಿತ ವರ್ತನೆ ಪ್ರಕರಣ
  • ಸಂಪಿಗೆಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು
  • ಜುಲೈ 24ರಂದು ಮಾನ್ಯತಾ ಟೆಕ್​ಪಾರ್ಕ್ ಬಳಿ ನಡೆದಿದ್ದ ಘಟನೆ

ಬೆಂಗಳೂರು, ಜುಲೈ 26: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ (bangaluru) ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ (Inappropriate Behavior) ವರ್ತಿಸಿದ್ದಾನೆ. ಕಿರುಕುಳ ನೀಡಿದ ಆಸಾಮಿಗೆ ಯುವತಿ ಮತ್ತು ಚಾಲಕ ಥಳಿಸಿದ್ದರು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲೇನಿದೆ?

ಜುಲೈ 24ರ ಮಧ್ಯಾಹ್ನ ಸುಮಾರು 12:42ರ ಸಮಯದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ  ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ದಂಪತಿ ಮೇಲೆ ಹಲ್ಲೆ: ವೈದ್ಯನ ಬಂಧನ

ಪರಿಶೀಲನೆಯ ವೇಳೆ ಈ ಕೃತ್ಯವು ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರ ರಿಂಗ್ ರಸ್ತೆಯ ಮಾನ್ಯತಾ ಟೆಕ್ ಪಾರ್ಕ್ ಬಸ್ ನಿಲ್ದಾಣದ ಹತ್ತಿರ ನಡೆದಿರುವುದು ತಿಳಿದುಬಂದಿದೆ. ಸಾರ್ವಜನಿಕ ಸ್ಥಳವಾದ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಅಪರಿಚಿತ ವ್ಯಕ್ತಿಯ ಬಗ್ಗೆ ಎಲ್ಲೆಡೆ ಮಾಹಿತಿ ಸಂಗ್ರಹಿಸಲು ಯತ್ನಿಸಲಾಗಿದೆಯಾದರೂ, ಸದ್ಯಕ್ಕೆ ಆತನ ಸುಳಿವು ಲಭ್ಯವಾಗಿಲ್ಲ. ಹೀಗಾಗಿ, ಮಹಿಳೆಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.

ನಡೆದಿದ್ದೇನು?

ಜುಲೈ 24ರಂದು ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ತೆರಳುತ್ತಿದ್ದ ಬಸ್​​​​​​​ಗೆ ಹತ್ತಿದ ವ್ಯಕ್ತಿಯೊಬ್ಬ, ಮಹಿಳೆಯರಿಗೆ ಉದ್ದೇಶಪೂರ್ವಕವಾಗಿ ಮೈ-ಕೈ ಮುಟ್ಟಿರುವ ಆರೋಪ ಕೇಳಿ ಬಂದಿತ್ತು. ಆತನ ವರ್ತನೆ ಮಿತಿಮೀರುತ್ತಿದ್ದಂತೆ ಯುವತಿ ಕೂಡಲೇ ಬಸ್ ಚಾಲಕನ ಗಮನಕ್ಕೆ ತಂದಿದ್ದಾಳೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಕೊರಳಪಟ್ಟಿ ಹಿಡಿದೆಳೆದು ಕಪಾಳಕ್ಕೆ ಬಾರಿಸಿದ್ದಳು. ಅರೆಬೆತ್ತಲಾದ ಆತನಿಗೆ ಬಸ್ ಚಾಲಕ ಕೂಡ ಗೂಸಾ ನೀಡಿದ್ದ. ಬಳಿಕ ಬಸ್​​​​ನಿಂದ ಆತ ಎಸ್ಕೇಪ್​ ಆಗಿದ್ದ. ಇನ್ನು ಈ ದೃಶ್ಯವನ್ನ ಯುವತಿ ಸೋಶಿಯಲ್ ಮೀಡಿಯಾಗೆ ಹಾಕಿದ್ದು, ವಿಡಿಯೋ ವೈರಲ್ ಆಗಿತ್ತು.

ಹಲವು ಸಲ ಮಹಿಳೆಯರಿಗೆ ಕಾಟ

ಮತ್ತೊಂದು ವಿಷಯ ಏನಂದರೆ ಆರೋಪಿ ವ್ಯಕ್ತಿ ಇದೇ ರೀತಿ ಹಲವು ಸಲ ಕಾಟ ಕೊಟ್ಟಿದ್ದಾನೆ. ಮಹಿಳೆಯರ ಸೀಟ್​​ನಲ್ಲಿ ಕುಳಿತುಕೊಳ್ಳುವುದು, ಮುಂದಿನ ಬಾಗಿಲಿನಿಂದ ಬಸ್​ ಹತ್ತೋದು, ರಶ್​ ಇದ್ದಾಗ ಅಸಭ್ಯವಾಗಿ ವರ್ತಿಸ್ತಿದ್ನಂತೆ. ಆದರೆ ಈ ಸಲ ಮಹಿಳೆ ಧೈರ್ಯದಿಂದ ಆತನಿಗೆ ತಕ್ಕ ಪಾಠ ಕಲಿಸಿದ್ದಳು.

ವರದಿ: ನಟರಾಜ್ ಟಿವಿ9 ಬೆಂಗಳೂರು​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:52 pm, Sun, 26 July 26

Follow Us