AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್: 30 ಲಕ್ಷ ರೂ ಪಂಗನಾಮ!

ಕರ್ನಾಟಕದ ಮಾಜಿ ಶಾಸಕರೊಬ್ಬರು ಸೈಬರ್ ವಂಚಕರಿಂದ ಬರೋಬ್ಬರಿ 30 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಿಬಿಐ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿ ಕರೆ ಮಾಡಿ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಸಿ, ಡಿಜಿಟಲ್ ಬಂಧನದ ನಾಟಕವಾಡಿ ಹಣ ಪೀಕಿದ್ದಾರೆ. ಸದ್ಯ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್: 30 ಲಕ್ಷ ರೂ ಪಂಗನಾಮ!
ಮಾಜಿ ಶಾಸಕ ಗುಂಡಪ್ಪ ವಕೀಲ್
ಗಂಗಾಧರ​ ಬ. ಸಾಬೋಜಿ
|

Updated on:Sep 10, 2025 | 9:23 AM

Share

ಬೆಂಗಳೂರು, ಸೆಪ್ಟೆಂಬರ್​ 10: ಸೈಬರ್ ಕ್ರೈಂ ವಂಚನೆ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸರ್ಕಾರಿ ಅಧಿಕಾರಿಗಳನ್ನು ಈ ವಂಚಕರು ಟಾರ್ಗೆಟ್​ ಮಾಡುತ್ತಿದ್ದಾರೆ. ಇದೀಗ ಇಂತಹದ್ದೆ ಒಂದು ಘಟನೆ ನಡೆದಿದೆ. ಮಾಜಿ ಶಾಸಕರೊಬ್ಬರಿಗೆ (MLA) ಡಿಜಿಟಲ್ ಅರೆಸ್ಟ್ (digital arrest) ಮಾಡುವ ಮೂಲಕ ಕಿಡಿಗೇಡಿಗಳು ಬರೋಬ್ಬರಿ 30 ಲಕ್ಷ ರೂ ವಂಚಿಸಿದ್ದಾರೆ.

ಮನಿ ಲಾಡರಿಂಗ್ ಕೇಸ್ಸ್​ನಲ್ಲಿ ಭಾಗಿ ಎಂದು ಬೆದರಿಕೆ

ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಔರಾದ್​​ನ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ವಂಚನೆ ಮಾಡಲಾಗಿದೆ. ಆಗಸ್ಟ್ 12ರಂದು ಸಿಬಿಐ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದ್ದ ವಂಚಕರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್ಸ್​ನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‍ಗಳು ಸಿಕ್ಕಿದ್ದು, ಸಾಕಷ್ಟು ವ್ಯವಹಾರ ನಡೆದಿದೆ ಎಂದು ಡಿಜಿಟಲ್ ಅರೆಸ್ಟ್ ನಾಟಕವಾಡಿದ್ದಾರೆ.

ಇದನ್ನೂ ಓದಿ: ಪ್ರತೇಕ ಘಟನೆ: ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲ ಗೆಹ್ಲೋಟ್​​​ಗೆ ಫೋನ್ ಕರೆ, ಜಡ್ಜ್​​ಗೆ 12 ಸಾವಿರ ರೂ. ವಂಚನೆ!

ಇದನ್ನೂ ಓದಿ
Image
ರಾಜ್ಯಪಾಲ ಗೆಹ್ಲೋಟ್​​​ ಗೆ ಪೇಕ್ ಕಾಲ್, ಜಡ್ಜ್​​ಗೆ 12 ಸಾವಿರ ರೂ. ವಂಚನೆ!
Image
ಸೈಬರ್​ ವಂಚನೆ: ಲಕ್ಷಾಂತರ ರೂ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್‌
Image
ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ
Image
ಗವರ್ನರ್ ಹೆಸರು ಬಳಸಿಕೊಂಡು ನಕಲಿ ಫೇಸ್​ಬುಕ್ ಖಾತೆ ಓಪನ್, ಎಫ್​ಐಆರ್ ದಾಖಲು

ಬಳಿಕ ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ. ಪ್ರಾಪರ್ಟಿ ತನಿಖೆ ಮಾಡಬೇಕೆಂದು 30 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ. ಆನ್‍ಲೈನ್​ನಲ್ಲಿ ಜಡ್ಜ್ ಮುಂದೆ ಹಾಜರುಪಡಿಸಲಾಗುವುದು. ತನಿಖೆಯ ನಂತರ ಆ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ್ದಾರೆ.

ಹೀಗೆ ಸತತ ತಮ್ಮನ್ನು ಸಂಪರ್ಕಿಸುತ್ತಾ ಡಿಜಿಟಲ್ ಬಂಧನದಲ್ಲಿರಿಸಿ ಹಣದ ವ್ಯವಹಾರ ಮಾಡುತ್ತಿದ್ದ ವಂಚಕರ ಈ ವಂಚನೆ ಜಾಲ ಅರಿತ ಶಾಸಕ ಸದ್ಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಫೋಟೋ, ಹೆಸರು ಬಳಸಿ ನಕಲಿ ಫೇಸ್​ಬುಕ್ ಖಾತೆ ಓಪನ್, ಎಫ್​ಐಆರ್ ದಾಖಲು

ಇನ್ನು ಸೈಬರ್ ಕಾಲದಲ್ಲಿರುವ ಜನರಿಗೆ ಅದರಿಂದಲೇ ವಂಚನೆ ಆಗುತ್ತಿರುವುದು ಮಾತ್ರ ದುರಂತವೇ ಎನ್ನಬಹುದು. ಸಾಮಾನ್ಯ ಜನರಾಗಿದ್ದರೂ, ಜನಪ್ರತಿನಿಧಿಯಾದರೂ ಸೈಬರ್ ವಂಚಕರಿಗೆ ವಂಚನೆಯೇ ಮುಖ್ಯ. ದಿನದಿಂದ ದಿನಕ್ಕೆ ಸಾಕಷ್ಟು ಜನರು ಈ ಡಿಜಿಟಲ್ ಅರೆಸ್ಟ್​ಗೆ ಒಳಗಾಗುತ್ತಿರುವುದು ವರದಿ ಆಗುತ್ತಿವೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 am, Wed, 10 September 25