ಹಾವೇರಿ, ಜನವರಿ 22: ಜಿಲ್ಲೆಯ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ವಿವಾದಿತ ಜಾಗದಲ್ಲಿ ಶ್ರೀರಾಮನ (Lord Ram) ಭಾವಚಿತ್ರ ಇಟ್ಟು ಪೂಜೆ ಮಾಡಲಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಸಂಚಾಲಕ ಗಂಗಾಧರ್ ಶೆಟ್ಟರ್, ಸೋಮಶೇಖರ್ ಗೌರಿಮಠ, ಈರಣ್ಣ ಬಳೇಗಾರ, ಮೋಹನ್ ಮೀರಜಕರ್ಸೇರಿ ಐವರನ್ನು ಬಂಕಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಹಾವೇರಿ ಎಸ್.ಪಿ ಅಂಶು ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಳಿಕ ಶ್ರೀರಾಮನ ಭಾವಚಿತ್ರವನ್ನು ತೆಗೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾವೇರಿ ಎಸ್ಪಿ ಬಿಗಿ ಪೊಲೀಸ್ ಬಂದೋಬಸ್ತ ನೀಡಿದ್ದಾರೆ. ಸದ್ಯ ಬಂಕಾಪುರ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗದಲ್ಲಿ ಹಿಂದೂ ಸುಮಾರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತಿತ್ತು. ಆದರೆ ಈ ಜಾಗ ನಮ್ಮದು ಎಂದು ಮುಸ್ಲಿಂ ಸಮುದಾಯದವರು ತಕರಾರು ತೆಗೆದಿದ್ದರು. ಹಾಗಾಗಿ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗ ವಿವಾದಿತ ಜಾಗವಾಗಿದೆ. ಸದ್ಯ ಈ ಕುರಿತಾಗಿ ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಹಿನ್ನೆಲೆ ಗದಗ ತಾಲೂಕಿನ ಮುಳಗುಂದ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪೂಜೆ ವೇಳೆ ವಾನರ ರೂಪಿ ಹನುಮ ಪ್ರತ್ಯಕ್ಷವಾಗಿದೆ. ಗರ್ಭಗುಡಿ ಹೊಸ್ತಿಲಲ್ಲಿ ಕುಳಿತ ಹನುಮ ಶ್ರೀರಾಮನ ದರ್ಶನ ಪಡೆದು ಹೋಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮದಲ್ಲಿ ಅಯೋದ್ಯೆ ಶ್ರೀರಾಮನ ಹೆಸರಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶ್ರೀರಾಮನ ಹೆಸರಿನಲ್ಲಿ ರಕ್ತ ನೀಡಿ ಮಾನವೀಯತೆ ಪ್ರದರ್ಶನ ಮಾಡಲಾಗಿದೆ. ಅನ್ನ ಸಂತರ್ಪಣೆ ಮತ್ತು ಸಿಹಿ ವಿತರಣೆ ಕೂಡ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಗದಗದ ಮಸೀದಿಯಲ್ಲಿ ಪೂಜೆ, ಹೋಮ
ಜಿಲ್ಲೆಯಾದ್ಯಂತ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು ಶ್ರೀಮಂತರವರೆಗೆ ಶ್ರೀರಾಮನ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಲಾಗಿದೆ. ಕೆಲವೆಡೆ ಪಟಾಕಿ ಸಿಡಿಸಿ, ಕೆಲವೆಡೆ ವಿವಿಧ ಬಗೆ ಖಾದ್ಯಗಳ ಪ್ರಸಾದ ವಿತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಪ್ರಭು ಶ್ರೀರಾಮನ ಮಂದಿರ ಉದ್ಘಾಟನೆ ಸಂಭ್ರಮ ಮುಗಿಲುಮುಟ್ಟಿದ್ದು, ನಗರದ ವಿವಿಧೆಡೆ ನಿರಂತರವಾಗಿ ರಾಮನ ಸ್ಮರಣ ಕಾರ್ಯಕ್ರಮಗಳು ನಡೆಯುತ್ತಿವೆ. ಹಿಂದೂ ಜಾಗೃತಿ ಸೇನೆ ವತಿಯಿಂದ ರಾಮನ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ: ಎಸ್ಪಿ ಮಿಥುನ್ ಕುಮಾರ್
ವೆಂಕಟೇಶ್ವರ ದೇವಾಲಯದಲ್ಲಿ ರಂಗೋಲಿಯಲ್ಲಿ ರಾಮನ ಸುಂದರ ಚಿತ್ರ ಅರಳಿದೆ. ಮಕ್ತಾಂಪುರ ಬಡಾವಣೆಯ ಹಿಂಗೂಲಾಂಬಿಕ ದೇವಸ್ಥಾನದಲ್ಲಿ 51 ದಂಪತಿಗಳಿಂದ ಹೋಮಹವನ ಮಾಡಲಾಗಿದೆ. ದೇವಸ್ಥಾನಗಳಿಗೆ ಬಗೆಬಗೆಯ ಹೂವುಗಳಿಂದ ಅಲಂಕರಿಸಿ ಭಜನೆ ಕಿರ್ತನೆ ಮಾಡಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.