ಹಾವೇರಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ತನಿಖೆಗೆ ಎಬಿವಿಪಿ ಒತ್ತಾಯ

| Updated By: ganapathi bhat

Updated on: Aug 28, 2021 | 4:17 PM

ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ಹಾವೇರಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ತನಿಖೆಗೆ ಎಬಿವಿಪಿ ಒತ್ತಾಯ
ಎಬಿವಿಪಿ ಪ್ರತಿಭಟನೆ
Follow us on

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಆಗಸ್ಟ್ 23 ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಆಗಸ್ಟ್ 23, 2021 ರಂದು ಕಾಲೇಜಿಗೆ ಹೋಗೋದಾಗಿ ಹೇಳಿ ಹೋಗಿದ್ದ ವಿದ್ಯಾರ್ಥಿನಿ ಕವಿತಾ ಹುಬ್ಬಳ್ಳಿ (20) ಬಳಿಕ, ಗಂಗಿಬಾವಿ ರಸ್ತೆ ಪಕ್ಕದ ಹೊಂಡದಲ್ಲಿ ಮೃತಳಾಗಿ ಪತ್ತೆಯಾಗಿದ್ದಳು. ಇದೀಗ, ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಕುರಿತು ತನಿಖೆಗೆ ಒತ್ತಾಯ ಕೇಳಿಬಂದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ: 82 ಲಕ್ಷ ರೂಪಾಯಿ ಹವಾಲಾ ಹಣ ಜಪ್ತಿ
ಹುಬ್ಬಳ್ಳಿಯಲ್ಲಿ 82 ಲಕ್ಷ ರೂಪಾಯಿ ಹವಾಲಾ ಹಣ ಜಪ್ತಿ ಮಾಡಲಾಗಿದೆ. ಕೇಶ್ವಾಪುರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ವೇಳೆ 82 ಲಕ್ಷ ರೂಪಾಯಿ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸ್ತಿದ್ದ ಹಣ ಜಪ್ತಿ ಮಾಡಲಾಗಿದೆ. ವಿಜಯಪುರದಿಂದ ಹುಬ್ಬಳ್ಳಿಗೆ ಹಣ ಸಾಗಿಸುತ್ತಿದ್ದ ವ್ಯಕ್ತಿ ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ನಗರ ಪಾಲಿಕೆ ಚುನಾವಣೆ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ಹಣ ಪತ್ತೆಯಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಚುನಾವಣಾ ಅಕ್ರಮಕ್ಕೆ ಬಳಸಲು ತಂದಿರುವ ಹಣವೆಂಬ ಶಂಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ 82 ಲಕ್ಷ ರೂಪಾಯಿ ಹವಾಲಾ ಹಣ ಜಪ್ತಿ ಮಾಡಲಾಗಿದೆ

ಚಿಕ್ಕಬಳ್ಳಾಪುರ: ಬಸ್ಸಿನಲ್ಲಿ ಕಾಲು‌ ತಾಗಿದ್ದಕ್ಕೆ ಮಾತಿನ ಚಕಮಕಿ; ನಡು ರಸ್ತೆಯಲ್ಲೇ ಮಾರಾಮಾರಿ
ಶಿಕ್ಷಕ ಮತ್ತು ಆತನ ಅಣ್ಣನಿಗೆ ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಮಾರ್ಗಾನುಕುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಪುಂಡರ ಗುಂಪಿನಿಂದ ಇಬ್ಬರನ್ನ ಹೊರಳಾಡಿಸಿ, ಓಡಾಡಿಸಿ ಹಲ್ಲೆ‌ ಮಾಡಲಾಗಿದೆ. ಶಿಕ್ಷಕ ರಾಜಕುಮಾರ್ ಮತ್ತವರ ಅಣ್ಣ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬಸ್ಸಿನಲ್ಲಿ ಕಾಲು‌ ತಾಗಿದ್ದಕ್ಕೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ತಾರಕ್ಕೇರಿದೆ. ವಿದ್ಯಾರ್ಥಿಗೆ ಕಾಲು ತಾಗಿದಾಗ ಶಿಕ್ಷಕ‌ ರಾಜಕುಮಾರ್ ಕ್ಷಮೆ ಕೇಳಿದ್ದರು. ಇಷ್ಟಕ್ಕೆ‌ ಸುಮ್ಮನಾಗದ ವಿದ್ಯಾರ್ಥಿಗಳ ಗುಂಪಿನಿಂದ ಶಿಕ್ಷಕ ರಾಜಕುಮಾರ್ ಗೆ ಥಳಿತವಾಗಿದೆ. ಥಳಿತಕ್ಕೊಳಗಾದ ರಾಜಕುಮಾರ್​ನಿಂದ ಅಣ್ಣನಿಗೆ ಗಲಾಟೆ ಮಾಹಿತಿ ನೀಡಲಾಗಿದೆ. ಘಟನೆ ಪ್ರಶ್ನಿಸಲು ಸಹೋದರ ರಾಜಕುಮಾರ್ ಬಂದಿದ್ದಾರೆ. ಈ ವೇಳೆ ಶ್ರೀನಿವಾಸ್​ಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮಧು ಸೇರಿದಂತೆ 10 ಮಂದಿ ವಿರುದ್ಧ ಹಲ್ಲೆಗೊಳಗಾದ ಶ್ರೀನಿವಾಸ್ ದೂರು ದಾಖಲಿಸಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮದುವೆ ಮಾಡಿಕೊಟ್ಟಿಲ್ಲ ಎಂದು ಹುಡುಗಿಯ ತಂದೆಯನ್ನೇ ಕೊಂದಿದ್ದ; ಮೈಸೂರು ರೇಪ್ ಕೇಸ್ ಆರೋಪಿಯ ಹಿನ್ನೆಲೆ ಬಯಲಿಗೆ

ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಹೃದಯಾಘಾತ

Published On - 3:55 pm, Sat, 28 August 21