ಹಾವೇರಿ: ಮೈಲಾರ ಜಾತ್ರೆಗೆ ಹೊರಟಿದ್ದಾಗ ಅಪಘಾತ, ಮೂವರ ಸಾವು

|

Updated on: Feb 11, 2025 | 1:08 PM

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಬೈಕಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮೂವರು ಹನುಮನಮಟ್ಟಿ ಗ್ರಾಮದವರಾಗಿದ್ದು, ಮೈಲಾರ ಜಾತ್ರೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಮೂವರಲ್ಲಿ ಇಬ್ಬರು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರು. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ: ಮೈಲಾರ ಜಾತ್ರೆಗೆ ಹೊರಟಿದ್ದಾಗ ಅಪಘಾತ, ಮೂವರ ಸಾವು
ಅಪಘಾತ
Follow us on

ಹಾವೇರಿ, ಫೆಬ್ರವರಿ 11: ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು (Ranebennur) ತಾಲೂಕಿನ ಗುಡಗೂರು ಕ್ರಾಸ್ ಬಳಿ ಎತ್ತಿನಬಂಡಿಗೆ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಶಿಕುಮಾರ್ (25), ಆಕಾಶ್ (23), ದರ್ಶನ್ (23) ಮೃತ ದುರ್ದೈವಿಗಳು. ಮೂವರು ಹನುಮನಮಟ್ಟಿ ಗ್ರಾಮದಿಂದ ಮೈಲಾರ ಜಾತ್ರೆಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಆಕಾಶ್​ ಮತ್ತು ದರ್ಶನ್​ ಅಂತಿಮ ವರ್ಷದ ಬಿಎಸ್​ಸಿ ಓದುತ್ತಿದ್ದರು. ಶಶಿಕುಮಾರ್ ಹನುಮನಮಟ್ಟಿ ಗ್ರಾಮದಲ್ಲಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ನಾಲ್ವರು ಕಾರ್ಮಿಕರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ‌ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿಡನೂರು ಬಳಿ ನಡೆದಿದೆ. 14 ಕಾರ್ಮಿಕರನ್ನು ಕೂಲಿ ಕೆಲಸಕ್ಕೆ ಕರೆದೊಯ್ತಿದ್ದಾಗ ವಾಹನ ಪಲ್ಟಿಯಾಗಿದೆ. ಗಾಯಾಳು ಕೂಲಿ ಕಾರ್ಮಿಕರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರದಿ: ಅಣ್ಣಪ ಬಾರ್ಕಿ ಮತ್ತು ಮಂಜುನಾಥ್​ ಕೆಬಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Tue, 11 February 25