ರಾಜ್ಯ, ಅಂತಾರಾಜ್ಯಗಳಲ್ಲಿ ಹಾವೇರಿಯ ಕನ್ನೂರು ಗ್ರಾಮದ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ; ಕಳೆದ 100 ವರ್ಷಗಳಿಂದ ವಿಗ್ರಹ ತಯಾರಿಕೆ

| Updated By: Digi Tech Desk

Updated on: Sep 19, 2023 | 9:56 AM

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕುನ್ನೂರ ಎಂಬ ಪುಟ್ಟ ಗ್ರಾಮದ ಶೇ.60ರಷ್ಟು ಕುಟುಂಬಗಳು ಕಳೆದ 100 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ. ಇಲ್ಲಿನ ಗಣೇಶ ವಿಗ್ರಹಗಳು ರಾಜ್ಯಾ ಹಾಗೂ ನೆರೆ ರಾಜ್ಯಗಳಿಗೆ ಹೆಸರುವಾಸಿಯಾಗಿದೆ.

ರಾಜ್ಯ, ಅಂತಾರಾಜ್ಯಗಳಲ್ಲಿ ಹಾವೇರಿಯ ಕನ್ನೂರು ಗ್ರಾಮದ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ; ಕಳೆದ 100 ವರ್ಷಗಳಿಂದ ವಿಗ್ರಹ ತಯಾರಿಕೆ
ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಮಹಿಳೆ
Follow us on

ಹಾವೇರಿ ಸೆ.19: ರಾಜ್ಯಾದ್ಯಂತ ಗಣೇಶ ಚತುರ್ಥಿಯನ್ನು (Ganesh Chaturthi) ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಣ್ಣಿನ ಗಣಪಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ಹಾವೇರಿ (Haveri) ಜಿಲ್ಲೆಯ ಶಿಗ್ಗಾಂವ (Shiggaon) ತಾಲೂಕಿನ ಕುನ್ನೂರ ಎಂಬ ಪುಟ್ಟ ಗ್ರಾಮದ ಗಣೇಶ ಮೂರ್ತಿಗಳು (Ganesh Statue) ರಾಜ್ಯಾ ಹಾಗೂ ನೆರೆ ರಾಜ್ಯಗಳಿಗೆ ಹೆಸರುವಾಸಿಯಾಗಿದೆ. ಈ ಗ್ರಾಮದ ಶೇ.60ರಷ್ಟು ಕುಟುಂಬಗಳು ಕಳೆದ 100 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.

ಗಣೇಶ ಮೂರ್ತಿಗಳನ್ನು ತಯಾರಿಸಲು ಗ್ರಾಮಸ್ಥರು ಗೊಟಗೋಡಿ ಕೆರೆಯ ಮಣ್ಣನ್ನು ಬಳಸುತ್ತಾರೆ. ಇದು ವಿಗ್ರಹಗಳಿಗೆ ಸೂಕ್ತವಾಗಿದೆ. ಕುಶಲಕರ್ಮಿಗಳು ಮೂರ್ತಿಗಳಿಗೆ ಪರಿಸರ ಸ್ನೇಹಿ ಬಣ್ಣಗಳನ್ನೇ ಬಳಸುತ್ತಾರೆ. ಈ ಗ್ರಾಮದ ಕಲಾವಿದರು ಒಂದು ಶತಮಾನದ ಹಿಂದೆ ಗಣೇಶ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸಿದರು.

ಗ್ರಾಮದಲ್ಲಿನ ಅನೇಕ ಕುಟುಂಬಗಳು ಜಾತಿ ಮತ್ತು ಧರ್ಮದ ಭೇದವಿಲ್ಲದೆ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ವಿಶೇಷವೆಂದರೆ ಗಣೇಶನ ಮೂರ್ತಿ ತಯಾರಿಕೆಯಲ್ಲಿ ಮಹಿಳೆಯರೂ ತೊಡಗಿಸಿಕೊಂಡಿದ್ದಾರೆ. ಈ ವಿಗ್ರಹಗಳು ಪರಿಸರ ಸ್ನೇಹಿ ಮತ್ತು ಮಣ್ಣಿನಿಂದ ಮಾಡಲ್ಪಟ್ಟಿವೆ.

ಕುನ್ನೂರು ಗ್ರಾಮದ ಜನರ ಮುಖ್ಯ ವೃತ್ತಿ ಗಣೇಶ ಮೂರ್ತಿಗಳನ್ನು ತಯಾರಿಸುವುದು. ಗಣೇಶ ಹಬ್ಬ ಮುಗಿದು ಒಂದು ತಿಂಗಳ ನಂತರ ಬರುವ ವರ್ಷದ ಗಣೇಶ ಚುತುರ್ಥಿಗಾಗಿ ವಿಗ್ರಹಗಳನ್ನು ತಯಾರಿ ಮಾಡಲು ಆರಂಭಿಸುತ್ತಾರೆ. ಈ ಮೂರ್ತಿಗಳನ್ನು ತಯಾರಿಸಲು 11 ತಿಂಗಳು ಬೇಕಾಗುತ್ತದೆ. ಕುನ್ನೂರು ಗಣೇಶ ಮೂರ್ತಿಗಳಿಗೆ ಅಕ್ಕಪಕ್ಕದ ಜಿಲ್ಲೆಗಳಿಗೆ ಮಾತ್ರವಲ್ಲದೆ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಲ್ಲೂ ಬೇಡಿಕೆ ಇದೆ.

ಇದನ್ನೂ ಓದಿ: ಹಾವೇರಿ ಪಟಾಕಿ ಅಗ್ನಿ ದುರಂತದಲ್ಲಿ ಮೂವರ ಸಾವು: ಹಳೇ ವಿದ್ಯಾರ್ಥಿಗಳಿಗಾಗಿ ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ ಶಾಲಾ ಆಡಳಿತ ಮಂಡಳಿ

ಇತ್ತೀಚಿಗೆ ಗ್ರಾಮದ ಓರ್ವ ವ್ಯಕ್ತಿ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸಹಿತ ಸ್ವಗ್ರಾಮದಿಂದಲೇ ಗಣೇಶ ವಿಗ್ರಹವನ್ನು ಕೊಂಡೊಯ್ಯದು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಜೇಡಿಮಣ್ಣಿನಿಂದ ತಯಾರಾಗುವ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಹಲವು ಬಾರಿ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನಮ್ಮ ಪಾರಂಪರಿಕ ಕಲೆಗೆ ಅನೇಕರು ಪ್ರೋತ್ಸಾಹ ನೀಡುತ್ತಿದ್ದಾರೆ . ಪ್ಲಾಸ್ಟರ್ ಆಫ್ ಪ್ಯಾರಿಸ್​​ನಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ನಮ್ಮ ಮೂರ್ತಿಗಳು ಪರಿಸರ ಸ್ನೇಹಿಯಾಗಿವೆ ಎಂದು ಕಲಾವಿದ ಚಂದ್ರಶೇಖರ ಚಿತ್ರಗಾರ ಹೇಳಿದರು.

ಗ್ರಾಮದ ಮತ್ತೋರ್ವ ಕಲಾವಿದ ಸುಬ್ಬಣ್ಣ ಮರಸಿದ್ದಣ್ಣನವರ್ ಮಾತನಾಡಿ ನಾವು ಮಹಾರಾಷ್ಟ್ರದಿಂದ ಸಾಕಷ್ಟು ಆರ್ಡರ್‌ಗಳು ಬರುತ್ತವೆ. ಅವರಿಗೆ ಪ್ರತಿ ವರ್ಷ ಕನಿಷ್ಠ 5,000 ರಿಂದ 8,000 ವಿಗ್ರಹಗಳ ಅಗತ್ಯವಿದೆ. ವಿಗ್ರಹಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆಗಳು ವಿಭಿನ್ನವಾಗಿವೆ. ಆದರೆ ತಯಾರಿಕೆ ವೆಚ್ಚ ಹೆಚ್ಚಾಗಿದೆ. ಆದ್ದರಿಂದ ನಾವು ಬೆಲೆಯನ್ನು ಶೇ10 ರಷ್ಟು ಹೆಚ್ಚಿಸಿದ್ದೇವೆ. 300 ರಿಂದ 30,000 ರೂ.ವರೆಗೆ ಗಣೇಶ ಮೂರ್ತಿಗಳನ್ನು ಗಾತ್ರಕ್ಕೆ ಅನುಗುಣವಾಗಿ ಮಾರಾಟ ಮಾಡುತ್ತಿದ್ದೇವೆ. ಕುನ್ನೂರು ಗಣೇಶ ಮೂರ್ತಿಗಳು ಈಗ ಬ್ರಾಂಡ್ ಆಗಿಬಿಟ್ಟಿವೆ. ಈ ವರ್ಷ ನಾವು ಉತ್ತಮ ವಹಿವಾಟು ನಿರೀಕ್ಷಿಸುತ್ತಿದ್ದೇವೆ ಏಕೆಂದರೆ ಕೊರೊನಾ ಸಯದಲ್ಲಿ ನಾವು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 am, Tue, 19 September 23