ಹಾವೇರಿ: ಹೆಚ್ಚಿದ ತಾಪಮಾನ; ಆಧುನಿಕ ಬರಾಟೆಯಲ್ಲಿ ಮೂಲೆ ಸೇರಿದ್ದ ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 13, 2024 | 7:23 PM

ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ಕಂಗೆಟ್ಟ ಬಡವರು ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ. ಹಾವೇರಿಯಲ್ಲಿ ಬಡವರ ಪಾಲಿನ ರೆಫ್ರಿಜಿರೇಟರ್‌, ನೈಸರ್ಗಿಕವಾದ ಫ್ರಿಡ್ಜ್‌ ಎಂದೇ ಕರೆಸಿಕೊಳ್ಳುವ ಮಣ್ಣಿನ ಮಡಿಕೆಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ.

ಹಾವೇರಿ: ಹೆಚ್ಚಿದ ತಾಪಮಾನ; ಆಧುನಿಕ ಬರಾಟೆಯಲ್ಲಿ ಮೂಲೆ ಸೇರಿದ್ದ ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್​
ಮಡಿಕೆಗೆ ಹೆಚ್ಚಿದ ಬೇಡಿಕೆ
Follow us on

ಹಾವೇರಿ, ಏ.13: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ಕಂಗೆಟ್ಟ ಬಡವರು ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆ(pot) ಖರೀದಿಗೆ ಮುಗಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವ ಕುಂಬಾರರಿಗೆ ಲಾಭ ಪಡೆದುಕೊಳ್ಳುವ ಅದೃಷ್ಟ ಬಂದಿದೆ. ಹಾವೇರಿ ಜಿಲ್ಲೆಯಲ್ಲಿ ಜನರು ತಂಪಾದ ನೀರನ್ನು ಕುಡಿಯಲು ಮಣ್ಣಿನ ಮಡಿಕೆಯ ಮೊರೆ ಹೋಗಿದ್ದಾರೆ. 37 ರಿಂದ 40 ಡಿಗ್ರಿ ತಾಪಮಾನ ಮುಟ್ಟಿರುವ ಹಿನ್ನಲೆ 10 ಗಂಟೆಯ ಒಳಗೆ ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದಾರೆ.

ಮನೆಯಲ್ಲೂ ನೆಮ್ಮದಿಯಿಂದ ಕೂರಲು ಆಗದೇ ಪ್ಯಾನ್ ಏಸಿ ಮೊರೆ ಹೋಗುತ್ತಿದ್ದಾರೆ. ಉಳ್ಳವರು ಪ್ಯಾನ್ ಏಸಿ ಮೊರೆ ಹೋದರೆ, ಬಡವರು ಬಿಸಣಿಕೆಯ ಆಸರೆ ಪಡೆದಿದ್ದಾರೆ. ಇನ್ನೂ ಬಡವರು ತಂಪಾದ ನೀರು ಕುಡಿಯಲು ಮಣ್ಣಿನ ಮಡಿಕೆ ಖರೀದಿಗೆ ಮುಂದಾಗಿದ್ದಾರೆ. ಕೆಂಪು ಮಣ್ಣಿನಲ್ಲಿ ತಯಾರಾದ ಮಡಿಕೆಯಲ್ಲಿ ನೀರನ್ನು ಇಟ್ಟರೆ ತಂಪಾಗಿ ಇರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳೆಯದು ಅಂತಿದ್ದಾರೆ ವ್ಯಾಪಾರಸ್ಥರು.

ಇದನ್ನೂ ಓದಿ:ದಾವಣಗೆರೆಯಲ್ಲಿ ಜೋರುಗಾಳಿ ಸಹಿತ ಮಳೆ, ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ನಿರಾಳ

ದೀಪಾವಳಿಯಲ್ಲಿ ಮಾತ್ರ ವ್ಯಾಪಾರವಾಗುತ್ತಿದ್ದ ಮಣ್ಣಿನ ಮಡಿಕೆಗಳು, ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ.  ಈ ಬಾರಿಯ ಬಿಸಿಲನ ತಾಪ ಹೆಚ್ಚಾಗಿ ಇರುವುದು ಕಳೆದ ಎರಡು ತಿಂಗಳಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹತ್ತು ಗಂಟೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು ಸೂರ್ಯ ಕೆಂಡವನ್ನು ಉಗುಳುತ್ತಿರುವ ಹಾಗೆ ಬಾಸವಾಗುತ್ತಿದೆ. ಚತ್ರಿ, ಟವಲ್ , ಕರ್ಚಿಪ್ ಸಹಾಯದಿಂದ ಜನರು ಹೊರಗೆ ಬರುತ್ತಿದ್ದಾರೆ.

ಒಟ್ಟಾರೆ ಈ ಭಾರಿ ಬಿಸಿಲ ತಾಪಕ್ಕೆ ಅಕ್ಷರಶಃ ರಾಜ್ಯದ ಜನರು ಕಂಗೆಟ್ಟಿದ್ದಾರೆ. ಯಾವಾಗ ಮಳೆ ಬರುತ್ತೋ ಎಂದು ದೇವರಲ್ಲಿ ಪಾರ್ಥಿಸುತ್ತಿದ್ದಾರೆ. ಆಗೋ ಇಗೋ ಮಳೆ ಬರುತ್ತೆ ಎನ್ನುವ ಮುನ್ಸೂಚನೆ ವಾತಾವರಣ ಕಾಣುತ್ತಿದೆ. ಆದರೆ, ಮಳೆ ಆಗುತ್ತಿಲ್ಲ. ಬೇಸಿಗೆ ಮುಗಿದು ಮಳೆಗಾಲ ಬಂದರೆ ಸಾಕು ಎನ್ನುತ್ತಿದ್ದಾರೆ ಜನರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ