ಅಧಿಕಾರಿಗಳ ಎಡವಟ್ಟಿನಿಂದ ನೂರಾರು ಎಕರೆ ಜಲಾವೃತ: ಬೆಳೆ ಹಾನಿಯಾಗಿದಕ್ಕೆ ಕಣ್ಣಿರು ಹಾಕಿದ ರೈತ

ರಾಜ್ಯದಲ್ಲಿ ಬರದ ಛಾಯೆ ಆವರಿಸಿ ನೀರಿಲ್ಲದೆ ಬೆಳೆ ಒಣಗುತ್ತಿವೆ. ಆದರೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದ ದೊಡ್ಡ ಕೆರೆಯ ನೀರಿನಿಂದ ಮೆಕ್ಕೆಜೋಳ, ಕಬ್ಬು, ಸುಗಂಧ ಹೂವಿನ ಬೆಳೆ ಜಲಾವೃತಗೊಂಡಿದೆ. ಕೆರೆಯ ಸುತ್ತುಮುತ್ತಲಿನ ರೈತರ ವಿವಿಧ ಬೆಳೆಗಳು ಹಾನಿಯಾಗಿವೆ. ಕಳೆದ ಮೂರು ವರ್ಷಗಳಿಂದ ಯಾವುದೇ ಒಂದು ಫಸಲು ಸಹ ಬಂದಿಲ್ಲ.

ಅಧಿಕಾರಿಗಳ ಎಡವಟ್ಟಿನಿಂದ ನೂರಾರು ಎಕರೆ ಜಲಾವೃತ: ಬೆಳೆ ಹಾನಿಯಾಗಿದಕ್ಕೆ ಕಣ್ಣಿರು ಹಾಕಿದ ರೈತ
ಜಮೀನಿಗೆ ನುಗ್ಗಿದ ನೀರು
Edited By:

Updated on: Oct 04, 2023 | 5:41 PM

ಹಾವೇರಿ, ಅಕ್ಟೋಬರ್​ 04: ರಾಜ್ಯದಲ್ಲಿ ಬರದ ಛಾಯೆ ಆವರಿಸಿ ನೀರಿಲ್ಲದೆ ಬೆಳೆ ಒಣಗುತ್ತಿವೆ. ಆದರೆ ಇಲ್ಲಿ ಮಾತ್ರ ನೂರಾರು ಏಕರೆ ಬೆಳೆ ಸಂಪೂರ್ಣ ಜಲಾವೃತ (Waterlogging) ಆಗಿದ್ದು, ನಮ್ಮ ಬೆಳೆಯನ್ನ ರಕ್ಷಿಸಿ ಎಂದು ಮನವಿ ಮಾಡಿದರು ಪರಿಹಾರ ಮಾತ್ರ ಸಿಗುತ್ತಿಲ್ಲ. ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದ ದೊಡ್ಡ ಕೆರೆಯ ನೀರಿನಿಂದ ಮೆಕ್ಕೆಜೋಳ, ಕಬ್ಬು, ಸುಗಂಧ ಹೂವಿನ ಬೆಳೆ ಜಲಾವೃತಗೊಂಡಿದೆ. ಕೆರೆಯ ಸುತ್ತುಮುತ್ತಲಿನ ರೈತರ ವಿವಿಧ ಬೆಳೆಗಳು ಹಾನಿಯಾಗಿವೆ. ಕಳೆದ ಮೂರು ವರ್ಷಗಳಿಂದ ಯಾವುದೇ ಒಂದು ಫಸಲು ಸಹ ಬಂದಿಲ್ಲ.

ಗ್ರಾಮದ ಬಳಿ 400 ಎಕರೆ ವಿಸ್ತೀರ್ಣ ಬೃಹತ್ ಕೆರೆ ಇದೆ. ಮಳೆಗಾಲದಲ್ಲಿ ಕೆರೆ ತುಂಬಿ ಕ್ರಮೇಣ ಕಡಿಮೆಯಾಗಿತ್ತು. ಸವಣೂರು ಏತನೀರಾವರಿ ಯೋಜನೆಯ ಮೂಲಕ 84 ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ವರದಾ ನದಿಯಿಂದ ಹತ್ತಿಮತ್ತೂರು ಕೆರೆಗೆ ನೀರು ಹರಿಸಿ, ಅಲ್ಲಿಂದ ಮತ್ತೆ ನಾಲ್ಕೈದು ಕೆರೆ ತುಂಬಿಸುವ ಯೋಜನೆಯಾಗಿದೆ. ಈ ಯೋಜನೆಯಿಂದ ಕೃಷಿಗೆ ಅನಕೂಲ ಆಗಿದೆ . ಆದರೆ ಕೆರೆಯ ಸುತ್ತುಮುತ್ತಲಿನ ರೈತರ ವಿವಿಧ ಬೆಳೆಗಳು ಹಾನಿಯಾಗಿವೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ರಾಷ್ಟ್ರಪತಿಗಳಿಗೆ ರಕ್ತದಲ್ಲಿ ಪತ್ರ ಬರೆದ ಹಾವೇರಿ ಯುವಕ, ರೈತರಿಗೆ ಸ್ಪಂದಿಸುವಂತೆ ಮನವಿ

ಕಳೆದ ಮೂರು ವರ್ಷಗಳಿಂದ ತಹಶಿಲ್ದಾರ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ವಿವಿಧ ಇಲಾಖೆಗೆ ಮನವಿ ಮಾಡಿದ್ದಾರೆ. ಯಾರು ಸಹ ಪರಿಗಣೆ ಮಾಡಿಲ್ಲ. ಕೆರೆ ಸುತ್ತಮುತ್ತಲೂ ಇರುವ 160 ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಮೆಕ್ಕೆಜೋಳ, ಮೆಣಸಿನಕಾಯಿ, ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಇದನ್ನೂ ಓದಿ: ಹಾವೇರಿ: ಕಡಿಮೆ ಬೆಲೆಗೆ ಚಿನ್ನದ ಆಸೆ ತೊರಿಸಿ 25 ಲಕ್ಷ ವಂಚನೆ; ಇಲ್ಲಿದೆ ವಿವರ

ಬ್ಯಾಂಕ್​ನಲ್ಲಿ ಇರುವ ಬೆಳೆಸಾಲ ಹೆಚ್ಚಾಗುತ್ತಿದೆ. ಆದರೆ ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ಇರುವುದೆ ನಮಗೆ ಒಂದು ಎಕರೆ, ಎರಡು ಎಕರೆ ಜಮೀನು. ಹೀಗೆ ಪ್ರತಿವರ್ಷ ಕೆರೆಯ ನೀರು ಜಮೀನಿಗೆ ‌ನುಗ್ಗಿದರೆ, ಫಸಲು ಎಲ್ಲಿಂದ ಬರಬೇಕು ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.

ಮೂರು ವರ್ಷಗಳಿಂದ ಅನ್ನದಾತರು ಈ ಸಮಸ್ಯೆ ಇದೆ. ಇ‌ನ್ನದಾರೂ ನೀರಾವರಿ ಇಲಾಖೆ, ತಹಶಿಲ್ದಾರ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನೊಂದ ರೈತರಿಗೆ ಸಮಸ್ಯೆ ಬಗೆಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us