ಇದು ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ

ಬಿಹಾರದಲ್ಲಿ ಜಾತಿಗಣತಿ ವರದಿ ಬಹಿರಂಗವಾದ ಬಳಿಕ ಕರ್ನಾಟಕದಲ್ಲೂ ಸಹ ಒತ್ತಾಯಗಳು ಕೇಳಿ ಬರುತ್ತಿವೆ. ಈ ಕುರಿತಾಗಿ ಸದ್ಯ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಜಾತಿ ಗಣತಿ ವರದಿ ಬಗ್ಗೆ ನಮ್ಮಲ್ಲಿ ಚರ್ಚೆಯೇ ಆಗಿಲ್ಲ. ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು ಎಂದಿದ್ದಾರೆ.

ಇದು ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Edited By:

Updated on: Oct 07, 2023 | 4:34 PM

ಹಾವೇರಿ, ಅಕ್ಟೋಬರ್​ 07: ಜಾತಿ ಗಣತಿ ವರದಿ ಬಗ್ಗೆ ನಮ್ಮಲ್ಲಿ ಚರ್ಚೆಯೇ ಆಗಿಲ್ಲ. ಜಾತಿ ಗಣತಿಯೋ? ಶೈಕ್ಷಣಿಕ ಗಣತಿಯೋ? ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯ ಬಂಕಾಪುರದಲ್ಲಿ ಮಾತನಾಡಿದ ಅವರು, ಇದು ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಜಾತಿ ಗಣತಿ ಅಲ್ಲ ಎಂದು ಹೇಳಿದ್ದಾರೆ. ಸದ್ಯ ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ.

ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ

ಬಾರ್ ಲೈಸೆನ್ಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ದ್ವಂದ್ವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಇದ್ದಾರೋ, ಸೂಪರ್ ಸಿಎಂ ಇದ್ದಾರೋ ಎಂದು ತಿಳಿಯುತ್ತಿಲ್ಲ. ಒಂದು ನೀತಿ ಬಗ್ಗೆ ಮಾತನಾಡಿದಾಗ ಸರ್ಕಾರ ಅದಕ್ಕೆ ಸ್ಪಷ್ಟನೆ ಕೊಡಲಿ. ಎಲ್ಲಾ ವಿಚಾರದಲ್ಲಿಯೂ ಸಿಎಂ ಒಂದು ದಾರಿ, ಡಿಸಿಎಂ ಒಂದು ದಾರಿ ಆಗಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಡಿಸಿಎಂ ನೀರು ಬಿಡಲ್ಲ ಎಂದರು. ಆದರೆ ಸಿಎಂ ನೀರು ಬಿಟ್ಟಿದ್ದನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಜಾತಿಗಣತಿಯ ವರದಿ ಅಂತಿಮ ಘಟ್ಟದಲ್ಲಿದೆ: ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

ಬರಗಾಲ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದಿರುವ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಬರೀ ಹೇಳಿಕೆಯಿಂದ ಬರಗಾಲ ಸಮರ್ಥವಾಗಿ ಎದುರಿಸುವುದಕ್ಕೆ ಆಗುವುದಿಲ್ಲ. ನಾವು ಇಂತಹ ಹೇಳಿಕೆ ಬಹಳ ನೋಡಿದ್ದೇವೆ. ಒಂದು ಬಿಡಿ ಕಾಸು ಎಲ್ಲೂ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಪತ್ರ ಬರೆದಿದ್ದು, ತಂಡ ಬರುತ್ತದೆ ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಯಾವುದಕ್ಕೂ ಕಾಯಲೆ ಇಲ್ಲಾ.

ಇದನ್ನೂ ಓದಿ: ಕೇಂದ್ರ ಎಷ್ಟಾದರೂ ಪರಿಹಾರ ಕೊಡಲಿ, ರಾಜ್ಯ ಸರ್ಕಾರ ಬರಗಾಲವನ್ನ ಸಮರ್ಥವಾಗಿ ಎದುರಿಸುತ್ತದೆ: ಸಿಎಂ ಸಿದ್ದರಾಮಯ್ಯ

ನಾವು ಕೂಡಲೆ ಹಣ ಕೊಟ್ಟು ಪರಿಹಾರ ನೀಡಿದ್ದೇವೆ. ಸುಮಾರು 2 ಸಾವಿರ ಕೋಟಿಗೂ ಅಧಿಕ ಹಣ ತಕ್ಷಣ ಬಿಡುಗಡೆ ಮಾಡಿದ್ದೆವು. ರಾಜ್ಯದ ಬೊಕ್ಕಸದಿಂದಲೇ ಸಹಾಯ ಮಾಡಬಹುದು. ಇಲ್ಲಾ ಎಂದರೆ ಕುಂಟು ನೆಪ ಹೇಳಿ ಮುಂದಕ್ಕೆ ಹಾಕಬಹುದು ಎಂದು ಸರ್ಕಾರದ ನೀತಿ ವಿರುದ್ಧ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ಮೂರು ತಾಲೂಕು ಬರಪೀಡಿತ ಪ್ರದೇಶ ಘೋಷಣೆ ವಿಳಂಬ ಕುರಿತಾಗಿ ಪ್ರತಿಕ್ರಿಯಿಸಿ, ರೆವೆನೂ ಮಿನಿಸ್ಟರ್ ಬಳಿ ಮಾತಾಡಿದ್ದೇನೆ. ಮತ್ತೊಮ್ಮೆ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇವೆ. ಸೋಮವಾರದ ಒಳಗೆ ಈ ಮೂರು ತಾಲೂಕು ಬರಗಾಲ ಪೀಡಿತ ಪಟ್ಟಿಯಲ್ಲಿ ಸೇರುತ್ತವೆ ಎಂದು ರೈತರಿಗೆ  ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us