Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ, ಹರಿದು ಬಂದ ಜನಸಾಗರ

ಹಾಡು , ಡ್ಯಾನ್ಸ್ , ದೀಪಲಂಕಾರ ಸೇರಿದಂತೆ ಡಿಜೆಗಳ ಮೂಲಕ ಗಣೇಶ ಹಬ್ಬವನ್ನು ಎಲ್ಲ ಕಡೆ ಆಚರಿಸುತ್ತಿದ್ದರೆ, ರಾಣೇಬೆನ್ನೂರಿನಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆ ಹಾವೇರಿ ಅಷ್ಟೆ ಅಲ್ಲದೆ ಶಿವಮೊಗ್ಗ, ದಾವಣಗೆರೆ ಧಾರವಾಡ ಜಿಲ್ಲೆಗಳಿಂದ ಅನೇಕ ಜನರು ರಾಮ ಮಂದಿರ ನೋಡಲು ಬರುತ್ತಿದ್ದಾರೆ.

ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ, ಹರಿದು ಬಂದ ಜನಸಾಗರ
ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಸಾಧು ಶ್ರೀನಾಥ್​

Updated on:Sep 25, 2023 | 6:20 PM

ದೇಶದೆಲ್ಲೆಡೆ ಗಣೇಶ ಪ್ರತಿಷ್ಠಾಪಣೆ ಅಲಂಕಾರ ಜೋರಾಗಿ ನಡೆಯುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಗಣೇಶ ಹಬ್ಬದಂದು ರಾಮಮಂದಿರ ನೋಡೋಕೆ ಸಾವಿರಾರು ಜನರ ದಂಡೆ ಹರಿದು ಬಂದಿದೆ. ಗಣೇಶ ಹಬ್ಬದ ಪ್ರಯುಕ್ತ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಾಮ ಮಂದಿರ, ಶತಮಾನಗಳ ಇತಿಹಾಸ ಸಾರುವುದರ ಜೊತೆಗೆ, ರಾಮನ ಹಿನ್ನೆಲೆಯನ್ನ ತಿಳಿಯಬಹುದು, ರಾಮ ಮಂದಿರ ನೋಡಲು ಎರಡು ಕಣ್ಣು ಸಾಲದು ಎಂಬಂತಿತ್ತು.

ಎಸ್ ಥೇಟ್ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮ ಮಂದಿರ ಶೈಲಿಯ ಮಂದಿರ… ರಾಮನ ಇತಿಹಾಸ ಸಾರುತ್ತಿರುವ ಚಿತ್ರಗಳು… ರಾಮ ಜನ್ಮ ಭೂಮಿಗಾಗಿ ನಡೆದ ಹೋರಾಟದ ಸಂಪೂರ್ಣ ಚಿತ್ರಣ… ಇದನ್ನೆಲ್ಲಾ ನೋಡಲು ಹರಿದು ಬರುತ್ತಿರುವ ಜನಸಾಗರ.. ಎಸ್ ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ತಾಲೂಕು ಕ್ರಿಡಾಂಗಣದಲ್ಲಿ… ವಂದೆ ಮಾತರಂ ಸೇವಾ ಸಂಸ್ಥೆಯಿಂದ ಗಣೇಶ ಪ್ರತಿಷ್ಠಾಪನೆಯ ಜೊತೆಗೆ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಗಣೇಶನ ಹಬ್ಬದ ಸಂದರ್ಭದಲ್ಲಿ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ!

ಹಿಂದೂಗಳ ಕನಸಿನ ರಾಮ ಮಂದಿರ ಯಾವ ರೀತಿ ನಿರ್ಮಾಣ ಮಾಡಲಾಗುತ್ತಿದೆ. ರಾಮ ಯಾರೂ ರಾಮ ಜನ್ಮ ಭೂಮಿಗಾಗಿ ಯಾವ ರೀತಿ ಹೋರಾಟ ಮಾಡಲಾಯಿತು ಎಂಬುವುದರ ಡಿಟೆಲ್ ಚಿತ್ರಣ ಹಾಗೂ ಲೇಖನಗಳ ಜೊತೆಗೆ ಜನ ಮನ ಸೆಳೆಯುವ ಸುಂದರ ದಿಪಾಲಂಕಾರದ ದೇವಸ್ಥಾನ ಇಲ್ಲಿ ನಿರ್ಮಾಣ ಮಾಡಲಾಗಿದೆ.

ಸಾರ್ವಜನಿಕರ ಮನ ಸೆಳೆಯುವುದರ ಜೊತೆಗೆ ಇತಿಹಾಸದ ತಿಳಿ ಹೇಳುವ ಈ ಕಲಾಕೃತಿಯನ್ನು, ಫೈಬರ್ ಹಾಗೂ ಕಬ್ಬಿಣದ ಮೂಲಕ ನಿರ್ಮಾಣ ಮಾಡಲಾಗಿದ್ದೂ, ಬರೊಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ಬಂದ ಪ್ರತಿಯೊಬ್ಬರಿಗೂ ಆಯೋಧ್ಯೆ ರಾಮ ಮಂದಿರದ ಬಗ್ಗೆ ಇರುವ ಭಕ್ತಿ ಇಮ್ಮುಡಿ ಆಗಲು ನೋ ಡೌಟ್.

ಒಟ್ಟಾರೆಯಾಗಿ ಹಾಡು , ಡ್ಯಾನ್ಸ್ , ದಿಪಲಂಕಾರ ಸೇರಿದಂತೆ ಡಿಜೆಗಳ ಮೂಲಕ ಗಣೇಶ ಹಬ್ಬವನ್ನು ಎಲ್ಲ ಕಡೆ ಆಚರಿಸುತ್ತಿದ್ದರೆ, ರಾಣೇಬೆನ್ನೂರಿನಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆ ಹಾವೇರಿ ಅಷ್ಟೆ ಅಲ್ಲದೆ ಶಿವಮೊಗ್ಗ, ದಾವಣಗೆರೆ ಧಾರವಾಡ ಜಿಲ್ಲೆಗಳಿಂದ ಅನೇಕ ಜನರು ರಾಮ ಮಂದಿರ ನೋಡಲು ಬರುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Mon, 25 September 23

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್