ಹಾವೇರಿ: ಇಂದು ರಾಜ್ಯದೆಲ್ಲೆಡೆ ಬಕ್ರೀದ್ (Bakrid) ಹಬ್ಬದ ಸಂಭ್ರಮ. ಈ ಹಬ್ಬದಂದು ಮುಸ್ಲಿಂ ಬಾಂಧವರು ಮಾಂಸಹಾರ ಮಾಡಿ ಸೇವಿಸುತ್ತಾರೆ. ಆದರೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ಮಾತ್ರ ಈ ವರ್ಷ ಮಾಂಸಹಾರ ತ್ಯಜಿಸಿ ಬಕ್ರೀದ್ ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮಸ್ಥರ ನಿರ್ಣಯದಂತೆ ಮಾಂಸಹಾರ ತ್ಯಜಿಸಿ ಸಿಹಿ ತಿಂದು ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ.
ಒಂದೇ ತಿಂಗಳಲ್ಲಿ ಗ್ರಾಮದ ಐವರು ಯುವಕರು ಮೃತಪಟ್ಟ ಹಿನ್ನೆಲೆ ಧರ್ಮಾತೀತವಾಗಿ 12 ದಿನ ಮಾಂಸಹಾರ ತ್ಯಜಿಸಿ ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಲು ಗ್ರಾಮಸ್ಥರು ನಿರ್ಣಯಿಸಿದ್ದರು. ಹಾಗಾಗಿ ಕಳೆದ 10 ದಿನಗಳಿಂದ ಮಾಂಸಹಾರ ತ್ಯಜಿಸಿದ್ದಾರೆ. ಬಕ್ರೀದ್ ಹಬ್ಬವಾದ ಇಂದು ಸಿಹಿ ತಿಂದು ಸರಳವಾಗಿ ಮುಸ್ಲಿಂ ಬಾಂಧವರು ಆಚರಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ನಿವಾಸಕ್ಕೆ ಬೆನ್ಜ್ ಕಾರಿನಲ್ಲಿ ಬಂತು ಬಕ್ರೀದ್ ಬಿರಿಯಾನಿ
ಬಕ್ರೀದ್ ಹಬ್ಬದ ಹಿನ್ನೆಲೆ ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಲೆಕ್ಕಪತ್ರ ನಿರ್ವಹಣೆ ವಿಚಾರವಾಗಿ ಯುವಕರು ಬಡಿದಾಡಿಕೊಂಡಿರುವಂತಹ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಈದ್ಗಾ ಮೈದಾನದಲ್ಲಿ ನಡೆದಿದೆ. ಈದ್ಗಾ ಮೈದಾನದ ನಿರ್ವಹಣೆಗಾಗಿ ವಂತಿಕೆ ಸಂಗ್ರಹ ವೇಳೆ ಮಾತಿಗೆ ಮಾತು ಬೆಳೆದು ಮುಖಂಡರು ಕೈ ಕೈ ಮಿಲಾಯಿಸಿದ್ದಾರೆ.
ಇದನ್ನೂ ಓದಿ: ಗಾಡಿ ತೊಳೆದು ಬರುವುದರೊಳಗೆ ಪತ್ನಿ, ಮಗಳು ಮಾಯ: ಬ್ರಕೀದ್ ದಿನವೇ ಅಫ್ತರ್ ಹುಸೇನ್ಗೆ ಶಾಕ್
ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಮುಖಂಡರು ಗಲಾಟೆ ಮಾಡಿಕೊಂಡಿದ್ದು, ಮುಸ್ತಾಫ್ ಅಹ್ಮದ್ ಖಾಜಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ರಟ್ಟಿಹಳ್ಳಿ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:28 pm, Thu, 29 June 23